ಅಡಿಕೆಗೆ ಬಂಪರ್ ಬೆಲೆ: 79 ಸಾವಿರ ದಾಟಿದ ಸರಕು!
– ಮಲೆನಾಡು, ಕರಾವಳಿ, ಬಯಲು ಸೀಮೆ ಎಲ್ಲಾ ಕಡೆ ದರ ಏರಿಕೆ
– ಬಯಲು ಸೀಮೆ ರೈತರಿಗೆ ಈ ಬಾರಿ ಒಳ್ಳೆ ಬೆಲೆ!
– ರಾಶಿ 50 ಸಾವಿರದತ್ತ: ಇನ್ನು ಏನಾಗುತ್ತೆ ಬೆಲೆ?
NAMMUR EXPRESS NEWS
ಶಿವಮೊಗ್ಗ/ ಚಿಕ್ಕಮಗಳೂರು: ಮಲೆನಾಡಿನ ವಾಣಿಜ್ಯ ಬೆಳೆಯಾದ ಅಡಿಕೆಗೆ ಬಂಪರ್ ಬೆಲೆ ಬಂದಿದೆ. ಜನವರಿ ತಿಂಗಳಲ್ಲಿ ಸತತ ಏರಿಕೆ ಬಳಿಕ ಜನವರಿ 17ರಂದು ಹಸ (ಸರಕು) 79 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿದೆ. ಹೊಸ ವರ್ಷ 2024ರ ಆರಂಭದಿಂದಲೂ ಏರಿಮುಖದಲ್ಲಿರುವ ಅಡಿಕೆ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ಈ ವರ್ಷದ ಕೊಯ್ಲು ಕೆಲವೆಡೆ ನಡೆಯುತ್ತಿದೆ. ಬಯಲು ಸೀಮೆಯಲ್ಲಿ ಸಂಪೂರ್ಣವಾಗಿದೆ. ಸ್ವಲ್ಪ ದಿನ ಇಟ್ಟು ಮಾರಾಟ ಮಾಡುವವರಿಗೆ ಮುಂದಿನ ಒಳ್ಳೆಯ ರೇಟ್ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ದಾವಣಗೆರೆ, ಚಿತ್ರದುರ್ಗದಲ್ಲೂ ಒಳ್ಳೆ ಬೆಲೆ!
ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 50, 299 ರೂಪಾಯಿ ಇದ್ದು, ಕನಿಷ್ಠ ಬೆಲೆ 47,012 ರೂ.ಗಳಾಗಿದೆ. 2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು.
ಆದರೆ, ಅಕ್ಟೋಬರ್ ಕೊನೆಯ ವಾರ ಮತ್ತೆ 47,800 ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು.ಇದೀಗ 2024 ಜನವರಿ ತಿಂಗಳಲ್ಲಿ 49 ಸಾವಿರ ಗಡಿ ತಲುಪಿದೆ. ದಾವಣಗೆರೆ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜ.17ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 47,012 ರೂ, ಗರಿಷ್ಠ ಬೆಲೆ 50,299 ಹಾಗೂ ಸರಾಸರಿ ಬೆಲೆ 49,110 ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 37,000 ರೂ.ಗೆ ಮಾರಾಟವಾಗಿದೆ.
ಮಲೆನಾಡಲ್ಲಿ ಅಡಿಕೆ ದರ ಎಷ್ಟಿದೆ?
ಬೆಟ್ಟೆ- 26169-55599
ಗೊರಬಲು – 15133-37599
ರಾಶಿ – 31089-49509
ಸರಕು- 56669-79510
ಸಿಪ್ಪೆಗೋಟು – 21099
ಚಾಲಿ – 32989-38019
ಕೋಕಾ 33989
ಕರೆ ಗೋಟು – 36439
ಬಿಳೆ ಗೋಟು – -27739