ದೆಹಲಿ ಗಣರಾಜ್ಯೋತ್ಸವ ಪರೇಡಲ್ಲಿ ರಿಪ್ಪಿನಪೇಟೆ ಹುಡುಗಿಯರು!
– ರಿಪ್ಪನ್ಪೇಟೆ ಡಿಗ್ರಿ ಕಾಲೇಜು ವಿದ್ಯಾರ್ಥಿಗಳ ಡೊಳ್ಳು ಕುಣಿತ
– ರಾಜಧಾನಿಯಲ್ಲಿ ಮಲೆನಾಡ ವಿದ್ಯಾರ್ಥಿನಿಯರ ಸದ್ದು
– ಸಾಗರ ಯುತ್ ಪೋರ್ಸ್ ಅಸೋಸಿಯೇಷನ್ ತಂಡ
NAMMUR EXPRESS NEWS
ರಿಪ್ಪನ್ಪೇಟೆ: ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಕರ್ತವ್ಯ ಪಥ ಗಣರಾಜ್ಯೋತ್ಸವ ಪರೇಡ್ನಲ್ಲಿ ರಿಪ್ಪನ್ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್ನ ವಿದ್ಯಾರ್ಥಿನಿಯರು ಡೊಳ್ಳು ಕುಣಿತ ಕಾರ್ಯಕ್ರಮಕ್ಕೆ ಆಯ್ಕೆ ಕಾರ್ಯಕ್ರಮ ನೀಡಿದ್ದಾರೆ. ಸಾಗರ ಯುತ್ ಪೋರ್ಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ ಡೊಳ್ಳು ಕುಣಿತ ಕಾರ್ಯಕ್ರಮದಲ್ಲಿ ರಿಪ್ಪನ್ಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜ್ನ ವಿದ್ಯಾರ್ಥಿನಿಯರಾದ ಕು. ವಿದ್ಯಾ, ಕು. ರಾಧಿಕಾ, ಕು.ಲಾವಣ್ಯ ಮತ್ತು ಕೋಟೆತಾರಿಗದ ಕು. ಅಂಕಿತಾ ಗಣರಾಜ್ಯೋತ್ಸವ ಪರೇಡ್ನಲ್ಲಿ ಪಾಲ್ಗೊಂಡು ತಮ್ಮ ಕಲಾಪ್ರದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಡೊಳ್ಳು ಕುಣಿತಕ್ಕೆ ಟಾಕಪ್ಪ ಕಣ್ಣೂರು ಮತ್ತು ಸಾಗರ ಯುತ್ ಪೋರ್ಸ್ ಅಸೋಸಿಯೇಷನ್ ಆಧ್ಯಕ್ಷೆ ಪುಷ್ಪಾವತಿ ಇವರುಗಳ ಮಾರ್ಗದರ್ಶನ ನೀಡಿದ್ದು ಇದಕ್ಕೆ ಕಾಲೇಜ್ ಪ್ರಾಚಾರ್ಯರು ಮತ್ತು ಪೋಷಕವರ್ಗ ಮತ್ತು ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.