ಟಾಪ್ ನ್ಯೂಸ್
ಶಿವಮೊಗ್ಗ: ವಿದ್ಯುತ್ ಶಾಕ್ನಿಂದ ಆನೆ ಸಾವು,ಇಬ್ಬರು ಆರೋಪಿಗಳ ಸೆರೆ
– ಶಿವಮೊಗ್ಗ: ದೇವಸ್ಥಾನದ ಹತ್ತಿರ ಬಂದು ಬೋನಿಗೆ ಬಿದ್ದ ಕರಡಿ
– ಶಿವಮೊಗ್ಗ : ಬಸ್ ನಿಲ್ದಾಣಕ್ಕೆ ಬಂದಾಗ ಬ್ಯಾಗ್ ಕಳವು ಪ್ರಕರಣದ ಆರೋಪಿಗಳ ಬಂಧನ
– ಭದ್ರಾವತಿ: ಮನೆಗಳ್ಳತನದ ಆರೋಪಿಯ ಬಂಧನ
– ಶಿರಾಳಕೊಪ್ಪ : ಆನ್ಲೈನ್ ವಂಚನೆಯಿಂದ 74 ಲಕ್ಷ ಕಳೆದುಕೊಂಡ ವ್ಯಾಪಾರಿ
NAMMUR EXPRESS NEWS
ಶಿವಮೊಗ್ಗ : ಆಯನೂರಿನ ಬಳಿಯ ವೀರಗಾರನ ಬೈರನ ಕೊಪ್ಪದಲ್ಲಿ ಜೋಳದ ಹೊಲಕ್ಕೆ ತೋಡಿರುವ ಕಂದಕಕ್ಕೆ ಆನೆಯೊಂದು ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆಯ ಮರಣೋತ್ತರ ಪರೀಕ್ಷೆ ನಡೆದಿದೆ. ನಾಲ್ವರು ಪಶುವೈದ್ಯರು, ಅರಣ್ಯ ವನ್ಯ ಜೀವಿ ವಿಭಾಗದ ಡಿಎಫ್ ಒ ಪ್ರಸನ್ನ ಪಟಗಾರ್ ಮತ್ತು ಲಯನ್ ಸಫಾರಿಯ ಡಿಎಫ್ ಒ ಆಮರಾಕ್ಷರ್, ತಹಶೀಲ್ದಾರ್ ಗಿರೀಶ್ ಮತ್ತು ಗ್ರಾಮಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಆನೆಯ ಪೋಸ್ಟ್ ಮಾರ್ಟಂ ನಡೆದಿದೆ. ಆನೆ ಸತ್ತು ಮೂರು ದಿನಗಳ ನಂತರ ಮರಣೋತ್ತರ ಪರೀಕ್ಷೆ ನಡೆದಿದ್ದು ಆನೆಯ ಮೃತದೇಹ ಊದಿಕೊಂಡು ದುರ್ವಾಸನೆ ಹೊಡೆಯಲು ಆರಂಭಿಸಿದೆ. ಪ್ರಾಥಮಿಕ ಮಾಹಿತಿ ಆಧಾರದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಹನುಮಂತ ನಾಯ್ ಮತ್ತು ಓರ್ವನನ್ನು ಬಂಧನಕ್ಕೊಳಪಡಿಸಿ ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೊಳ ಪಡಿಸಲಾಗಿದೆ. ಪ್ರಾಥಮಿಕ ವರದಿಯ ಮೇಲೆ ದಾಖಲಾದ ಎಫ್ ಐಆರ್ ಆಧಾರದ ಮೇರೆಗೆ ವಿದ್ಯುತ್ ಶಾಕ್ ನಿಂದ ಆನೆ ಸತ್ತಿರುವುದು ತಿಳಿದು ಬಂದಿದೆ. ಅದರ ಆಧಾರದ ಮೇರೆಗೆ ಜಮೀನಿನ ಮಾಲೀಕ ಸೇರಿದಂತೆ ಇಬ್ಬರನ್ನು ಅರಣ್ಯ ಇಲಾಖೆ ಬಂಧಿಸಿದೆ. ಆನೆಮೃತ ದೇಹದ ಸ್ಯಾಂಪಲ್ಸ್ & ಸಂಗ್ರಹಿಸಲಾಗಿದೆ ಎಂದು ಡಿಎಫ್ ಒ ಪ್ರಸನ್ನ ಪಟಗಾರ್ ಮಾಹಿತಿ ನೀಡಿದ್ದಾರೆ.
– ಶಿವಮೊಗ್ಗ: ದೇವಸ್ಥಾನದ ಹತ್ತಿರ ಬಂದು ಬೋನಿಗೆ ಬಿದ್ದ ಕರಡಿ
ಶಿವಮೊಗ್ಗ : ಹೊಳೆಹೊನ್ನೂರು ಭಾಗದಲ್ಲಿ, ಡಣಾಯಕಪುರ ಗ್ರಾಮದಲ್ಲಿ ಕರಡಿಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸ್ಥಳೀಯ ಕಾಲಭೈರವೇಶ್ವರ ದೇವಸ್ಥಾನದ ಸಮೀಪ ಕರಡಿಯು ಸೆರೆಯಾಗಿದೆ. ಕಳೆದ 15 ದಿನಗಳಿಂದ ಈ ಭಾಗದಲ್ಲಿ ಕರಡಿಯಿಂದಾಗಿ ಆತಂಕ ಸೃಷ್ಟಿಯಾಗಿತ್ತು. ಕತ್ತಲ ಹೊತ್ತಲ್ಲಿ ಇಲ್ಲಿ ಹೆಚ್ಚು ಮಲಗುತ್ತಿದ್ದ ಕರಡಿ ಜನರನ್ನ ಭಯ ಬೀಳಿಸಿತ್ತು. ಸ್ಥಳೀಯರು ಸಂಜೆಯಾಗುತ್ತಿದ್ದಂತೆ ಮನೆ ಸೇರಿಕೊಳ್ಳುವ ಸನ್ನಿವೇಶ ಕರಡಿ ನಿರ್ಮಾಣ ಮಾಡಿತ್ತು. ಈ ಆಧುನಿಕ ಕರಡಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದ ಹೊಳೆಹೊನ್ನೂರು ಅರಣ್ಯ ಸಿಬ್ಬಂದಿ ಮೂರು ಕಡೆ ಬೋನ್ ಇರಿಸಿದ್ದರು. ದೇವಸ್ಥಾನದ ಸಮೀಪದ ಬೋನಿಗೆ ಕರಡಿ ಬಿದ್ದಿದೆ. ಇನ್ನೂ ಕರಡಿಯನ್ನ ಸಂರಕ್ಷಿಸಿರುವ ಅರಣ್ಯ ಇಲಾಖೆ ಅದನ್ನು ಸಂರಕ್ಷಿತ ಕಾಡಿಗೆ ಬಿಟ್ಟಿದ್ದಾರೆ.
– ಶಿವಮೊಗ್ಗ : ಬಸ್ ನಿಲ್ದಾಣಕ್ಕೆ ಬಂದಾಗ ಬ್ಯಾಗ್ ಕಳವು ಪ್ರಕರಣದ ಆರೋಪಿಗಳ ಬಂಧನ
ಶಿವಮೊಗ್ಗ : ಹೊಸಮನೆ ಮತ್ತು ನ್ಯೂಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಬ್ಯಾಗ್ ಕಳವು ಮತ್ತು ಮನೆಕಳ್ಳತನ ಪ್ರಕರಣಗಳು ಆಯಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಆರೋಪಿಗಳನ್ನ ಬಂಧಿಸಿ ಚಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗದ ನಿವಾಸಿ ಪ್ರಭಾವತಿ ಎಂಬುವರು ಭದ್ರಾವತಿ ಬಸ್ ನಿಲ್ದಾಣಕ್ಕೆ ಬಂದಾಗ ಮಹಿಳೆಯೊಬ್ಬರು ಬ್ಯಾಗ ಹಿಡಿದು ಕಳುವಾದ ಪ್ರಕರಣವನ್ನ ಬೇಧಿಸಿದ ಪೊಲೀಸರು 48 ಗಂಟೆಯ ಒಳಗೆ ಆರೋಪಿಯನ್ನ ಬಂಧಿಸಿ 20 ಲಕ್ಷ ರೂ ಮೌಲ್ಯದ 276.75 ಗ್ರಾಂ ತೂಕದ ಬಂಗಾರವನ್ನ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಮಲಮ್ಮ ಎಂದು ಗುರುತಿಸಲಾಗಿದ್ದು ಭದ್ರಾವತಿ ನಿವಾಸಿಯಾಗಿದ್ದಾರೆ. ಚಿನ್ನಾಭರಣದ ಜೊತೆಗೆ 16 ಸಾವಿರ ರೂ ಮೌಲ್ಯದ ಎರಡು ರೇಷ್ಮೆ ಸೀರೆಯೂ ಪತ್ತೆಯಾಗಿದೆ.
– ಭದ್ರಾವತಿ: ಮನೆಗಳ್ಳತನದ ಆರೋಪಿಯ ಬಂಧನ
ಭದ್ರಾವತಿ: ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿನೋದ್ ಜಿ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಹಬ್ಬಕ್ಕೆ ತೆರಳಿದಾಗ 20 ಲಕ್ಷ ರೂ. ಮೌಲ್ಯದ 400 ಗ್ರಾಂ ಬಂಗಾರದ ಆಭರಣವನ್ನ ಕದ್ದಕೊಂಡು ಹೋದ ಪ್ರಕರಣ ದಾಖಲಾಗಿತ್ತು. ಹೊಸಮನೆ ಕೇಶವಾಪುರದ ಐಟಿ ಉದ್ಯೋಗಿ ನಿತಿನ್ ಎಂಬ 27 ವರ್ಷದ ಯುವಕನನ್ನ ಪತ್ತೆ ಮಾಡಿದ ಪೊಲೀಸರು ಆತನಿಂದ 259 ಗ್ರಾಂ ಚಿನ್ನಾಭರಣವನ್ನ ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
– ಶಿರಾಳಕೊಪ್ಪ: ಆನ್ಲೈನ್ ವಂಚನೆಯಿಂದ 74 ಲಕ್ಷ ಕಳೆದುಕೊಂಡ ವ್ಯಾಪಾರಿ
ಶಿರಾಳಕೊಪ್ಪ : ಶಿರಾಳಕೊಪ್ಪ ಪಟ್ಟಣದ ನೆಹರೂ ಕಾಲೊನಿ ವ್ಯಾಪಾರಿ ಯೊಬ್ಬರು ಅನ್ಲೈನ್ ವಂಚಕರ ಜಾಲಕ್ಕೆ ಸಿಲುಕಿ 34.61 ಲಕ್ಷ ಕಳೆದುಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವ ವ್ಯಾಪಾರಿ ಮೊಬೈಲ್ಗೆ ಬ್ಯಾಂಕ್ ಹೆಸರು ಇರುವ ಡಾಟ್ ಎಪಿಕೆ ಎಂಬ ಫೈಲ್ನ ಲಿಂಕ್ ಬಂದಿದೆ. ಬ್ಯಾಂಕ್ನ ಹೆಸರು ಇದ್ದುದರಿಂದ ಲಿಂಕ್ ಮೇಲೆ ಕ್ಲಿಕ್ ಮಾಡಿದ್ದಾರೆ. ಆಗ ವಂಚಕರು ಅವರ ಖಾತೆ ಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಿದ್ದಾರೆ. ವ್ಯಾಪಾರಕ್ಕಾಗಿ ಸಾಲ ಮಾಡಿದ್ದ ಅವರು ಉಳಿತಾಯ ಖಾತೆಯಲ್ಲಿ ಆ ಹಣ ಇಟ್ಟುಕೊಂಡಿದ್ದರು. ಖಾತೆಯಿಂದ ಮೊದಲು 3,61,469 ಮತ್ತು ನಂತರ 74,000 ಮೊತ್ತ ಕಡಿತಗೊಂಡಿದೆ. ಈ ಕುರಿತು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.