ಉಂಬ್ಳೇಬೈಲು ಭಾಗದ ರೈತರಿಗೆ ನೋಟೀಸ್: ನಾಯಕರ ಎಂಟ್ರಿ!
– ಡಿಸಿ ಜತೆಗೆ ಸಭೆ ನಡೆಸಿದ ಡಾ.ಆರ್.ಎಂ.ಮಂಜುನಾಥ್ ಗೌಡ
– ರೈತರಿಗೆ ಅನ್ಯಾಯ ಆಗಬಾರದು ಎಂದ ಸಹಕಾರ ನಾಯಕ
NAMMUR EXPRESS NEWS
ಶಿವಮೊಗ್ಗ: ನೂರಾರು ಉಂಬ್ಳೇಬೈಲು ಭಾಗದ ರೈತರಿಗೆ ಅರಣ್ಯ ಇಲಾಖೆ ಭೂಮಿ ಬಿಡುವಂತೆ ನೋಟಿಸ್ ನೀಡಿದ ಹಿನ್ನೆಲೆ ರೈತರ ಜೊತೆಗೆ ಶಿವಮೊಗ್ಗ ಡಿಸಿ ಅವರನ್ನು ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥಗೌಡ ಭೇಟಿ ಮಾಡಿ ಜಾಗ ಬಿಡಿಸದಂತೆ ಮನವಿ ಮಾಡಿದರು.
1990 ಇಸವಿಯಿಂದ ಭದ್ರಾ ಮುಳಗಡೆ ರೈತರು ಇಲ್ಲಿ ಸಾಗುವಳಿ ಮಾಡಿಕೊಂಡಿದ್ದು, ನೋಟಿಸು ನೀಡಿ ಒತ್ತವರಿ ತೆರವು ಮಾಡಿ ಎಂದಿರುವ ಕ್ರಮದ ಬಗ್ಗೆ ಿಸಿ ಅವರಿಗೆ ಸಹಕಾರ ನಾಯಕ ಮನವರಿಕೆ ಮಾಡಿಕೊಟ್ಟರು. ಜತೆಗೆ ಯಾವುದೇ ಕಾರಣ ರೈತರಿಗೆ ಅನ್ಯಾಯ ಆಗಬಾರದು ಎಂದರು, ಮಾಜಿ ಸಂಸದ ಆಯನೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಕೆ ಮರಿಯಪ್ಪ, ಉಂಬ್ಳೇಬೈಲು ಮುಖಂಡರಾದ ದುಗ್ಗಪ್ಪ ಗೌಡ, ರಮೇಶ್ ಹೆಗ್ಡೆ, ಶಿವಕುಮಾರ್, ಪ್ರಮೋದ್,ಮಧುಸೂದನ್, ಗಂಗಮ್ಮ, ಸಚಿನ್ ಶೆಟ್ಟಿ ಈಶಣ್ಣ ರಾಘು ಶಾಮಿಯಾನ ಮತ್ತು ಪ್ರಮುಖರು ಇದ್ದರು.