ಟಾಪ್ 5 ನ್ಯೂಸ್ ಶಿವಮೊಗ್ಗ
ಶಿವಮೊಗ್ಗ : ವಿದ್ಯುತ್ ಶಾಕ್ ಗೆ ಕಾರ್ಮಿಕರು ಗಂಭೀರ ಗಾಯ
– ಶಿವಮೊಗ್ಗ : ಟೀ ಕುಡಿಯಲು ಹೋದ ಗ್ಯಾಪ್ ನಲ್ಲಿ 10 ಎಮ್ಮೆಗಳು ಕಾಣೆ
– ಶಿವಮೊಗ್ಗ : ಅನೈತಿಕ ಸಂಬಂಧದಿಂದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪತ್ನಿ
– ಶಿವಮೊಗ್ಗ : ರೌಡಿಶೀಟರ್ಗೆ ಮಾರಕಾಸ್ತ್ರ ದಿಂದ ಹಲ್ಲೆ ಗಂಭೀರ
– ಶಿವಮೊಗ್ಗ: ಬಾಂಗ್ಲಾ ಯುವಕನ ಮಾಹಿತಿ ನೀಡಲು ಮನವಿ
NAMMUR EXPRESS NEWS
ಶಿವಮೊಗ್ಗ: ಕಟ್ಟಡದಲ್ಲಿ ಶೀಟ್ ಹಾಕಲು ಸಾರ್ವೆ ಹಾಕುವಾಗ ವಿದ್ಯುತ್ ಲೈನ್ ತಗುಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಒಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾದರೆ ಇನ್ನೊಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾಶೀಪುರದದಲ್ಲಿ ನೂತನ ಕಟ್ಟಡ ನಿರ್ಮಾಣದ ವೇಳೆ ಶೀಟು ಹಾಕಲು ಮುಂದಾಗಿದ್ದ ಗಣೇಶ್ (26) ಮತ್ತು ರಾಜು (32) ಯುವಕರು ಸಾರ್ವೆ ಹಾಕುವಾಗ ಹೈಟೆನ್ಷನ್ ವಯರ್ ತಗುಲಿದೆ.
ಗಣೇಶ್ ಮತ್ತು ರಾಜುವಿಗೆ ಗಂಭೀರ ಗಾಯಗಳಾಗಿವೆ. ಗಣೇಶ್ ಗೆ ತಲೆಗೆ ಹೊಡೆದಿದೆ. ರಾಜುವಿಗೆ ಎಡಗೈಗೆ ಹೊಡೆದಿದೆ. ರಾಜು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಗಣೇಶ್ ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ್ ಗೆ ಮದುವೆಯಾಗಿದ್ದು ಒಂದೂವರೆ ವರ್ಷದ ಮಗುವಿದೆ. ರಾಜೂ ಚಳೂರಿನ ದೋಡ್ಡೇರಿ ಹುಡುಗನಾಗಿದ್ದಾನೆ. ಕಟ್ಟಡ ಮಾಲೀಕರು ಮತ್ತು ಮೇಸ್ತ್ರಿ ವಿರುದ್ಧ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ. ಕಾರ್ಮಿಕ ಇಲಾಖೆ ಕಾರ್ಮಿಕರ ಸುರಕ್ಷತೆ ಬಗ್ಗೆ ಒತ್ತು ನೀಡುವಂತೆ ಕುಟುಂಬ ಆಗ್ರಹಿಸಿದೆ.
– ಶಿವಮೊಗ್ಗ : ಟೀ ಕುಡಿಯಲು ಹೋದ ಗ್ಯಾಪ್ ನಲ್ಲಿ 10 ಎಮ್ಮೆಗಳು ಕಾಣೆ
ಶಿವಮೊಗ್ಗ: ಟೀ ಕುಡಿಯಲು ಹೋದ ಗ್ಯಾಪ್ ನಲ್ಲಿ 10 ಎಮ್ಮೆಗಳು ಕಾಣೆಯಾಗಿವೆ. ಎಮ್ಮೆಗಳನ್ನ ಕದ್ದುಕೊಂಡು ಹೋಗಿದ್ದು ಇವುಗಳನ್ನ ಹುಡುಕಿಕೊಡಿ ಎಂದು ಮಾಲೀಕರು ತುಂಗ ನಗರ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ. ವಡ್ಡಿನಕೊಪ್ಪದ ಶಿವರಾಜ್ ಎಂಬುವರು ತಮ್ಮ ಎಮ್ಮೆಗಳನ್ನ ಹೊಡೆದುಕೊಂಡು ಸೂಳೆಬೈಲಿನ ಸಂತೋಷ್ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ 22 ಎಮ್ಮೆಗಳನ್ನ ಮೇಯಿಸಲು ಬಿಟ್ಟು ಚಹ ಕುಡಿಯಲು ಅಂಗಡಿಗೆ ಹೋಗಿದ್ದಾರೆ. ಚಹ ಕುಡಿಯಲು ಹೋದ ವೇಳೆಯೂ ಸಂಜೆಯಾದ ಕಾರಣ ಚಹಕುಡಿದು ವಾಪಾಸ್ ಬಂದಾಗ 22 ಎಮ್ಮೆಗಳು ಮೇಯುತ್ತಿದ್ದ ಜಾಗದಲ್ಲಿ ಇರಲಿಲ್ಲ. ಎಮ್ಮೆಗಳು ಮನೆಗೆ ಹೋಗಿರಬೇಕೆಂದು ಶಿವರಾಜ್ ಮನೆಗೆ ಹೋಗಿದ್ದಾರೆ. ಮನೆಗೂ ಬಾರದಿದ್ದಾಗ ಶಿವರಾಜ್ ಗಾಬರಿಗೊಂಡಿದ್ದಾರೆ. ಎಮ್ಮೆಗಳಾಗಲಿ ಹಸುಗಳಾಗಲಿ ತಾವಿದ್ದ ಹಟ್ಟಿಗೆ ಬಂದೇ ಬರುತ್ತವೆ ಎಂಬುದು ಶಿವರಾಜ್ ಗೆ ಗೊತ್ತಿದ್ದರೂ. ಯಾರಾದರು ಕದ್ದುಕೊಂಡು ಹೋದರೆ ಅವುಗಳು ಬರುವುದು ಹೇಗೆ ಎಂಬ ಚಿಂತೆಗೆ ಜಾರಿದ್ದಾರೆ. ಆದರೆ ಮಧ್ಯರಾತ್ರಿಯ 12 ವೇಳೆಗೆ ನಿಗೂಢವಾಗಿ 12 ಎಮ್ಮೆಗಳು ಹಟ್ಟಿಗೆ ವಾಪಾಸಾಗಿವೆ.
ಉಳಿದ 10 ಎಮ್ಮೆಗಳು ಮಿಸ್ಸಿಂಗ್ ಆಗಿವೆ. ಈ ನಿಗೂಡತೆಯ ಬಗ್ಗೆ ಎಫ್ಐಆರ್ ನಲ್ಲಿ ಎಲ್ಲೂ ವಿವರಣೆಗಳಿಲ್ಲ. ವಾಪಾಸ್ ಬಾರದ 10 ಎಮ್ಮೆಗಳನ್ನ ಹುಡುಕಿಕೊಡಿ ಎಂದು ಶಿವರಾಜ್ ತುಂಗನಗರ ಠಾಣೆಗೆ ದೂರು ನೀಡಿದ್ದಾರೆ. ಘಟನೆ ನಡೆದಿದ್ದು ಜೂ.15 ರಂದು ದೂರು ದಾಖಲಾಗಿದ್ದು, ಎಲ್ಲಡೆ ಹುಡುಕಿದರೂ ಎಮ್ಮೆಗಳು ಪತ್ತೆಯಾಗದ ಕಾರಣ ನಿನ್ನೆ ಶಿವರಾಜ್ ತಡವಾಗಿ ದೂರು ನೀಡಿದ್ದಾರೆ.
– ಶಿವಮೊಗ್ಗ : ಅನೈತಿಕ ಸಂಬಂಧದಿಂದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಪತ್ನಿ
ಶಿವಮೊಗ್ಗ: ತನ್ನ ಪತಿಯನ್ನೆ ಮಹಿಳೆಯೊಬ್ಬರು ವಿಷಕೊಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಿದ ಘಟನೆ ಬಗ್ಗೆ ನೆರೆಯ ಜಿಲ್ಲೆ ಚಿಕ್ಕಮಗಳೂರು ಸಖರಾಯಪಟ್ಟಣದಲ್ಲಿ ವರದಿಯಾಗಿದೆ. ಕೃತ್ಯಕ್ಕೆ ಅನೈತಿಕ ಸಂಬಂಧ ಕಾರಣ ಎನ್ನಲಾಗಿದೆ. ಇಲ್ಲಿನ ಗ್ರಾಮವೊಂದರ ನಿವಾಸಿಯ ಪತ್ನಿ ಶೃತಿ ಎಂಬಾತೆ ಇನ್ನೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಪತಿಗೂ ಸಹ ಗೊತ್ತಾಗಿತ್ತು. ಇದರ ನಡುವೆ ಕಳೆದ ಜೂನ್ 16 ರಂದು ರಾತ್ರಿ ಶೃತಿ ಮತ್ತು ಕಿರಣ್ ಕುಮಾರ್ ಇಬ್ಬರು, ಶೃತಿಯ ಪತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಆ ಬಳಿಕ ಕಾರಿನಲ್ಲಿ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೀಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕುತ್ತಿಗೆ ಬಿಗಿದು ಬಾಯಿ, ಮೂಗು ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅಲ್ಲಿಂದ ಊರಿಗೆ ಬಂದು ಶೃತಿ ತಮ್ಮ ಪತಿ ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದಾನೆಂದು ತಿಳಿಸಿ ಊರಿನವರನ್ನು ನಂಬಿಸಿದ್ದರು. ಬಳಿಕ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
– ಶಿವಮೊಗ್ಗ : ರೌಡಿಶೀಟರ್ಗೆ ಮಾರಕಾಸ್ತ್ರ ದಿಂದ ಹಲ್ಲೆ ಗಂಭೀರ
ಶಿವಮೊಗ್ಗ: ನಗರದ ಎಂಆರ್ ಎಸ್ ಸರ್ಕಲ್ ಸಮೀಪ ರೌಡಿಶೀಟರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಸಂಭವಿಸಿದೆ. ಕಾರ್ತಿಕ್ ಅಲಿಯಾಸ್ ಕತ್ತೆ ಕಾರ್ತಿಕ್ ಹಲ್ಲೆಗೊಳಗಾದ ವ್ಯಕ್ತಿ. ಈತನನ್ನು ಮನೆಯಿಂದ ಕರೆಯಿಸಿಕೊಂಡು ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹೊಸಮನೆ ನಿವಾಸಿಯಾಗಿರುವ ಕಾರ್ತಿಕ್ಗೆ ರಾತ್ರಿ ಕರೆ ಮಾಡಿದ ಕೆಲವರು ಬರುವಂತೆ ತಿಳಿಸಿದ್ದರು. ಆ ಬಳಿಕ ಈತನನ್ನು ಕರೆದುಕೊಂಡು ಹೋದ ಕೆಲವರು ವಿದ್ಯಾನಗರದ ಎಂಆರ್ ಎಸ್ ಬಳಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಕಾರ್ತಿಕ್ ಪುನಃ ತನ್ನ ಮನೆಗೆ ಹೋಗಿದ್ದಾನೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಆತನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆಗೆ ಕಾರಣ ಸ್ಪಷ್ಟವಾಗಿಲ್ಲ. ಕಾರ್ತಿಕ್ ಕೆಲವರ ಹೆಸರುಗಳನ್ನು ಹೇಳಿದ್ದು, ಅದರಂತೆ ಪ್ರಕರಣ ದಾಖಲಾಗಿದೆ. ಕೋಟೆ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
– ಶಿವಮೊಗ್ಗ: ಬಾಂಗ್ಲಾ ಯುವಕನ ಮಾಹಿತಿ ನೀಡಲು ಮನವಿ
ಶಿವಮೊಗ್ಗ: ಬಾಂಗ್ಲಾದೇಶದ ಯುವಕ ಮಹಮ್ಮದ್ ರುಮಾನ್ ಹುಸೇನ್ ಬಿನ್ ಮಹಮ್ಮದ್ ಸಿರಾಜುಲ್ಲಾ ಇಸ್ಲಾಂ, (25), ಈತನು ಭದ್ರಾವತಿ ರೈಲ್ವೆ ಸ್ಟೇಷನ್ ಮಾರ್ಕೆಟ್ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದದ್ದಾಗ ಪೊಲೀಸ್ ತನಿಖೆ ವೇಳೆ ತನ್ನಲ್ಲಿ ಯಾವುದೇ ಪಾಸ್ಪೋರ್ಟ, ವೀಸಾ ಅಥವಾ ಅಧಿಕೃತ ದಾಖಲೆಗಳು ಇಲ್ಲ ವೆಂದು ಹಿಂದಿ ಭಾಷೆಯಲ್ಲಿ ತಿಳಿಸಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡು ನ್ಯಾಯಲಯಕ್ಕೆ ದೋಷ ‘ರೋಪಣೆ ಪಟ್ಟಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ. ಆರೋಪಿಯು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ. ನ್ಯಾಯಾಲಯವು ಈ ಆರೋಪಿತನ ಪತ್ತೆ ಮತ್ತು ಸ್ಥಿರಾಸ್ಥಿಯ ಮಾಹಿತಿ ಬಗ್ಗೆ ಪ್ರೊಕ್ತಮೇಶನ್ ಹೊರಡಿಸಿದ್ದು, ಈ ವ್ಯಕ್ತಿಯು ಎಲ್ಲಿಯಾದರೂ ಕಂಡು ಬಂದಲ್ಲಿ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.