ಶಿವಮೊಗ್ಗ ಟಾಪ್ 3 ನ್ಯೂಸ್..!
ಕುಡಿದು ಬೈಕ್ ಓಡಿಸುವ ಮುನ್ನ ಹುಷಾರ್:!
– 10 ಸಾವಿರ ಫೈನ್ ಹಾಕುತ್ತೆ ಕೋರ್ಟ್: ಸೊರಬದಲ್ಲಿ ಕೇಸ್
– ಶಿವಮೊಗ್ಗ: ಹೊಲದ ಬದಿಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ!?
– ಹೊಳೆಹೊನ್ನೂರು: ಬಸ್ ಓವರ್ ಟೇಕ್: ಮೂವರಿಗೆ ಗಂಭೀರ ಗಾಯ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದಲ್ಲಿ ಕುಡಿದು ವಾಹನ ಚಲಾಯಿಸುವವರು ಇನ್ಮುಂದೆ ಹುಷಾರಿಗಿರಬೇಕು. ಏಕೆಂದರೆ ಬರೋಬ್ಬರಿ ಹತ್ತು ಸಾವಿರ ರೂಪಾಯಿ ದಂಡ ಬೀಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸೊರಬ ತಾಲ್ಲೂಕಿನಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಇಬ್ಬರು ವಾಹನ ಚಾಲಕರಿಗೆ ಸೊರಬ ಜೆಎಂಎಫ್ ನ್ಯಾಯಾಲಯ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಕಳೆದ ಶುಕ್ರವಾರ ರಾತ್ರಿ ಸೊರಬ ಪಟ್ಟಣ ಠಾಣೆ ಪಿಎಸ್ಐ ನಾಗರಾಜ ನೇತೃತ್ವದ ತಂಡ ವಾಹನಗಳ ತಪಾಸಣೆ ನಡೆಸಿದ್ದರು. ಈ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಹೊಲದ ಬದಿಯಲ್ಲಿ ಗುತ್ತಿಗೆದಾರನ ಮೃತದೇಹ ಪತ್ತೆ!
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಗುತ್ತಿಗೆದಾರ ಎನ್ನಲಾದವರ ಮೃತದೇಹ ಹೊಲದ ಬದಿಯೊಂದರಲ್ಲಿ ಪತ್ತೆಯಾಗಿದ್ದು, ಪ್ರಕರಣ ನಿಗೂಢ ಎನಿಸಿದೆ. ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೃತದೇಹ ಪತ್ತೆಯಾಗಿದುದ, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ ನಗರದ ಟೊಯೆಟೋ ಶೂರೂಂ ಸಮೀಪದಲ್ಲಿರುವ ಹೊಲವೊಂದರಲ್ಲಿ ಮಹಾನಗರ ಪಾಲಿಕೆಯ ಗುತ್ತಿಗೆದಾರ ಎನ್ನಲಾದ ವಾಸು ಎಂಬವರ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆದಾಗ್ಯು ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಓವರ್ ಟೇಕ್ ಮಾಡುವಾಗ ಕಾರು- ಬೈಕ್ ಡಿಕ್ಕಿ, ಮೂವರು ಗಂಭೀರ:
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪ ಯಡೇಹಳ್ಳಿ ಬಳಿಯಲ್ಲಿ ಅಪಘಾತವಾಗಿದ್ದು, ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ. ಬಸ್ವೊಂದನ್ನ ಓವರ್ ಟೇಕ್ ಮಾಡುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಯಡೇಹಳ್ಳಿ ಕಡೆಯಿಂದ ಹೊಳೆಹೊನ್ನೂರು ಕಡೆಗೆ ಹೊರಟಿದ್ದ ಬೈಕ್ವೊಂದು ಮುಂದೆ ಹೋಗುತ್ತಿದ್ದ ಬಸ್ನ್ನ ಓವರ್ ಟೇಕ್ ಮಾಡಲು ಮುಂದಾಗಿದೆ. ಈ ವೇಳೆ ಎದುರುಗಡೆಯಿಂದ ಕಾರೊಂದು ಬಂದಿದೆ. ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ.ಗಾಯಗೊಂಡವರನ್ನು ಹೊಳೆ ಬೈರನಹಳ್ಳಿಯ ಯುವಕರು ಎನ್ನಲಾಗಿದೆ. ಅವರನ್ನ ಸದ್ಯ ಶಿವಮೊಗ್ಗದ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ.