ಟ್ರಕ್ ಅಲ್ಲಿ ಕೋಟಿ ಕೋಟಿ ಚಿನ್ನ ಸಾಗಣೆ!
– ತರೀಕೆರೆ: 4 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರ ವಶ!
– ಹೊಸನಗರದ ತೋಟದ ಮನೆಯೊಂದ ಮೇಲೆ ಲೋಕಾಯುಕ್ತ ದಾಳಿ
– ಶಿವಮೊಗ್ಗದಲ್ಲಿ ಲೋಕಾಯುಕ್ತ ದಾಳಿ: ವಶ!
NAMMUR EXPRESS NEWS
ತರೀಕೆರೆ: ಎಲ್ಲೆಡೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮವಾಗಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಾಲ್ಕು ಕೋಟಿ ಮೌಲ್ಯದ ಚಿನ್ನ, ವಜ್ರ ಬೆಳ್ಳಿ ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ಎಂ.ಸಿ. ಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ. ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಕೋಟ್ಯಂತರ ಮೌಲ್ಯದ ಚಿನ್ನ, ಡೈಮಂಡ್ಸ್ ಹಾಗೂ ಬೆಳ್ಳಿ ವಸ್ತುಗಳನ್ನು ಟ್ರಕ್ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಚುನಾವಣಾಧಿಕಾರಿಗಳು, ಪೊಲೀಸರು ಟ್ರಕ್ ತಡೆದು ಪರಿಶೀಲನೆ ನಡೆಸಿದಾಗ ಚಿನ್ನಾಭರಣಗಳು ಪತ್ತೆಯಾಗಿದೆ. 6 ಕೆಜಿ 586 ಗ್ರಾಂ ಚಿನ್ನ, 1 ಕೆಜಿ 71.492 ಗ್ರಾಂ ವಜ್ರಾಭರಣ, 1 ಕೆಜಿ 873.731 ಗ್ರಾಂ ಬೆಳ್ಳಿ ವಸ್ತುಗಳನ್ನು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಹೊಸನಗರದ ತೋಟದ ಮನೆಯೊಂದ ಮೇಲೆ ಲೋಕಾಯುಕ್ತ ದಾಳಿ!
ಹೊಸನಗರ ತಾಲ್ಲೂಕಿನ ಜಯನಗರ ಸಮೀಪದ ಮಣಸಟ್ಟೆ ಗ್ರಾಮದಲ್ಲಿರುವ ತೋಟದ ಮನೆಯೊಂದರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಕಾರವಾರದ ಅಬಕಾರಿ ಅಧಿಕಾರಿ ರೂಪ ಎಂಬುವವರಿಗೆ ಸೇರಿದ ಆಸ್ತಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ ಹಲವಾರು ಕಡೆ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಸುತ್ತಾ ಬಳಿಯ ಮಣಸಟ್ಟೆ ತೀಟದ ಮನೆಯ ಮೇಲೆ ದಾಳಿ ನಡೆಸಿರುವ ಕುರಿತು ಅಧಿಕಾರಿಗಳು ಕಾರ್ಯಾಚರಣೆ ಮುಗಿದ ಬಳಿಕ ಮಾಹಿತಿ ನೀಡುವ ಸಾಧ್ಯತೆ ಇದೆ.
ಶಿವಮೊಗ್ಗದಲ್ಲಿಲೋಕಾಯುಕ್ತ ದಾಳಿ: ಚಿನ್ನ ವಶ?!
ಶಿವಮೊಗ್ಗ: ಬಜಾರ್ ಕರಿದೇವರ ಕೇರಿಯಲ್ಲಿರುವ ಮನೆಯೊಂದರಲ್ಲ ತಪಾಸಣೆ ನಡೆಸಿರುವ ಬೆಂಗಳೂರು ಲೋಕಾಯುಕ್ತರು ಎರಡು ಬೊಲೆರೋದಲ್ಲಿ 8 ಅಧಿಕಾರಿಗಳು ರಂಗನಾಥ ನಿಲಯದಲ್ಲಿ ಐದನೇ ಅಂತಸ್ಥಿನ ಮನೆಯೊಂದರಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಬಿಬಿಎಂಪಿ ಇಂಜಿನಿಯರ್ ಅವರಿಗೆ ಸಂಬಂಧಿಸಿದ ಕಟ್ಟಡವಾದ ಕಾರಣ ತಪಾಸಣೆ ನಡೆಸಿರುವ ಲೋಕಾಯುಕ್ತರು ಇಂಜಿನಿಯರ್ ಅವರ ಹೆಸರು ಹೇಳಲು ನಿರಾಕರಿಸಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್ ನ ಮನೆಯ ಮೇಲೆ ನಡೆದ ದಾಳಿಯ ವೇಳೆ ಬೀಗ ಒಡೆಯುವ ಹಾಗೂ ಚಿನ್ನಾಭರಣ ತೂಕ ಮಾಡುವ ಖಾಸಗಿ ವ್ಯಕ್ತಿಗಳನ್ನ ಕರೆತರಲಾಗಿದೆ.