ಬಂಗಾರಪ್ಪ ಪ್ರತಿಮೆ ಉದ್ಘಾಟನೆಗೆ ಕ್ಷಣಗಣನೆ
– ಸೊರಬದ ಬಂಗಾರಧಾಮದಲ್ಲಿ ಬಂಗಾರಪ್ಪ ಅವರ ಸ್ಮಾರಕ: ಇಂದು ಪ್ರತಿಮೆ ಅನಾವರಣ
– ಬಂಗಾರಪ್ಪ ಅಭಿಮಾನಿಗಳಿಂದ ನಾಯಕನ ನೆನಪು
NAMMUR EXPRESS NEWS
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಸ್ಮಾರಕವನ್ನು ಸೊರಬದ ಬಂಗಾರಧಾಮದಲ್ಲಿ ಸ್ಥಾಪಿಸಲಾಗಿದ್ದು, ಅವರ ಪುಣ್ಯ ಸ್ಮರಣೆ ದಿನವಾದ ಡಿ.26 ಮಂಗಳವಾರ ಸ್ಮಾರಕ ಲೋಕಾರ್ಪಣೆ ಮತ್ತು ಎಸ್ ಬಂಗಾರಪ್ಪನವರ 12 ನೇ ವರ್ಷದ ಪುಣ್ಯ ಸ್ಮರಣೆಯನ್ನು ಆಯೋಜಿಸಲಾಗಿದೆ. ಬಂಗಾರಪ್ಪ ಅಭಿಮಾನಿಗಳು ಮತ್ತು ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಬಂಗಾರಪ್ಪ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ಮುಂದೆ ಬಂಗಾರಧಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಬಂಗಾರ ಪ್ರಶಸ್ತಿಯನ್ನು ನೀಡುವ ಯೋಜನೆಯಿದೆ ಎಂದು ಬಂಗಾರಪ್ಪ ವಿಚಾರ ವೇದಿಕೆಯ ನಾಗರಾಜ್ ಮೂರ್ತಿ ತಿಳಿಸಿದ್ದಾರೆ.
ಪ್ರತಿ ವರ್ಷ ಅರಮನೆ ಮೈದಾನ ದಲ್ಲಿ ನಡೆಸುತ್ತಿದ್ದ ಈ ಕಾರ್ಯಕ್ರಮ ಇನ್ಮುಂದೆ ಬಂಗಾರಧಾಮದಲ್ಲಿ ಮುಂದುವರೆಯಲಿದೆ ಎಂದು ಬಂಗಾರಪ್ಪ ವಿಚಾರ ವೇದಿಕೆಯ ಅದ್ಯಕ್ಷ ವೇಣುಗೋಪಾಲ್ ಹೇಳಿದ್ದಾರೆ. ಧೀಮಂತ ನಾಯಕ, ರೈತರ ಪಂಪ್ ಸೆಟ್ ಗೆ ಉಚಿತ ಕರೆಂಟ್ ನೀಡಿದ ರೈತ ನಾಯಕ, ಬಡವರ, ಶೋಷಿತರ, ನೊಂದವರ, ಹಿಂದುಳಿದ ವರ್ಗದ ಜನ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಎಸ್ ಬಂಗಾರಪ್ಪನವರ 12ನೇ ವರ್ಷದ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು.