ಶಿವಮೊಗ್ಗ ಲೋಕಸಭಾ ಕ್ಷೇತ್ರ ವಿಶೇಷ
– ಜೊಮೊಟೋ ಡೆಲಿವರಿ ಬಾಯ್, ಸೌದೆ ವ್ಯಾಪಾರಿ ಸ್ಪರ್ಧೆ!
– ಅರ್ಚಕರು, ಡ್ರೈವರ್, ನಿರುದ್ಯೋಗಿ ಕೂಡ ಕಣದಲ್ಲಿ!
– ಅಭ್ಯರ್ಥಿಗಳ ಉದ್ಯೋಗ ಏನೇನು.. ಇಲ್ಲಿದೆ ಇಂಟರೆಸ್ಟ್ ಸ್ಟೋರಿ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಲೋಕ ಸಭಾ ಕಣ ಇದೀಗ ಭಾರೀ ಕುತೂಹಲ ಘಟ್ಟಕ್ಕೆ ಬಂದಿದೆ. ಬಿಜೆಪಿಯಿಂದ ಹಾಲಿ ಸಂಸದ ರಾಘವೇಂದ್ರ, ಕಾಂಗ್ರೆಸ್ ಪಕ್ಷದಿಂದ ಶಿವರಾಜ್ ಕುಮಾರ್ ಪತ್ನಿ, ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ನಾಯಕರಾಗಿದ್ದ ಈಶ್ವರಪ್ಪ ಸ್ಪರ್ಧೆ ಮಾಡಿದ್ದಾರೆ. ಈ ಮೂವರು ಈಗಾಗಲೇ ಎಲ್ಲರಿಗೂ ಪರಿಚಯ. ಆದರೆ ಕಣದಲ್ಲಿ ಇನ್ನು 20 ಮಂದಿ ಇದ್ದಾರೆ. ಅವರು ಯಾರು, ಅವರ ವೃತ್ತಿ ಏನು ಇಲ್ಲಿದೆ ಡೀಟೇಲ್ಸ್.
ಜೊಮೊಟೊ ಬಾಯ್ ಸ್ಪರ್ಧೆ
ಶಿವಮೊಗ್ಗ ಚುನಾವಣೆಯಲ್ಲಿ ತುಮಕೂರಿನ ಜೊಮ್ಯಾಟೊ ಡೆಲಿವರಿ ಬಾಯ್ ಶಿವಮೊಗ್ಗದಲ್ಲಿ ಕಣಕ್ಕಿಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿ ಬಂಡಿ ರಂಗನಾಥ ತುಮಕೂರಿನಲ್ಲಿ ಜೊಮ್ಯಾಟೊ ಡೆಲಿವರಿ ಬಾಯ್ ಆಗಿದ್ದಾರೆ. ಇವರ ಬಳಿ ಇರುವುದು ಸುಮಾರು ಐವತ್ತು ಸಾವಿರ ರೂಪಾಯಿಗಳು ಮಾತ್ರ, ಆಸ್ತಿ ಕಾಲಂನಲ್ಲಿ ಇವರು ಏನೂ ಇಲ್ಲ ಎಂದು ಬರೆದುಕೊಂಡಿದ್ದಾರೆ. ಆದಾಗ್ಯು ಇವರ ಸ್ಪರ್ಧೆ ಪ್ರಜಾಪ್ರಭುತ್ವದ ವಿಶಿಷ್ಟತೆಯನ್ನು ಸಾರುತ್ತಿದೆ.
ಅರ್ಚಕರು, ಸೌದೆ ವ್ಯಾಪಾರಿ, ಡ್ರೈವರ್, ನಿರುದ್ಯೋಗಿ ಕೂಡ ಕಣದಲ್ಲಿ!
ಫುಡ್ ಡೆಲಿವರಿ ಬಾಯ್, ಪುರೋಹಿತರು, ಸೌದೆ ವ್ಯಾಪಾರಿ, ಕಲಾವಿದ, ಕಾರು ಚಾಲಕ, ಕೃಷಿಕ, ಕೂಲಿ ಕಾರ್ಮಿಕ, ಓರ್ವ ನಿರುದ್ಯೊಗಿ ಕೂಡ ಸ್ಪರ್ಧಿಸುತ್ತಿದ್ದಾರೆ. ಪಕ್ಷೇತರ ಅಭ್ಯರ್ಥಿ ಪೂಜಾ ಅಣ್ಣಯ್ಯ ತಮ್ಮನ್ನು ನಿರುದ್ಯೋಗಿ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಅಭ್ಯರ್ಥಿಗಳ ವೃತ್ತಿ ಹಾಗೂ ಉದ್ಯೋಗ ಏನೇನು?
* ಗೀತಾ ಶಿವರಾಜ ಕುಮಾರ್ | ವ್ಯವಹಾರ
* ಬಿ.ವೈ.ರಾಘವೇಂದ್ರ | ಕೃಷಿ, ಶಿಕ್ಷಣ ಮತ್ತು ವ್ಯವಹಾರ
* ಕೆ.ಎಸ್ ಈಶ್ವರಪ್ಪ | ವ್ಯಾಪಾರ
* ಎಸ್.ಕೆ ಪ್ರಭು | ವ್ಯವಸಾಯ
* ಅರುಣ ಕಾನಹಳ್ಳಿ | ರೈತ , ಕಾರ್ಮಿಕ
* ಎಡಿ ಶಿವಪ್ಪ | ಎಲ್ಐಸಿಯಲ್ಲಿ ಮುಖ್ಯ ಸಲಹೆಗಾರ
* ಮೊಹಮ್ಮದ್ ಯೂಸೂಫ್ ಖಾನ್ | ಸೌದೆ ವ್ಯಾಪಾರ
* ಜಿ.ಜಯದೇವ | ಚಾಲಕ
* ಡಿ.ಎಸ್ ಈಶ್ವರಪ್ಪ | ವ್ಯವಸಾಯ
* ಪೂಜಾ ಅಣ್ಣಯ್ಯ | ನಿರುದ್ಯೋಗಿ
* ಇ ಹನುಮಂತ ನಾಯಕ | ಕೃಷಿ ಕಾರ್ಮಿಕ
* ಚಂದ್ರಶೇಖರ್ ಹೆಚ್ಸಿ | ಕೃಷಿ ಮತ್ತು ವ್ಯವಹಾರ
* ಬಂಡಿ ರಂಗನಾಥ | ಜೊಮೊಟೋ ಡಿಲೆವರಿ ಬಾಯ್
* ಸಂದೇಶ್ ಶೆಟ್ಟಿ | ಕಲಾವಿದ
* ಶ್ರೀಪತಿ ಭಟ್ | ಪೌರೋಹಿತ್ಯ
* ಇಮ್ತಿಯಾಜ್ ಎ ಅತ್ತಾರ್ | ಲಾಜಿಸ್ಟಿಕ್ಸ್ ಮತ್ತು ಟ್ರೇಡಿಂಗ್
* ರವಿಕುಮಾರ್ ಎನ್ | ವ್ಯವಸಾಯ
* ಹೆಚ್ ಸುರೇಶ್ ಪೂಜಾರಿ | ಕ್ಯಾಂಟೀನ್ ವ್ಯಹವಾರ
* ಶಿವರುದ್ರಯ್ಯ ಸ್ವಾಮಿ | ಆದಾಯ ತೆರಿಗೆ ಸಲಹೆಗಾರರು
* ಜಾನ್ ಬೆನ್ನಿ | ಡ್ರೈವಿಂಗ್ ಸ್ಕೂಲ್ ಮತ್ತು ವಾಯು ಮಾಲಿನ್ಯ ತಪಾಸಣಾ ಕೇಂದ್ರ
* ಗಣೇಶ್ ಬಿ| ಪತ್ರಿಕೋದ್ಯಮ, ವ್ಯಾಪಾರ, ಕೃಷಿ
* ಕುಣಾಜೆ ಮಂಜುನಾಥ ಗೌಡ | ಕೃಷಿ
* ಎನ್ವಿ ನವೀನ್ ಕುಮಾರ್ | ಸ್ವ ಉದ್ಯೋಗ