ಸೆಕೆಂಡ್ ಹ್ಯಾಂಡ್ ಮೊಬೈಲ್, ಸಿಮ್ ವಿಚಾರಕ್ಕೆ ವಿಚಾರಣೆ!
– ತೀರ್ಥಹಳ್ಳಿ ಬಿಜೆಪಿ ಕಾರ್ಯಕರ್ತನ ಸಾಕ್ಷಿ ಪಡೆದ ಎ. ಎನ್. ಐ
– ಮಾಜಿ ಗೃಹ ಸಚಿವ ಸ್ಫೋಟಕ ಪ್ರತಿಕ್ರಿಯೆ
NAMMUR EXPRESS NEWS
ಶಿವಮೊಗ್ಗ/ಬೆಂಗಳೂರು: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ಎನ್ಐಎ ಸಾಕ್ಷಿಯನ್ನಾಗಿ ಪರಿಗಣಿಸಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮುಜಾಮಿಲ್ಗೆ ಈತ ಮೊಬೈಲ್ ಮಾರಾಟ ಮಾಡಿದ್ದರು. ಮುಜಾಮಿಲ್ ಷರೀಫ್ ಪ್ರಕರಣದ ಮತ್ತೊಬ್ಬ ಆರೋಪಿ ಮುಸಾವೀರ್ಗೆ ಮೊಬೈಲ್ ಸಿಮ್ ಕೊಟ್ಟಿದ್ದ. ಮುಸಾವೀರ್ ಬಳಸಿದ್ದು ಇದೇ ಮೊಬೈಲ್ ಎಂಬ ಅನುಮಾನದ ಮೇಲೆ ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರಾಟ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆ ನಡೆಸಿದೆ. ಮುಜಾಮಿಲ್ ಮೊಬೈಲ್ ಖರೀದಿ ಮಾಡಿದ ಹಿನ್ನೆಲೆಯಲ್ಲಿ ಎನ್ಐಎ ಬಿಜೆಪಿ ಕಾರ್ಯಕರ್ತನ ಸಾಕ್ಷಿಯನ್ನಾಗಿ ಪರಿಗಣಿಸಿ ಕೆಲವೊಂದು ಮಾಹಿತಿಯನ್ನು ಪಡೆದು ಕಳುಹಿಸಿದೆ ಎಂಬ ವಿಚಾರ ಈಗ ತಿಳಿದುಬಂದಿದೆ.
ಮಾಜಿ ಗೃಹ ಸಚಿವ ಸ್ಫೋಟಕ ಪ್ರತಿಕ್ರಿಯೆ
ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿರುವ ಕುರಿತು ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರ ಸಂಬಂಧ ಶುಕ್ರವಾರ ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ಎನ್ಐಎ ವಿಚಾರಣೆಗೆ ಕರೆದೊಯ್ದಿತ್ತು. ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತ ಸೇರಿದ್ದಾನೆ ಎಂಬ ರೀತಿ ಪ್ರಚಾರ ಆಗಿತ್ತು. ಈಗಾಗಲೇ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಮ್ ಖರೀದಿಸುವಾಗ ಫೇಕ್ ಐಡಿ!
ಮತೀನ್ ಎಂಬ ಕ್ರಿಮಿ ಬಿಜೆಪಿ ಕಾರ್ಯಕರ್ತನನ್ನು ವಿಳಾಸ ಬಳಸಿ ಫೇಸ್ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದ. ಈ ಸತ್ಯಾಂಶ ಎನ್ಐಎಗೆ ಗೊತ್ತಾದ ಬಳಿಕ ಆತನನ್ನು ವಾಪಾಸ್ ಕಳುಹಿಸಲಾಗಿದೆ. ಮುಸ್ಲಿಂ ಯುವಕನ ಮೊಬೈಲ್ ಅಂಗಡಿಯಲ್ಲಿ ಸಿಮ್ ಖರೀದಿಸಿದ್ದ 8 ಮಂದಿ ಹಿಂದೂ ಯುವಕರ ಹೆಸರಿನಲ್ಲಿ ಫೇಸ್ಬುಕ್ ಫೇಕ್ ಐಡಿ ಕ್ರಿಯೇಟ್ ಮಾಡಿದ್ದಾನೆ. ಎನ್ಐಎ ಉಳಿದ 8 ಮಂದಿಯನ್ನು ವಿಚಾರಣೆಗೆ ಕರೆಯಬಹುದು. ಕೆಲವು ಅಂಗಡಿಗಳಲ್ಲಿ ಸಿಮ್ ಖರೀದಿ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಎಷ್ಟು ದುರುಪಯೋಗ ಆಗ್ತಿದೆ ಅಂತಾ ಇದರಿಂದ ಗೊತ್ತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಯಾವ ಬಿಜೆಪಿ ಕಾರ್ಯಕರ್ತ ಇಂತಹ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಖಂಡಿತ ಭಾಗಿಯಾಗಲಾರ. ಸಾಮಾನ್ಯ ಕಾರ್ಯಕರ್ತ ಒಳ್ಳೆಯ ಜೀವನ ನಡೆಸುತ್ತಿದ್ದಾನೆ. ಆತ ಒಬ್ಬ ಪೈಂಟರ್, ವಿಚಾರಣೆಯಲ್ಲಿ ಸಹಕರಿಸಿ ಸತ್ಯಾಂಶ ಹೇಳಿದ್ದಾನೆ. ಅಪಾರ್ಥ ಕಲ್ಪಿಸುವ ಪ್ರಚಾರ ಬೇಡ ಎಂಬುದು ನನ್ನ ವಿನಂತಿ ಎಂದು ಮನವಿ ಮಾಡಿದ್ದಾರೆ.