ರಾಜ್ಯದಲ್ಲಿ ಮಳೆ ಚುರುಕು: ಹಬ್ಬಕ್ಕೆ ಮಳೆ ಮಂಕು?!
– ಮಲೆನಾಡಲ್ಲಿ ಮತ್ತೆ ಮಳೆ: ತುಂಬಿದ ನದಿಗಳು
– ಕರಾವಳಿಯಲ್ಲಿ ಗುಡುಗು- ಸಿಡಿಲು ಸಹಿತ ಭಾರೀ ಮಳೆಯ ಮುನ್ಸೂಚನೆ
NAMMUR EXPRESS NEWS
ಶಿವಮೊಗ್ಗ/ಉಡುಪಿ: ರಾಜ್ಯದಲ್ಲಿ ಮಳೆ ಚುರುಕಾಗಿದ್ದು ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಗೌರಿ, ಗಣೇಶ ಹಬ್ಬಕ್ಕೆ ಮಳೆ ಮಂಕು ತರುವ ಸಾಧ್ಯತೆ ಇದೆ. ಮಲೆನಾಡಲ್ಲಿ ಮತ್ತೆ 2 ದಿನಗಳಿಂದ ಮಳೆಯಾಗುತ್ತಿದ್ದು ನದಿಗಳು ತುಂಬುತ್ತಿವೆ.
ಕರಾವಳಿಯಲ್ಲಿ ಗುಡುಗು- ಸಿಡಿಲು ಸಹಿತ ಭಾರೀ ಮಳೆ
ಕರಾವಳಿಯ ಪ್ರತ್ಯೇಕ ಜಿಲ್ಲೆಗಳಲ್ಲಿ ಸೆ.17 ಮತ್ತು 18 ರಂದು ಗುಡುಗು-ಸಿಡಿಲು ಸಹಿತ ಭಾರೀ ಮಳೆಯ(64.5mm ನಿಂದ 115.5 mm) ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದು 40-45 ಕಿ.ಮೀ/ಗಂಟೆ ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.