ಟಾಪ್ ನ್ಯೂಸ್
– ಭದ್ರಾವತಿ: ಕೂಲಿ ಕೆಲಸ ಮಾಡುವ ವ್ಯಕ್ತಿಯ ಮೇಲೆ ಕರಡಿ ದಾಳಿ ಮಾಡಿ ಗಂಭೀರ ಗಾಯ
– ಭದ್ರಾವತಿ: 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ
– ಶಿವಮೊಗ್ಗ : ಮೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ: ಐವರ ವಿರುದ್ಧ ಕೇಸ್
– ಶಿವಮೊಗ್ಗ : ಬೈಕ್ ಅಪಘಾತದಲ್ಲಿ ಐಟಿಐ ವಿದ್ಯಾರ್ಥಿಗಳಿಬ್ಬರು ಸಾವು
NAMMUR EXPRESS NEWS
ಶಿವಮೊಗ್ಗ: ಭದ್ರಾವತಿ ತಾಲೂಕಿನ ಅಂತರಗಂಗೆ ಸಮೀಪದ ಕೆ ಹೆಚ್ ನಗರದ ನಿವಾಸಿ ದೇವೇಂದ್ರಪ್ಪ(52) ಎನುವವರ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಸಂಭವಿಸಿದೆ. ಗಾಯಾಳುವಿನ ತಲೆ ಮುಖ ಸೇರಿದಂತೆ ದೇಹದ ವಿವಿಧ ಕಡೆ ಗಂಭೀರ ಗಾಯಗಳಾಗಿವೆ. ಈತನನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಕೆ. ಹೆಚ್ ನಗರದಿಂದ ಬಿಸಿಲು ಮನೆಯಲ್ಲಿ ಜಮೀನು ಕೆಲಸಕ್ಕೆ ಹೋಗಿ ವಾಪಸ್ಸ್ ಆಗುವಾಗ ಕರಡಿ ದಿಢೀರ್ ದಾಳಿ ನಡೆಸಿದೆ. ದೇವೇಂದ್ರಪ್ಪ ಮೂಲತಃ ಟ್ರೈಲರಿಂಗ್ ಕೆಲಸ ಮಾಡುವವರಾಗಿದ್ದಾರೆ. ಟೈಲರಿಂಗ್ ಜೊತೆಗೆ ಕೃಷಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
– ಭದ್ರಾವತಿ: 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ
ಭದ್ರಾವತಿ: ತಾಲ್ಲೂಕಿನ 43 ವರ್ಷದ ವ್ಯಕ್ತಿಯು 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ವ್ಯಕ್ತಿಗೆ 4 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ 51,000 ದಂಡ, ದಂಡ ಕಟ್ಟಲು ವಿಫಲನದಲ್ಲಿ ಮೂರು ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಿದೆ. ಪರಿಹಾರ ರೂಪವಾಗಿ ದಂಡದ ಮೊತ್ತದಲ್ಲಿ 50,000 ಮತ್ತು ಸರ್ಕಾರದಿಂದ 2 ಲಕ್ಷ ರೂಗಳನ್ನು ನೊಂದ ಬಾಲಕಿಗೆ ನೀಡಲು ಆದೇಶಿಸಿದ್ದಾರೆ. 2023ರಲ್ಲಿ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 376(ಎ)(ಬಿ) ಐಪಿಸಿ ಮತ್ತು ಕಲಂ 08 ಪೋಕೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಆಗಿನ ತನಿಖಾಧಿಕಾರಿ ನಗರ ಸಿಪಿಐ ಶಾಂತಿನಾಥ್ ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ಹೆಚ್. ಆರ್ ವಾದ ಮಂಡಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಮೋಹನ್ ಜೆ. ಎಸ್ ಈ ತೀರ್ಪು ನೀಡಿದ್ದಾರೆ.
– ಶಿವಮೊಗ್ಗ : ಮೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ, ಐವರ ವಿರುದ್ಧ ಕೇಸ್
ಶಿವಮೊಗ್ಗ : ಮೆಸ್ಕಾಂ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂದೀಶ್ (38) ಸಾವಿಗೂ ಮುನ್ನ ಆಡಿಯೋ ರೆಕಾರ್ಡ್ ಮಾಡಿದ್ದು, ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಳ್ಳುತ್ತಿದ್ದೇನೆ. ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಕೆಲವರ ಹೆಸರು ಹೇಳಿರುವುದಾಗಿ ತಿಳಿದು ಬಂದಿದೆ. ಇದನ್ನ ಆಧರಿಸಿ ಕುಂಸಿ ಪೊಲೀಸ್ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ : ಬೈಕ್ ಅಪಘಾತದಲ್ಲಿ ಐಟಿಐ ವಿದ್ಯಾರ್ಥಿಗಳಿಬ್ಬರು ಸಾವು
ಶಿವಮೊಗ್ಗ : ನಗರದ ತೀರ್ಥಹಳ್ಳಿ ರಸ್ತೆಯ ಕಾನೇಹಳ್ಳಿ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಜನೂರು ಐ ಟಿ ಐ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿದ್ದಾರೆ. ಸ್ಥಳದಲ್ಲೇ ಆರ್ ಎಂ ಎಲ್ ನಗರದ ನಿಸಾರ್ (20)ಆರ್ ಎಂ ಎಲ್ ಮತ್ತು ಮಂಜುನಾಥ ಬಡಾವಣೆಯ ಯಶವಂತ್ ಮೃತರಾದವರು. ಬೆಳಗ್ಗೆ ಕಾಲೇಜಿಗೆ ಕೆಟಿಎಂ ಬೈಕ್ನಲ್ಲಿ ಕಾಲೇಜಿಗೆ ಹೋಗುವಾಗ ಅತಿ ವೇಗದಿಂದ ಬೈಕ್ ಸವಾರನ ನಿಯಂತ್ರಣ ತಪ್ಪಿ ಜಾಹೀರಾತುವಿನ ಹ್ಯಾಂಗರ್ ಕಂಬಕ್ಕೆ ಗುದ್ದಿದೆ. ಇದರಿಂದ ಬೈಕ್ ಸವಾರನ ಮತ್ತು ಚಾಲಕನ ಇಬ್ಬರ ತಲೆಗೂ ಬಲವಾದ ಹೊಡೆತ ಬಿದ್ದಿದ್ದರಿಂದ ಇಬ್ಬರೂ ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ. ಕೆಟಿಎಂ ಬೈಕ್ನ್ನು ಯಶವಂತ್ ಚಲಾಯಿಸುವಾಗ ಈ ಘಟನೆ ನಡೆದಿದೆ.
ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ನಂತರ ಕುಟುಂಬದವರಿಗೆ ಒಪ್ಪಿಸಲಾಗಿದೆ. ಯುಶವಂತ್ ದ್ವಿತೀಯ ವರ್ಷದ ಐಟಿಐ ವಿದ್ಯಾರ್ಥಿಯಾದರೆ, ನಿಸಾರ್ ಮೊದಲನೆ ವರ್ಷದ ಐ ಟಿ ಐ ವಿದ್ಯಾರ್ಥಿಯಾಗಿದ್ದಾನೆ.