ತೀರ್ಥಹಳ್ಳಿ -ಶಿವಮೊಗ್ಗ ಹೊಸ ಹೈವೇ: ಸಭೆ
– ಮಾ.1ರಂದು ಭೂ ಸ್ವಾಧೀನ ಸಂಬಂಧ ಅಹವಾಲು ಸಭೆ
– ಹೈವೇ ಅಧಿಕಾರಿಗಳು ಹಾಜರ್
NAMMUR EXPRESS NEWS
ತೀರ್ಥಹಳ್ಳಿ: ನೆಲ್ಲಿಸರದಿಂದ ತೀರ್ಥಹಳ್ಳಿಯವರೆಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಈಗಾಗಲೇ ಶುರುವಾಗಲು ಎಲ್ಲಾ ಹಂತದ ಪ್ರಕ್ರಿಯೆ ಮುಗಿದಿದೆ. ಈ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರಸ್ತೆಗಾಗಿ ಭೂಮಿಯ ಭೂಸ್ವಾದೀನಕ್ಕೆ ಒಳಪಡುವ ಭೂ ಮಾಲೀಕರು ಭೂ ಸ್ವಾದೀನಾಧಿಕಾರಿಗಳ ಸಮ್ಮುಖದಲ್ಲಿ ತಮ್ಮ ಅಹವಾಲು ಮಂಡಿಸಲು ದಿನಾಂಕ 1 ನೇ ಮಾರ್ಚಿನಂದು ತೀರ್ಥಹಳ್ಳಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ 1ರವರೆಗೆ ಸಮಯ ನಿಗದಿಪಡಿಸಲಾಗಿದೆ . ಸಂಬಂಧ ಪಟ್ಟವರು ದಯವಿಟ್ಟು ಭಾಗವಹಿಸಲು ಕೋರಿದೆ. ತೀರ್ಥಹಳ್ಳಿ ಕೊಪ್ಪ ಸರ್ಕಲ್ ಇಂದ ನೆಲ್ಲಿಸರವರೆಗೆ ಚತುಷ್ಪತ ರಸ್ತೆ ನಿರ್ಮಾಣ ಆಗಲಿದ್ದು ಅನೇಕರ ಭೂಮಿ ಹಾಗೂ ಮನೆ ಹೋಗಲಿದೆ. ಸರ್ಕಾರದ ಜನರಿಗೆ ಸೂಕ್ತ ಪರಿಹಾರ ನೀಡಬೇಕಿದೆ.