ಟೋಮ್ಯಾಟೋ ಬೆಳೆದು ಕೋಟ್ಯಾಧಿಪತಿಯಾದ!
– ಪುಣೆಯಲ್ಲಿ ಸತತ ನಷ್ಟ ಅನುಭವಿಸಿದ್ದ ರೈತ ಕುಬೇರ
– ಜೈಲಲ್ಲೇ ಕೊಲೆ ಆರೋಪಿಗಳಿಗೆ ಲವ್: ಅಲ್ಲೇ ಮದುವೆ!
NAMMUR EXPRESS NEWS
ಪುಣೆ: ಟೋಮ್ಯಾಟೋ ಬೆಳೆದ ರೈತನೊಬ್ಬ ಒಂದೇ ತಿಂಗಳಿನಲ್ಲಿ ಬಡ ರೈತ ಕೋಟ್ಯಾಧಿಪತಿಯಾಗಿದ್ದಾನೆ.
ಕೆಲ ದಿನಗಳ ಹಿಂದೆ ಕರ್ನಾಟಕದ ಕೋಲಾರದ ರೈತನೊಬ್ಬ 2000 ಕ್ರೇಟ್ ಟೋಮ್ಯಾಟೋ ಮಾರಿ 38 ಲಕ್ಷ ಗಳಿಸಿದ್ದು ಸುದ್ದಿಯಾಗಿತ್ತು. ಇದನ್ನು ಮೀರಿಸಿರುವ ಮಹಾರಾಷ್ಟ್ರದ ಪುಣ್ಯ ರೈತನೊಬ್ಬ ಈಗ ರಾಷ್ಟ್ರದ ಚರ್ಚೆಯ ಕೇಂದ್ರ ಬಿಂದುವಾಗಿದ್ದಾನೆ.
ಒಂದೇ ತಿಂಗಳಿನಲ್ಲಿ 13000 ಕ್ರೇಟ್ ಟೋಮ್ಯಾಟೋ ಮಾರಿರುವ ತುಕಾರಾಂ ಭಾಗೋಜಿ ಗಾಯಕರ ಎಂಬ ರೈತ ಒಂದೂವರೆ ಕೋಟಿ ರೂಪಾಯಿ ಹಣ ಸಂಪಾದಿಸಿದ್ದಾನೆ. ತಿಂಗಳುಗಳ ಹಿಂದೆ ಬಿತ್ತಿದ್ದ ಟೊಮೆಟೊ ಬೀಜಗಳು, ಈತನಿಗೆ ಜಾಕ್ಪಾಟ್ ತಂದುಕೊಟ್ಟಿವೆ.
18 ಎಕರೆ ಜಮೀನು ಹೊಂದಿರುವ ತುಕಾರಾಂ ಈ ಬಾರಿ 12 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದರು. ಟೊಮ್ಯಾಟೋ ಕೃಷಿಯಲ್ಲಿ ಪುತ್ರ ಮತ್ತು ಸೊಸೆ ಕೂಡ ಇವರಿಗೆ ನೆರವು ನೀಡುತ್ತಿದ್ದಾರೆ. ಇಲ್ಲಿವರೆಗೆ ಹಲವು ಬಾರಿ ಲಾಭ ನಷ್ಟ ನೋಡಿರುವ ತುಕಾರಾಂ ಈ ಬಾರಿ ಮಾತ್ರ ಒಂದೇ ಏಟಿನಲ್ಲಿ ಕುಬೇರರಾಗಿಬಿಟ್ಟಿದ್ದಾರೆ.
ಜೈಲಲ್ಲೇ ಕೊಲೆ ಆರೋಪಿಗಳಿಗೆ ಲವ್: ಅಲ್ಲೇ ಮದುವೆ!
ಕೊಲೆ ಕೇಸ್ ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳು ಜೈಲಿನಲ್ಲೇ ಪರಸ್ಪರ ಮಾತನಾಡಿ ಪ್ರೇಮಾಂಕುರಗೊಂಡು ಜೈಲಿನಲ್ಲೇ ಮದುವೆ ಆದ ಅಪರೂಪದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಬಿರ್ ಭೂಮ್ ನ ನಿವಾಸಿ ಸಹನಾರಾ ಖಾತುನ್ ಹಾಗೂ ಅಬ್ದುಲ್ ಹಸೀಮ್ ಮದುವೆಯಾದ ಜೋಡಿ. ವಧು ಖಾತುನ್ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದರೆ, ಅಸ್ಸಾಂ ಮೂಲದ ಅಬ್ದುಲ್ ಹಸೀಮ್ ಎಂಟು ವರ್ಷಗಳಿಂದ ಬಂಧನದಲ್ಲಿದ್ದಾರೆ.
ಪಶ್ಚಿಮ ಬಂಗಾಳದ ಬರ್ಧಮಾನ್ ಜಿಲ್ಲಾ ಸುಧಾರಣಾ ಕೇಂದ್ರವು ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದೆ. ಜೈಲಿನಲ್ಲಿ ಮಾಡಿದ ಭೇಟಿಯು ಪರಿಚಯಕ್ಕೆ ತಿರುಗಿ ಪರಿಚಯ ಸ್ನೇಹವಾಗಿ, ಕೊನೆಗೆ ಮದುವೆಯಲ್ಲಿ ಸಮಾಪ್ತಿಗೊಂಡಿತು. ಮದುವೆಯಾದ ನೂತನ ವಧು–ವರರಿಗೆ ಜೈಲು ಅಧಿಕಾರಿಗಳು ಐದು ದಿನಗಳ ಕಾಲ ಪೆರೋಲ್ ನೀಡಿದೆ.
ಇದನ್ನೂ ಓದಿ : ತುಂಬಿದ ನದಿಯಲ್ಲಿ ಮರ ಹಿಡಿದು ಜೀವ ಉಳಿಸಿಕೊಂಡ ಅಜ್ಜಿ!
HOW TO APPLY : NEET-UG COUNSELLING 2023