ಮಂಜುನಾಥ ಗೌಡ ಅಧಿಕಾರ ಸಡಗರ!
– ಸಾವಿರಾರು ಮಂದಿ ಆಗಮನ: ಜಿಲ್ಲೆಯಲ್ಲಿ ಸಂತಸ
– ರಾಜ್ಯದ ಸಚಿವರ ಉಪಸ್ಥಿತಿ: ಸರ್ವರಿಗೂ ಸ್ವಾಗತ
NAMMUR EXPRESS NEWS
ಶಿವಮೊಗ್ಗ: ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸಹಕಾರಿ ನಾಯಕ ಡಾ.ಆರ್. ಎಂ ಮಂಜುನಾಥ್ ಗೌಡ ಅಧಿಕಾರ ಸ್ವೀಕರಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಈಗಾಗಲೇ ಭರದಲ್ಲಿ ಸಿದ್ಧತೆ ನಡೆಯುತ್ತಿದೆ. ಎಂ.ಎ.ಡಿ.ಬಿ ಅಧಿಕಾರಿಗಳು, ಡಿಸಿಸಿ ಬ್ಯಾಂಕ್ ನಿರ್ದೇಶಕರು, ಕಾಂಗ್ರೆಸ್ ಪಕ್ಷದ ಮುಖಂಡರು,ಆರ್ ಎಂ ಎಂ ಅಭಿಮಾನಿಗಳು, ಸಹಕಾರ ಕ್ಷೇತ್ರದ ಪ್ರಮುಖರು ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸುತ್ತಿದ್ದಾರೆ.
ರಾಜ್ಯದ ಗಣ್ಯರ ಆಗಮನ
ಮಂಜುನಾಥ ಗೌಡ ಅವರ ಅಧಿಕಾರ ಸ್ವೀಕಾರ ಸಮಾರಂಭ ಮಾರ್ಚ್ 4ರ ಸೋಮವಾರ ಬೆಳಗ್ಗೆ 11 :30ಕ್ಕೆ ಶಿವಮೊಗ್ಗದ ಮಲೆನಾಡು ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ಸಚಿವರಾದ ಮಧು ಬಂಗಾರಪ್ಪ, ಕೆ ಜೆ ಜಾರ್ಜ್, ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಲಕ್ಷ್ಮಿ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ವೆಂಕಟೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ನಾಯಕರು, ತಾಲೂಕು ನಾಯಕರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವರನ್ನು ಡಾ.ಆರ್.ಎಂ ಮಂಜುನಾಥ ಗೌಡ ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಸಹಕಾರ ಕ್ಷೇತ್ರ, ಅಭಿಮಾನಿಗಳಿಗೆ ಸಂತಸ
ಮಂಜುನಾಥ ಗೌಡ ಅವರ ಸಹಕಾರ ಕ್ಷೇತ್ರ, ಅಭಿಮಾನಿಗಳಿಗೆ ಸಂತಸ ಇದ್ದು, ಸಾವಿರಾರು ಮಂದಿ ತೀರ್ಥಹಳ್ಳಿ, ಶಿವಮೊಗ್ಗದಿಂದ ಸಾವಿರಾರು ಮಂದಿ ಆಗಮಿಸಿದ್ದಾರೆ.