ಶಿವಮೊಗ್ಗದಲ್ಲಿ ಹೆಚ್ಚಾಯ್ತು ಕಳ್ಳರ ಗ್ಯಾಂಗ್!
– ಬಸ್ ನಿಲ್ದಾಣ, ರೈಲು ನಿಲ್ದಾಣ ಈಗ ಕಳ್ಳರ ಅಡ್ಡೆ
– ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಕಳ್ಳತನ
– ಮಹಿಳೆಯ ಮನೆಯಲ್ಲಿ ಕಳ್ಳತನ, ಮೂವರು ಯುವಕರು ಸೆರೆ
– ಪೊಲೀಸರಿಗೆ ಈಗ ಪ್ರೇಮಿಗಳೇ ಪಜೀತಿ ಆಯ್ತು!
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳುವು ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಭದ್ರಾವತಿ ಬಸ್ ಹತ್ತಿದ ವೇಳೆ ಈ ಘಟನೆ ನಡೆದಿದೆ. ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಮಹಿಳೆ ತಾಯಿ ಮತ್ತು ತನ್ನ ಮಗಳ ಜೊತೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದದಲ್ಲಿ ಮದುವೆ ಮುಗಿಸಿಕೊಂಡು ವಾಪಾಸ್ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಬಸ್ ನಿಲ್ದಾಣದಲ್ಲಿ ಬೆಂಗಳೂರು ಕಡೆ ಹೋಗುವ ಬಸ್ ಹತ್ತಿದ್ದು ಈ ವೇಳೆ ಬಸ್ ರಶ್ ಆಗಿತ್ತು. ಮೊಮ್ಮಗಳು ಮತ್ತು ಮಹಿಳೆ ಬಸ್ ಹತ್ತಿಕೊಂಡು ಕುಳಿತು ಬೈಪಾಸ್ ಹತ್ತಿರ ಬಸ್ ಹೋಗುವಾಗ ಆಧಾರ್ ಕಾರ್ಡ್ ತೆಗೆಯಲು ವ್ಯಾನಿಟಿಬ್ಯಾಗ್ ನೋಡಿದಾಗ ಜಿಪ್ ಓಪನ್ ಆಗಿತ್ತು. ಗಾಬರಿಗೊಂಡು ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ 15 ಗ್ರಾಮ್ ನ ಬಂಗಾರದ ನೆಕ್ಲೆಸ್ ಕಳುವಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಬೈಪಾಸ್ ನಲ್ಲಿ ಇಳಿದ ಮಹಿಳೆ ಬಸ್ ನಿಲ್ದಾಣಕ್ಕೆ ಬಂದು ಹುಡುಕಿದ್ದಾರೆ. ಎಲ್ಲೂ ಸಿಕ್ಕಿರಲಿಲ್ಲ.
ತನ್ನ ತಾಯಿ ಮದುವೆಗೆ ಉಡುಗೊರೆಯಾಗಿ ನೀಡಿದ್ದ ನೆಕ್ಲೆಸ್ ಅದಾಗಿದ್ದು, ಬಸ್ ಹತ್ತುವಾಗ ಕಳ್ಳರ ಕೈಚಳಕದಿಂದ ಒಡವೆಯನ್ನ ಕಳೆದುಕೊಳ್ಳುವಂತಾಗಿದೆ.
– ಶಿವಮೊಗ್ಗ: ಬಾಪೂಜಿನಗರದ ಮಹಿಳೆಯ ಮನೆಯಲ್ಲಿ ಕಳ್ಳತನ, ಮೂವರು ಯುವಕರು ಸೆರೆ
ಶಿವಮೊಗ್ಗ: ಬಾಪೂಜಿನಗರದ ಮಹಿಳೆಯೊಬ್ಬರ ವಾಸದ ಮನೆಯಲ್ಲಿ ಬಂಗಾರದ ಆಭರಣಗಳು ಮತ್ತು ಹಣವನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಯುವಕರನ್ನು ಬಂಧಿಸಿ ಅವರಿಂದ ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿಕ್ಕಲ್ನ ಮೊಹಮ್ಮದ್ ರಫೀಕ್ ಅಲಿಯಾಸ್ ಕಾಣ (24), ಬಾಪೂಜಿನಗರದ ಅತಾವುಲ್ಲಾ (29) ಮತ್ತು ರೂಮನ್ ಖುರೇಶಿ, (20) ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಮಾಲ್ಯ 15,40,500 ರೂಗಳ 237 ಗ್ರಾಂ ಬಂಗಾರದ ಒಡವೆಗಳು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ 50,000 ರೂ ಮೌಲ್ಯದ ಬೈಕ್ ಸೇರಿ ಒಟ್ಟು 15,90,500 ರೂ ಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಜೂನ್ 29ರಂದು ರಾತ್ರಿ ಈ ಕಳ್ಳತನ ನಡೆದಿತ್ತು. ಸುಮಾರು 234 ಗ್ರಾಂ ತೂಕದ ಚಿನ್ನ ಮತ್ತು ಹಣ ಕಳ್ಳತನ ಮಾಡಲಾಗಿತ್ತು. ಮಹಿಳೆಯು ನೀಡಿದ ದೂರಿನ ಮೇರೆಗೆ ಕೋಟೆ ಪೊಲೀಸರು ಬಂಧಿಸಿದ್ದಾರೆ.
– ಶಿವಮೊಗ್ಗ: ರೈಲ್ವೆ ನಿಲ್ದಾಣದಲ್ಲಿ ಬೈಕ್ ಕಳುವು
ಶಿವಮೊಗ್ಗ: ರೇಲ್ವೆ ನಿಲ್ದಾಣದ ಹೊರಗೆ ನಿಲ್ಲಿಸಿದ್ದ ಸ್ಟೆಂಡರ್ ಬೈಕ್ ಕಳುವಾದ ಬಗ್ಗೆ ವರದಿಯಾಗಿದೆ. ನಿಲ್ದಾಣದೊಳಗೆ ಹೋಗಿ ಬರುವಷ್ಟರಲ್ಲಿ ಕೃತ್ಯ ನಡೆದಿದೆ. ತಾಲೂಕಿನ ಭದ್ರಾಪುರದ ದುರ್ಗೇಶ ಎಂಬುವವರ ಪರಿಚಿತರೊಬ್ಬರು ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ರೈಲಿನಲ್ಲಿ ತೆರಳುತ್ತಿದ್ದರು. ಕೆಲವು ಸಾಮಗ್ರಿಗಳನ್ನು ಅವರಿಗೆ ಕೊಡಬೇಕಿದ್ದರಿಂದ ದುರ್ಗೇಶ ಬೈಕ್ನಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಸ್ಟೆಂಡರ್ ಬೈಕ್ ನಿಲ್ಲಿಸಿ ನಿಲ್ದಾಣದ ಒಳಗೆ ಹೋಗಿ ವಾಪಸ್ ಬಂದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ದುರ್ಗೇಶ ಬಳಿಕ ಠಾಣೆಗೆ ದೂರು ನೀಡಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಪ್ರೇಮಿಗಳ ನಡುವೆ ಪೊಲೀಸರಿಗೆ ಪಜೀತಿ ..!
ಶಿವಮೊಗ್ಗ: ಗಾಜನೂರು ತುಂಗಾ ಜಲಾಶಯ ನೋಡಲು ಶಿಕಾರಿಪುರ ಹಿತ್ತಲ ಗ್ರಾಮದ ಪಲ್ಲವಿ ಹಾಗೂ ಎನ್ ಆರ್ ಪುರ ಮೂಲದ ಪ್ರತಾಪ್ ಜೊತೆ ಆತನ ಸ್ನೇಹಿತ ಕಿರಣ ಹೋಗಿದ್ದಾರೆ ಅಲ್ಲಿ ಕಿರಣ್ ಪಲ್ಲವಿ ನಡುವೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ಐವರು ಯುವಕರಿಂದ ಗುಂಪಿನ ನಡುವೆ ಗಲಾಟೆ ಮಾಡಿದ್ದಾನೆ. ಪ್ರೇಮಿಗಳು ಈ ನಡುವೆ ಪರಾರಿಯಾಗಿದ್ದಾರೆ ಆದರೆ ಕಿರಣ್ ಈ ಐವರು ಗುಂಪೆ ಆ ಯುವತಿಯನ್ನು ಅಪರಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಇದನ್ನು ಗಂಭೀರವಾಗಿ ತೆಗೆದುಕೊಂಡ ತುಂಗಾನಗರ ಠಾಣೆಯ ಪೊಲೀಸರು ರಾತ್ರಿಯೆಲ್ಲಾ ಹುಡುಕಾಟ ನಡೆಸಿದ್ದಾರೆ.
ನಂತರ ಪೊಲೀಸರು ಗಾಜನೂರಿನ ಯುವಕರನ್ನು ಹಾಗೂ ಪ್ರೇಮಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ನಿಜವಾಗಿ ಅಲ್ಲಿ ನಡೆದಿದ್ದೇನು ಎನ್ನುವುದು ಪೊಲೀಸರ ವಿಚಾರಣೆಯಿಂದ ಹೊರಬರಬೇಕಾಗಿದೆ.