ಜೂ.25ಕ್ಕೆ ತೀರ್ಥಹಳ್ಳಿಗೆ ಬರ್ತಾರೆ ಲೋಕಾಯುಕ್ತರು!
– ಲಂಚ ಕೇಳಿದ್ರೆ… ಅವ್ಯವಹಾರ ಆಗಿದ್ರೆ ದೂರು ಸಲ್ಲಿಸಲು ಅವಕಾಶ
– ತೀರ್ಥಹಳ್ಳಿಯಲ್ಲಿ ಲೋಕಾಯುಕ್ತರಿಂದ ಸಾರ್ವಜನಿಕರ ಕುಂದು ಕೊರತೆ ಸಭೆ
NAMMUR EXPRESS NEWS
ಶಿವಮೊಗ್ಗ : ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಜೂನ್-2024ರ ಮಾಹೆಯ ಕೆಳಕಂಡ ದಿನಗಳಂದು ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು.
ಜೂ-25 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣ, ಜೂ. 26 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣ. ಜೂ-28 ರಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಶಿವಮೊಗ್ಗ ತಾಲೂಕು ಪಂಚಾಯಿತಿ ಸಭಾಂಗಣಗಳಲ್ಲಿ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಲಿದೆ.
ಯಾವ ಯಾವ ದೂರು ನೀಡಬಹುದು…?
ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ದಾರಿತನ, ನಿರ್ಲಕ್ಷ್ಯ. ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.
ಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ಜೆರ್ಸಿ ಭಾಗ್ಯ!
– ಕೋಣಂದೂರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮತ್ತು ಜೆಸಿಐ ಸೃಷ್ಟಿ ಸಂಸ್ಥೆಗಳಿಂದ ವಿತರಣೆ
ತೀರ್ಥಹಳ್ಳಿ: ಕೋಣಂದೂರು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮತ್ತು ಜೆಸಿಐ ಸೃಷ್ಟಿ ಸಂಸ್ಥೆಗಳ ವತಿಯಿಂದ ಶರಾವತಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಗೆ ಜೆರ್ಸಿಗಳನ್ನು ವಿತರಿಸಲಾಯಿತು, ಈ ಸಂಧರ್ಬದಲ್ಲಿ ಸೀನಿಯರ್ ಚೇಂಬರ್ ಅಧ್ಯಕ್ಷರಾದ ಡಿ ಪಿ.ವಿಶ್ವನಾಥ್, ಜೆಸಿಐ ಅಧ್ಯಕ್ಷ ಅವಿನಾಶ್, ಕಾಲೇಜಿನ ಪ್ರಾಂಶುಪಾಲ ಸುಭಾಷ್, ಎನ್ ಎಸ್ ಎಸ್ ಸಂಚಾಲಕರಾದ ಪ್ರದೀಪ್, ನ್ಯಾಷನಲ್ ಪಿಯು ಪ್ರಾಂಶುಪಾಲ ಲಕ್ಷಣ್ , ಪತ್ರಕರ್ತ ಮುರುಗರಾಜ್, ಪ್ರಕಾಶ್ ಮತ್ತು ಸೀನಿಯರ್ ಚೇಂಬರ್ ಜೆಸಿಐ ಸದಸ್ಯರು ಉಪಸ್ಥಿತರಿದ್ದು ವಿಧ್ಯಾರ್ಥಿಗಳಿಗೆ ಶುಭಹಾರೈಸಿದರು.
ಕೊಕ್ಕಡು ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ
– ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಮರ ಒಕ್ಕೂಟದ ಶೌರ್ಯ ವಿಪತ್ತು ತಂಡದಿಂದ ಗಿಡ ನೆಟ್ಟು ಮಾದರಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೈಮರ ಒಕ್ಕೂಟದ ಶೌರ್ಯ ವಿಪತ್ತು ತಂಡದಿಂದ ಹೊಸಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಕ್ಕಡು ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ಕೃಷಿ ಅಧಿಕಾರಿಯಾದ ರಾಕೇಶ್ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಎ ಡಿಎಂಸಿ ಅಧ್ಯಕ್ಷರಾದ ದಿನೇಶ್, ಕೃಷಿ ಅಧಿಕಾರಿ ರಾಕೇಶ್, ಮೇಲ್ವಿಚಾರಕರಾದ ಹೇಮಾ, ಒಕ್ಕೂಟದ ಅಧ್ಯಕ್ಷರಾದ ನರೇಶ್, .ಪ್ರತಿನಿಧಿ ನಿರ್ಮಲ, ಅಕ್ಷಯ್ ಸ್ವಯಂ ಸೇವಕರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ತರು ಇದ್ದರು.