ತೀರ್ಥಹಳ್ಳಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ವರ್ಗಾವಣೆ!
– ಜನಪರ ಅಧಿಕಾರಿಗಳಾಗಿದ್ದ ಗಜಾನನ ವಾಮನ ಸುತಾರ, ಅಶ್ವಥ್ ಗೌಡ ವರ್ಗಾವಣೆ
– ಶಿವಮೊಗ್ಗ ಜಿಲ್ಲೆಯ ನಾಲ್ವರು ಅಧಿಕಾರಿಗಳು ವರ್ಗಾವಣೆ
NAMMUR EXPRESS N EWS
ಶಿವಮೊಗ್ಗ/ ತೀರ್ಥಹಳ್ಳಿ: ರಾಜ್ಯಾದ್ಯಂತ ಡಿವೈಎಸ್ಪಿ, ಪೊಲಿಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಡಿವೈಎಸ್ಪಿಗಳು, ಇಬ್ಬರು ಪೊಲೀಸ್ ಇನ್ ಸ್ಪೆಕ್ಟರ್ ಗಳ ವರ್ಗಾವಣೆಯಾದರೆ ಒಬ್ಬರಿಗೆ ಪಿಎಸ್ಐನಿಂದ ಪಿಐಗೆ ಬಡ್ತಿ ದೊರೆತಿದೆ. ತೀರ್ಥಹಳ್ಳಿಯಲ್ಲಿ ಇಬ್ಬರು ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಡಿವೈಎಸ್ಪಿ ಗಜಾನನ ಸುತಾರ ಹಾಗೂ ಇನ್ ಸ್ಪೆಕ್ಟರ್ ಅಶ್ವಥ್ ಗೌಡ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶಿಸಿದೆ. ಡಿವೈಎಸ್ಪಿ ಗಜಾನನ ವಾಮನ ಸುತಾರರನ್ನ ಬಾಗಲಕೋಟೆಗೆ ವರ್ಗಾಯಿಸಲಾಗಿದ್ದರೆ. ಇನ್ಸೆಕ್ಟರ್ ಅಶ್ವಥ್ ಗೌಡರನ್ನ ಬೆಂಗಳೂರಿನ ಐಜಿ ಕಚೇರಿಗೆ ವರ್ಗಾಯಿಸಲಾಗಿದೆ. ತೀರ್ಥಹಳ್ಳಿಗೆ ಇನ್ ಸ್ಪೆಕ್ಟರ್ ಆಗಿ ಇಮ್ರಾನ್ ಬೇಗ್ ಎಂಬುವರು ವರ್ಗಾಯಿಸಲಾಗಿದೆ. ಶಿವಮೊಗ್ಗದಲ್ಲಿ ಡಿವೈಎಸ್ಪಿಯಾಗಿರುವ ಸುರೇಶ್ ರವರಿಗೆ ವರ್ಗಾವಣೆಯಾಗಿದೆ. ಇವರ ಜಾಗಕ್ಕೆ ರಾಜ್ಯ ಗುಪ್ತವಾರ್ತೆಯಲ್ಲಿದ್ದ ಸಂಜೀವ್ ಕುಮಾರ್ ಅವರು ವರ್ಗಾವಣೆಯಾಗಿದ್ದಾರೆ. ತುಂಗನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ಅವರು ಇನ್ ಸ್ಪೆಕ್ಟರ್ ಆಗಿ ಬಡ್ತಿಪಡೆದಿದ್ದಾರೆ. ಲೋಕಾಯುಕ್ತದಲ್ಲಿ ಇನ್ ಸ್ಪೆಕ್ಟರ್ ಆಗಿ ಬಡ್ತಿಪಡೆದು ವರ್ಗಗೊಂಡಿದ್ದಾರೆ. ಸ್ಥಳ ನಿರೀಕ್ಷೆಯಲ್ಲಿದ್ದ ಪುಲ್ಲಯ್ಯರವನ್ನ ಸಾಗರ ಪೊಲೀಸ್ ಠಾಣೆಯ ಸಿಪಿಐ ಆಗಿ ವರ್ಗವಾಗಿದ್ದಾರೆ.
ವರ್ಗಾವಣೆಯಾದ್ರು ತೀರ್ಥಹಳ್ಳಿ ಇಬ್ಬರು ಅಧಿಕಾರಿಗಳು
ತೀರ್ಥಹಳ್ಳಿಯ ಡಿವೈಎಸ್ ಪಿ ಗಜಾನನ ವಾಮನ ಸುತಾರ ಮತ್ತು ಇನ್ಸ್ಪೆಕ್ಟರ್ ಅಶ್ವಥ್ ಗೌಡ ಇವರನ್ನು ವರ್ಗಾವಣೆ ಮಾಡಿ ಸರ್ಕಾರ ಅದೇಶಿಸಿದೆ. ಡಿವೈಎಸ್ ಪಿ ಗಜಾನನ ವಾಮನ ಸುತಾರ ಅವರು ತೀರ್ಥಹಳ್ಳಿಯ ಎಲ್ಲರ ಮೆಚ್ಚಿನ ಅಧಿಕಾರಿಯಾಗಿದ್ದರು. ರಾಮೇಶ್ವರ ದೇವಸ್ಥಾನದ ಎಳ್ಳಮಾವಾಸ್ಯೆ ಜಾತ್ರೆಯಿಂದ ಹಿಡಿದು, ತೀರ್ಥಹಳ್ಳಿಯ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಮೂಲಕ ಜನಪರ ಅಧಿಕಾರಿಯಾಗಿದ್ದರು. ಹಾಗೆಯೇ ಖಡಕ್ ಅಧಿಕಾರಿಯಾಗಿ ತೀರ್ಥಹಳ್ಳಿಯನ್ನು ತಮ್ಮ ಅವಧಿಯಲ್ಲಿ ಶಾಂತಿಯ ಊರಾಗಿ ಮಾಡಿದ್ದ ಇನ್ಸ್ಪೆಕ್ಟರ್ ಅಶ್ವತ್ ಗೌಡ ಕೂಡ ವರ್ಗಾವಣೆಗೊಂಡಿದ್ದಾರೆ. ಈ ಇಬ್ಬರು ಹಾಗೂ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಮುಂದಿನ ವೃತ್ತಿ ಜೀವನಕ್ಕೆ ಶುಭ ಹಾರೈಸುತ್ತದೆ.