ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾದರಿ ಹೆಜ್ಜೆ
– ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಿ.ಎನ್.ಸಿ ಪ್ರಮಾಣ ಪತ್ರ ವಿತರಣೆಯ ಜತೆಗೆ ಜೀವನ ಪಾಠ
– ಪೊಲೀಸ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಕಾನೂನು ಮಾಹಿತಿ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆಯಾದ ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇತ್ತೀಚಿಗೆ ಸಂಸ್ಥೆಯ ಎಲ್ಲಾ ವಿಧ್ಯಾರ್ಥಿಗಳಿಗೂ ಸಿ.ಎನ್.ಸಿ ಟ್ರೈನಿಂಗ್ ನಲ್ಲಿ ಮಾನ್ಯತೆ ಪಡೆದ ಪ್ರಮಾಣ ಪತ್ರ ವಿತರಿಸಲಾಯಿತು. ಈ ಶುಭ ಸಮಾರಂಭಕ್ಕೆ ಸಂಸ್ಥೆಯ ಮುಖ್ಯಸ್ಥರಾದ ಮಹಮದ್ ಷಫಿ ಮತ್ತು ಮುಖ್ಯ ಅತಿಥಿಯಾಗಿ ಶಿವಮೊಗ್ಗದ ಕೋಟೆ ರಸ್ತೆ ವಿಭಾಗದ ಆರಕ್ಷಕ ಠಾಣೆಯ ನಿರೀಕ್ಷಕರಾದ ನಾಗೇಶ್, ಶ್ರೀನಿವಾಸ್ ಹಾಗೂ ರವಿ ಕುಮಾರ್ ಆಗಮಿಸಿದ್ದರು.
ವಿದ್ಯಾರ್ಥಿಗಳ ಕುರಿತು ಸಭೆಯಲ್ಲಿ ಮಾತನಾಡಿದ ರವಿ ಕುಮಾರ್ ಅವರು ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳಬೇಡಿ. ಪ್ರೀತಿ ಪ್ರೇಮ ಎಂಬ ಆಟಕ್ಕೆ ಬಿದ್ದು ಜೀವನದ ಅತ್ಯಮೂಲ್ಯ ಸಮಯ ಕಳೆಯದಂತೆ ನೋಡಿಕೊಳ್ಳಿ ಎಂದರು.
ಪಿ.ಎಸ್.ಐ ನಾಗೇಶ್ ಮತ್ತು ಶ್ರೀನಿವಾಸ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಸಂಸ್ಥೆಯ ಸಿ.ಎನ್.ಸಿ. ಪ್ರೋಗ್ರಾಂ ತರಬೇತುದಾರರಾದ ಷಣ್ಮುಖ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಹೀದ್, ನಾಜಿರ್ ಸೇರಿದಂತೆ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದರು. ಅಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಶಿವಮೊಗ್ಗದ ಪ್ರಮಾಣಪತ್ರ ವಿತರಣಾ ಸಮಾರಂಭವು ವಿಧ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವಲ್ಲಿ ಹಾಗೂ ಮುಂದಿನ ಭವಿಷ್ಯಕ್ಕೆ ಪ್ರೇರಣೆ ನೀಡುವಲ್ಲಿ ಯಶಸ್ವಿಯಾಯಿತು.