ಬಿಜೆಪಿ ಪಾದಯಾತ್ರೆಯಲ್ಲಿ ಕುಕ್ಕೆ ಪ್ರಶಾಂತ್ & ಟೀಂ ಹೆಜ್ಜೆ
– ಶಿವಮೊಗ್ಗ ಜಿಲ್ಲೆ ಯುವ ಬಿಜೆಪಿ ನಾಯಕತ್ವ: ನೂರಾರು ಮಂದಿ ನಡಿಗೆ
– ವಿಜಯೇಂದ್ರ ಸೇರಿ ಎಲ್ಲಾ ನಾಯಕರ ಜತೆ ಪಾದಯಾತ್ರೆಗೆ ಸಾಥ್
NAMMUR EXPRESS NEWS
ತೀರ್ಥಹಳ್ಳಿ/ ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮೂಡಾ ಮತ್ತು ವಾಲ್ಮೀಕಿ ನಿಗಮದ ಹಣ ದುರುಪಯೋಗದ ಹಗರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ವತಿಯಿಂದ ನಡೆಯುತ್ತಿರುವ ಮೈಸೂರು ಚಲೋ ಪಾದಯಾತ್ರೆಯ 5ನೇ ದಿನವಾದ ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಆದ ಪ್ರಶಾಂತ್ ಕುಕ್ಕೆ ನಿರಂತರವಾಗಿ 5ನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಪಾದಯಾತ್ರೆಯ ನಡುವೆ ರಾಜ್ಯದ ಹಲವಾರು ಮುಖಂಡರು ಹಾಗೂ ನಾಯಕರೊಂದಿಗೆ ಹೆಜ್ಜೆ ಹಾಕುತ್ತಿರುವ ಯುವ ನಾಯಕ ಪ್ರಶಾಂತ್ ಕುಕ್ಕೆ ಅವರು ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಯುವ ಮೋರ್ಚಾ ರಾಜ್ಯಾಧ್ಯಕ್ಷ ದೀರಜ್ ಮುನಿರಾಜು, ಮಾಜಿ ಸಚಿವರಾದ ಅಶ್ವಥ್ ನಾರಾಯಣ್ ಮಾಜಿ ಸಂಸದ ಮುನಿಸ್ವಾಮಿಯವರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ
ಶಿವಮೊಗ್ಗ ಜಿಲ್ಲೆ ಯುವ ಬಿಜೆಪಿ ಚಟುವಟಿಕೆ ನಡಿಗೆ
ಶಿವಮೊಗ್ಗ ಜಿಲ್ಲಾ ಯುವಮೋರ್ಚಾದ ಸದಸ್ಯರು ಸಕ್ರೀಯವಾಗಿ ಮೈಸೂರು ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಅದರ ನೇತೃತ್ವವನ್ನು ಯುವ ನೇತಾರ ಪ್ರಶಾಂತ್ ಕುಕ್ಕೆ ವಹಿಸಿದ್ದಾರೆ.
ಮೈಸೂರು ಚಲೋ ಆರಂಭವಾದಾಗಿಂದ ಈ ದಿನದವರೆಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಪ್ರತಿನಿಧಿಯಾಗಿ ಪಾದಯಾತ್ರೆಯಲ್ಲಿ ಭಾಗಿಯಾದ ಯುವ ನಾಯಕ ಪ್ರಶಾಂತ್ ಕುಕ್ಕೆ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ,ವೈ, ವಿಜಯೇಂದ್ರ ಅವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.
ಶಿವಮೊಗ್ಗ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಯಶಸ್ವಿ ಕಡ್ತುರ್,ಮುಳಬಾಗಿಲು ಗ್ರಾಮ ಪಂಚಾಯಿತಿ ಸದಸ್ಯರಾದ ಅಭಿಲಾಶ್ ಬಾಳೆಕೊಪ್ಪ
ಬಸವಾನಿ ಶ್ರೀಕಾಂತ್, ಕೊಂಡ್ಲುರ್ ಅಭಿನಯರಾಜ್,ಸುದರ್ಶನ್ ಬಾಳೆಕೊಪ್ಪ, ಅಭಿಲಾಷ್ ಹೊಸನಗರ,ದಿನೇಶ್ ಕುಂಟಿಗೆ ,ನಿತಿನ್ ಯಡೂರು ಪಾದಯಾತ್ರೆಯಲ್ಲಿ ಸತತ 5 ದಿನಗಳಿಂದ ಪಾಲ್ಗೊಂಡಿದ್ದಾರೆ.
ತೀರ್ಥಹಳ್ಳಿಯಿಂದ ಪ್ರತಿ ಹೋಬಳಿಯಿಂದ ಬಸ್
ತೀರ್ಥಹಳ್ಳಿ ತಾಲೂಕಿನ ಪ್ರತಿ ಹೋಬಳಿಯಿಂದ ಬಸ್ ಹೋಗಿವೆ. ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಭಾಗಿಯಾಗಿದ್ದಾರೆ.