- ನಲಪಾಡ್, ಮಂಜುನಾಥ್ ಇತರರು ಕಣಕ್ಕೆ
- ಆನ್ಲೈನ್ ಅಥವಾ ನೇರ ನೇಮಕ..?
ಬೆಂಗಳೂರು: ರಾಜ್ಯ ಯುವ ಘಟಕದ ಅಧ್ಯಕ್ಷರು ಮತ್ತಿತರ ಪದಾಧಿಕಾರಿಗಳ ಚುನಾವಣೆ ಈ ಬಾರಿ ಆನ್ ಲೈನ್ ನಲ್ಲಿ ನಡೆಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಸಂಕ್ರಾಂತಿ ವೇಳೆಗೆ ಚುನಾವಣೆ ನಡೆಯಲಿದೆ ಎಂದು ಹೇಳಲಾಗಿದೆ.
ಈಗ ಹಾಲಿ ಅಧ್ಯಕ್ಷರಾಗಿರುವ ಬಸವನ ಗೌಡ ಬಾದರ್ಲಿ ಅಧಿಕಾರವಧಿ ಪೂರ್ಣಗೊಂಡ ಬಳಿಕ ಮಾರ್ಚ್ 2020ರಿಂದಲೂ ಈ ಹುದ್ದೆ ಖಾಲಿಯಿದೆ. ಒಂಬತ್ತು ತಿಂಗಳ ನಂತರ, ಈ ಹುದ್ದೆಗೆ ಚುನಾವಣೆ ನಡೆಸಬೇಕೆ ಅಥವಾ ಯುವ ವಿಭಾಗಕ್ಕೆ ಅಧ್ಯಕ್ಷರನ್ನು ನೇಮಿಸಬೇಕೆ ಎಂಬ ಸಂದಿಗ್ಧ ಸ್ಥಿತಿಯಲ್ಲಿದೆ ಎಐಸಿಸಿ ಇದೆ. ಮಾರ್ಚ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರನ್ನು ಎಐಸಿಸಿ ನೇಮಕ ಮಾಡಿತ್ತು. ಆದರೆ, ಇತರ ಪದಾಧಿಕಾರಿಗಳನ್ನು ನೇಮಕ ಮಾಡಿರಲಿಲ್ಲ.
ರಾಜ್ಯದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು 6.5 ಲಕ್ಷ ಮತದಾರರು ಅರ್ಹರಿದ್ದಾರೆ. ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಹೆಚ್.ಎಸ್.ಮಂಜುನಾಥ್, ಶಾಸಕ ಎನ್ ಎ ಹ್ಯಾರಿಸ್ ಪುತ್ರ ನಳಪಾಡ್, ಮಾಜಿ ಸಚಿವ ಎಂಆರ್ ಸೀತಾರಾಮ್ ಅವರ ಪುತ್ರ ರಕ್ಷ ರಾಮಯ್ಯ, ಮಿಥುನ್ ರೈ ಮತ್ತಿತರರು ಆಕಾಂಕ್ಷಿಗಳಿದ್ದಾರೆ.
ಆಕಾಂಕ್ಷಿಗಳನ್ನು ಸಂದರ್ಶನಕ್ಕಾಗಿ ದೆಹಲಿಗೆ ಕರೆಯಲಾಗಿದ್ದು, ಅವರೊಂದಿಗೆ ಸಂವಾದ ನಡೆಸಿದ ಬಳಿಕ ಚುನಾವಣೆ ನಡೆಸಬೇಕೆ ಅಥವಾ ನಾಮನಿರ್ದೇಶನ ಮಾಡಬಹುದೇ ಎಂಬುದರ ಬಗ್ಗೆ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.