HSRP ನಂಬರ್ ಪ್ಲೇಟ್: ಎಲ್ಲಿ ಹಾಕಿಸಬೇಕು? ಯಾರಿಗೆ ಕೇಳಬೇಕು?
– ಆನ್ಲೈನ್ ಪ್ಲೇಟ್ ಹೆಸರಲ್ಲಿ ವಂಚನೆ: ಸ್ಪಷ್ಟ ಮಾಹಿತಿ ನೀಡದ ಇಲಾಖೆ
– ವಂಚಕರ ಖಾತೆಗೆ ಹಣ ಹಾಕಿ ಮೋಸ ಹೋಗದಿರಿ ಹುಷಾರ್!
NAMMUR EXPRESS SPECIAL
ಶಿವಮೊಗ್ಗ/ ಬೆಂಗಳೂರು: ಕೇಂದ್ರ ಸರ್ಕಾರ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಿದೆ. ಆನ್ ಲೈನ್ ನಲ್ಲಿ ಹಣ ಕಟ್ಟಿ ಈ ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಜಾಹೀರಾತುಗಳನ್ನು ಪ್ರಕಟಿಸುತ್ತಿದೆ. ಆದರೆ ಈ ಪ್ಲೇಟ್ ಎಲ್ಲಿ ಹಾಕಬೇಕು, ಅಧಿಕೃತ ಯಾರು? ಎಲ್ಲಿಗೆ ಹೋಗಬೇಕು ಎಂಬ ಮಾಹಿತಿ ಇನ್ನು ಸ್ಪಷ್ಟ ಆಗಿಲ್ಲ. ಈಗಾಗಲೇ ಅಂತಿಮ ದಿನಾಂಕ ಬೇರೆ ಪ್ರಕಟಿಸಿ ಆಗಿದೆ. ಆದ್ರೆ ಬಹುಪಾಲು ವಾಹನ ಮಾಲೀಕರು ಇನ್ನು ಪ್ಲೇಟ್ ಹಾಕಿಸಿಲ್ಲ. ಕಾರಣ ಮಾಹಿತಿ ಕೊರತೆ ಮತ್ತು ಸರಿಯಾದ ಅಧಿಕೃತ ಎಜೆನ್ಸಿ ಇಲ್ಲದಿರುವುದು. ಈ ಪ್ಲೇಟ್ ಹಾಕಿಸಲು ಆನ್ಲೈನ್ ನಲ್ಲಿ ಹಣ ಕಟ್ಟಲು ಪ್ರಯತ್ನಿಸಿ ಸಾವಿರಾರು ಜನ ಮೋಸ ಹೋಗುತ್ತಿದ್ದಾರೆ. ವಂಚಕರು ಆನ್ಲೈನ್ ನಲ್ಲಿ ನಕಲೀ ಖಾತೆ ಗಳನ್ನು ಸೃಷ್ಠಿ ಮಾಡಿದ್ದು, ಸ್ವಲ್ಪ ಯಾಮಾರಿದರೆ ನೀವು ಕಟ್ಟುವ ಹಣ ವಂಚಕರ ಪಾಲಾಗುತ್ತದೆ. ನಕಲಿ HSRP ಖಾತೆ ಗೆ ಹಣ ಕಟ್ಟಿ ಮೋಸ ಹೋಗಿರುವ ಅನೇಕರು ಈ ಬಗ್ಗೆ ದೂರು ನೀಡಿದ್ದಾರೆ. ಆದರೆ ಇಲಾಖೆ ಇನ್ನು ನಿದ್ರೆಯಿಂದ ಎದ್ದಿಲ್ಲ. ಆನ್ ಲೈನ್ ವಂಚಕರ ಬಗ್ಗೆ ಜಾಗ್ರತೆ ವಹಿಸಿ.ಸರ್ಕಾರ ನಕಲಿ ವೆಬ್ ಸೈಟ್ ಮತ್ತು ವಂಚರಿಗೆ ಕಡಿವಾಣ ಹಾಕಬೇಕು ಎಂಬುದು ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮದ ಆಶಯ.
ಪ್ಲೇಟ್ ಅಳವಡಿಕೆ ದಿನಾಂಕ ವಿಸ್ತರಣೆಗೆ ಪಟ್ಟು!
ಡಿ.17 ಪ್ಲೇಟ್ ಅಳವಡಿಕೆಗೆ ಕೊನೆಯ ದಿನಾಂಕ. ಆದರೆ ಬಹುತೇಕರು ಇನ್ನು ಮಾಡಿಸಿಲ್ಲ. ಹಾಗಾಗಿ ಇಲಾಖೆ ಈ ದಿನಾಂಕವನ್ನು ಮುಂದೆ ಹಾಕಬೇಕು. ಹಾಗೂ ಈ ಪ್ರಕ್ರಿಯೆ ಸರಳ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.