ಶಿವಮೊಗ್ಗ ಜಿಲ್ಲೆಯ ಟಾಪ್ 5 ನ್ಯೂಸ್
ಶಿಕಾರಿಪುರ: ಬಾವಿಯಲ್ಲಿ ಬಿದ್ದು ಕರಡಿ ಸಾವು!
– ತೀರ್ಥಹಳ್ಳಿ: ಮನೆ ಮೇಲೆ ಬಿದ್ದ ತೆಂಗಿನ ಮರ
– ಸಾಗರ: ಮುಂದುವರೆದ ಮಳೆ: 3 ಮನೆಯ ಗೋಡೆ ಕುಸಿತ
– ಸೊರಬ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನಾಪತ್ತೆ
– ಹೊಸನಗರ : ಸೊನಲೆ ಬೋರಿಕೊಪ್ಪದಲ್ಲಿ ಧರೆ ಕುಸಿತ
NAMMUR EXPRESS NEWS
ಶಿಕಾರಿಪುರ: ಬಾವಿಯಲ್ಲಿ ಬಿದ್ದ ಕರಡಿಯನ್ನು ಅರಣ್ಯ ಇಲಾಖೆ ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಮೇಲೆತ್ತಿದ ಘಟನೆ ತಾಲೂಕಿನ ಹುಲ್ಲಿನಕಟ್ಟೆ ಗ್ರಾಮದಲ್ಲಿ ನಡೆದಿದೆ. ಹುಲ್ಲಿನ್ ಕಟ್ಟೆ ಗ್ರಾಮದ ಸುಮಾರು 40 ರಿಂದ 50 ವರ್ಷದ ಹಳೆಯ ಬಾವಿಯಲ್ಲಿ ಹತ್ತು ವರ್ಷದ ಕರಡಿ ಬಿದ್ದಿದನ್ನ ಗಮನಿಸಿದ ಗ್ರಾಮಸ್ಥರು ಕೂಡಲೇ ಅಗ್ನಿಶಾಮಕ ದಳದ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ವಿಷಯ ಮುಟ್ಟಿಸಿದರು.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕರಡಿಯನ್ನು ಜೀವಂತವಾಗಿ ಮೇಲಕ್ಕೆ ಎತ್ತಿದರು. ತೀವ್ರ ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ನೀಡಿದರು ಫಲಕಾರಿಯಾಗದೇ ಮೃತಪಟ್ಟಿತು.
– ತೀರ್ಥಹಳ್ಳಿ: ಉರುಳಿ ಬಿತ್ತು ತೆಂಗಿನ ಮರ!
ತೀರ್ಥಹಳ್ಳಿ : ತಾಲೂಕು ಆಗುಂಬೆ ಹೋಬಳಿ ಚಂಗಾರು ಗ್ರಾಮದ ಹುಂಚಿಕೊಪ್ಪದಲ್ಲಿ ಸುರೇಶ್ ಎಂಬುವರ ಮನೆ ಪಕ್ಕದಲ್ಲಿ ರಾತ್ರಿ 1 :15ರ ಸಮಯದಲ್ಲಿ ಬೃಹತ್ ತೆಂಗಿನಮರ ಧರೆಗುರುಳಿದ್ದು , ಜೊತೆಗೆ ಕರೆಂಟ್ ಕಂಬ ಕೂಡ ಬಿದ್ದಿದ್ದು ತಂತಿ ಕಟ್ ಆಗಿದೆ. ಇನ್ನೂ ತೆಂಗಿನ ಮರ ಸ್ವಲ್ಪ ಚದುರಿ ಬಿದ್ದಿದ್ದು ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.
– ಸಾಗರ: ಮುಂದುವರೆದ ಮಳೆ ಮೂರು ಮನೆಯ ಗೋಡೆ ಕುಸಿತ
ಸಾಗರ : ಸಾಗರದಲ್ಲಿ ಮುಂದುವರೆದ ಮಳೆರಾಯನ ಆರ್ಭಟ ಮಳೆಯ ಅಬ್ಬರಕ್ಕೆ ಕುಸಿದು ಬಿತ್ತು ಮೂರು ಮನೆಗಳ ಗೋಡೆ ತಪ್ಪಿತು ದೊಡ್ಡ ಅನಾಹುತ ತಕ್ಷಣ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ಸ್ಥಳೀಯ ನಗರಸಭಾ ಸದಸ್ಯ, ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಸಾಗರದ ಗಾಂಧಿನಗರದ 19ನೇ ವಾರ್ಡಿನಲ್ಲಿ ಶುಕ್ರವಾರ ರಾತ್ರಿ ನಡೆದ ಘಟನೆ.
– ಸೊರಬ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ನಾಪತ್ತೆ
ಸೊರಬ: ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ನದಿ ಹಿನ್ನೀರಿನಲ್ಲಿ ನಾಪತ್ತೆಯಾದ ಘಟನೆಯೊಂದು ತಾಲೂಕಿನ ಯಡಗೊಪ್ಪ- ಯಲವಾಟದಲ್ಲಿ ನಡೆದಿದೆ. ಉದ್ರಿ-ವಡ್ಡಿಗೆರೆ ಗ್ರಾಮದ ವಾಸಿ ಯಲ್ಲಪ್ಪ (45) ಶುಕ್ರವಾರ ಸಂಜೆ 4.30 ರ ಸಮಯದಲ್ಲಿ ವಡ್ಡಿಗೆರೆ ಗ್ರಾಮದ ತನ್ನ ಸಹೋದರ ಇಂದ್ರಪ್ಪ ಮತ್ತು ಚನ್ನಪ್ಪನೊಂದಿಗೆ ಮೀನು ಹಿಡಿಯಲು ಯಡಗೊಪ್ಪ- ಯಲವಾಟ ಮದ್ಯದಲ್ಲಿರುವ ವರದಾ ನದಿಯ ಅಡ್ಡ ಹೊಳೆಯ ತಗ್ಗು ಪ್ರದೇಶದಲ್ಲಿ ಮೀನು ಹಿಡಿಯಲು ಹೋಗಿದ್ದಾಗ, ನದಿ ನೀರಿನ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾನೆ. ಅಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಎನ್ಡಿಆರ್ಎಫ್ ತಂಡದೊಂದಿಗೆ ಸಂಜೆ 5 ರಿಂದ ರಾತ್ರಿ 7.30 ರವರೆಗೆ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ಮಂಜುಳಾ ಹೆಗಡಾಳ್, ಕಾರ್ಯನಿರ್ವಹಣಾಧಿಕಾರಿ ಡಾ. ಪ್ರದೀಪ್ ಕುಮಾರ್, ಮುಖಂಡ ಸುರೇಶ್ ಉದ್ರಿ ಹಾಜರಿದ್ದರು. ಶನಿವಾರ ಬೆಳಿಗ್ಗೆ ಮುಳುಗು ತಜ್ಞರನ್ನು ಸ್ಥಳಕ್ಕೆ ಕರೆಯಿಸಿ, ಕಾರ್ಯಾಚರಣೆ ನಡೆಸಲಾಗುವುದು ಎಂದು ತಹಶೀಲ್ದಾರ್ ಮಂಜುಳಾ ಹೆಗಡಾಳ್ ತಿಳಿಸಿದ್ದಾರೆ.
– ಹೊಸನಗರ : ಸೊನಲೆ ಬೋರಿಕೊಪ್ಪದಲ್ಲಿ ದರೆ ಕುಸಿತ
ಹೊಸನಗರ :ತಾಲ್ಲೂಕಿನ ಸೋನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರಿಕೊಪ್ಪ ಗ್ರಾಮದ ಬೋರಿಕೊಪ್ಪದ ಮುಖ್ಯ ರಸ್ತೆ ಗೆ ದರೆ ಕುಸಿದು ಸಾರ್ವಜನಿಕ ಸಂಪರ್ಕ ಕಡಿತವಾಗುವ ಸಂಭವವಿದೆ. ಎಂದು ಸೊನಲೆ ಗ್ರಾಮ ಪಂಚಾಯಿತಿ ಸದಸ್ಯ ಸೊನಲೆ ಸತೀಶ್ ತಿಳಿಸಿದ್ದಾರೆ. ಗುರುವಾರ ಸುರಿದ ಬಾರಿ ಮಳೆಗೆ ಬೋರಿಕೊಪ್ಪದ ಮುಖ್ಯ ರಸ್ತೆ ಗೆ ದರೆ ಕುಸಿದು ಈ ಬಾಗದ ಸುಮಾರು 25 ಕುಟುಂಬದ ಸಂಪರ್ಕ ಕಡಿತವಾಗುವ ಅಪಾಯದ ಅಂಚಿನಲ್ಲಿ ಇದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಪಿಡಿಒ ಕಾವೇರಿ ಯವರು ವಿ ವಿ ಮತ್ತು ಸಿದ್ದಪ್ಪನವರು ಹಾಗೂ ಪಾಂಡು ಈಶ್ವರಪ್ಪ ಗೌಡ ಬಂದು ಪ್ರದೇಶಕ್ಕೆ ಮಾಹಿತಿ ಪಡೆದುಕೊಂಡು ಸಂಪರ್ಕಕ್ಕೆ ತೊಂದರೆ ಯಾಗದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.