ಯಶ್ ಬರ್ತ್ ಡೇಗೆ ಶಿವಮೊಗ್ಗ ಫ್ಯಾನ್ಸ್ ಸ್ಪೆಷಲ್ ಗಿಫ್ಟ್!
– ಕರ್ನಾಟಕದಲ್ಲಿ ದಾಖಲೆ ಸೃಷ್ಟಿಸಿದ ಯಶ್ ಅಭಿಮಾನಿಗಳು!
– 350+ ಕೆಜಿ ಹಣ್ಣಿನಿಂದ ಯಶ್ ರವರ ಭಾವಚಿತ್ರ ನಿರ್ಮಾಣ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಫ್ರೀಡಂ ಪಾರ್ಕಿನಲ್ಲಿ ಜ. 5ರಂದು ಯಶ್ ಹುಟ್ಟು ಹಬ್ಬದ ಪ್ರಯುಕ್ತ 350+ ಕೆಜಿ ಹಣ್ಣಿನಿಂದ ಯಶ್ ರವರ ಭಾವಚಿತ್ರವನ್ನೂ 40×60 ಅಡಿ ಜಾಗ ದಲ್ಲಿ ಮಾಡಿ ಅದನ್ನು ಯಶ್ ರವರಿಗೆ ಶಿವಮೊಗ್ಗ ಯುವಕರ ತಂಡವೊಂದು ಸುರ್ಪ್ರೈಸ್ ಆಗಿ ಶುಭಾಶಯವನ್ನೂ ಕೋರಿದ್ದಾರೆ. ಜ. 8 ರ ಬೆಳಿಗ್ಗೆ ಶಿವಮೊಗ್ಗದ ಶಿವಾಲಯದಲ್ಲಿ ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅದ್ದೂರಿ ಪೂಜೆಯನ್ನು ನಡೆಸಿ ಸಿಹಿ ತಿನಿಸು ಹಂಚಿ ಆಚರಿಸಲಾಯಿತು. ನಂತರ ಹುಟ್ಟುಹಬ್ಬದ ಪ್ರಯುಕ್ತ ರ್ಯಾಲಿ ನಡೆಸಿದರು. ನಂತರ ಶಿವಮೊಗ್ಗದ ಅಂಧ ಮಕ್ಕಳ ಆಶ್ರಮದಲ್ಲಿ ಅನ್ನಸಂತರ್ಪಣೆ ಮಾಡಿ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ಹಾಗೂ ಪೆನ್ ವಿತರಿಸಲಾಯಿತು. ಇದೀಗ ಶಿವಮೊಗ್ಗದಲ್ಲಿ ಯಶ್ ಅಭಿಮಾನಿಗಳು ಕರ್ನಾಟಕದ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ ಎಂದರೆ ತಪ್ಪಾಗದು.