– ಮಾರಕಾಸ್ತ್ರ, ಖಾರದಪುಡಿಯೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ಆರೋಪ
– ಸಾಗರ: ನಡು ರಸ್ತೆಯಲ್ಲಿ ಗನ್ ಹಿಡಿದು ಯುವಕನ ಹುಚ್ಚಾಟ
– ತೀರ್ಥಹಳ್ಳಿಯಲ್ಲಿ 6 ಮಂದಿ ಕೆಎಫ್ಡಿ ಪಾಸಿಟಿವ್!
– ಭದ್ರಾವತಿ: ಗ್ಯಾಸ್ ಸಿಲಿಂಡರ್ ಎಸೆದು ಹೆದರಿಸ್ತಿದ್ದ ವ್ಯಕ್ತಿ ವಿರುದ್ಧ ಹೆಚ್ಚುವರಿ ಆಕ್ಷನ್!
NAMMUR EXPRESS NEWS
ಶಿವಮೊಗ್ಗ: ಮಾರಕಾಸ್ತ್ರ, ಖಾರದ ಪುಡಿ ಹಿಡಿದುಕೊಂಡು ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ KSRTC ಬಸ್ ಡಿಪೋ ಪಕ್ಕದ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಬ್ಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಡಿಪೋ ಪಕ್ಕದ ಭಾಗದಲ್ಲಿ ಓಡಾಡುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ, ಖಾರದ ಪುಡಿ ಎರಚಿ ಚಿನ್ನಾಭರಣ, ನಗದು ದರೋಡೆಗೆ ಹೊಂಚು ಹಾಕಿದ್ದರು ಎಂದು ಆರೋಪಿಸಲಾಗಿದೆ.
ಗಸ್ತು ತಿರುಗುತ್ತಿದ್ದ ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಅಖಿ ಖಾನ್ ಅಲಿಯಾಸ್ ಇಡ್ಲಿ (35), ಮುಸ್ತಾಕ್ ಅಹ್ಮದ್ (32), ಆದಿಲ್ ಪಾಷಾ (23), ಮಾಝ್ ಬೇಗ್ (20) ಎಂಬಾತನನ್ನು ಬಂಧಿಸಲಾಗಿದೆ ತಿಳಿದು ಬಂದಿದೆ. ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳ ಬಳಿ ಕಬ್ಬಿಣ ರಾಡ್, ಲಾಂಗ್ ಮತ್ತು ಚಾಕು ಪತ್ತೆಯಾಗಿದೆ. 50 ಗ್ರಾಂ ಖಾರದ ಪುಡಿ, ಎರಡು ಮೊಬೈಲ್ ಫೋನ್ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಡು ರಸ್ತೆಯಲ್ಲಿ ಗನ್ ಹಿಡಿದು ಯುವಕನ ಹುಚ್ಚಾಟ
ಸಾಗರ : ಯುವಕನೋರ್ವ ಪಾನಮತ್ತನಾಗಿ ನಡು ರಸ್ತೆಯಲ್ಲಿ ಗನ್ ಹಿಡಿದು ಹುಚ್ಚಾಟ ಮೆರೆದ ಘಟನೆ ಸಾಗರ ಮಾರ್ಕೆಟ್ ರಸ್ತೆ ಹಿಂಭಾಗದಲ್ಲಿ ನಡೆದಿದೆ. ನಕಲಿ ಗನ್ ಹಿಡಿದು ಯುವಕ ಪಾನಮತ್ತನಾಗಿ ನಡು ರಸ್ತೆಯಲ್ಲಿ ಶೂಟ್ ಮಾಡುತ್ತೇನೆ ಎಂದು ಸ್ಥಳೀಯರಿಗೆ ಧಮ್ಕಿ ಹಾಕಿದ್ದಾನೆ. ಗನ್ ನೋಡಿ ಕೆಲಕಾಲ ಜನರು ಭಯಭೀತರಾಗಿದ್ದಾರೆ. ಅವಾಜ್ ಹಾಕಿದ ಯುವಕನಿಗೆ ಸ್ಥಳೀಯ ಯುವಕರು ಥಳಿಸಿದ್ದಾರೆ. ಪ್ರಕರಣ ಸಂಬಂಧ ಸಾಗರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ತೀರ್ಥಹಳ್ಳಿಯಲ್ಲಿ 6 ಮಂದಿ ಕೆಎಫ್ಡಿ ಪಾಸಿಟಿವ್!
ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯ ಆತಂಕ ಇನ್ನಷ್ಟು ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಆರು ಪ್ರಕರಣಗಳು ಪತ್ತೆಯಾಗಿವೆ. ಅವರನ್ನ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೆಎಫ್ಡಿ ಪಾಸಿಟಿವ್ ಏರಿಯಾದಲ್ಲಿ ಜ್ವರ ಕಾಣಿಸಿದ ಆರು ಮಂದಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ತೀರ್ಥಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಿತ್ತು. ಅಲ್ಲದೆ ಅವರ ಬ್ಲಡ್ ಸ್ಯಾಂಪಲ್ ಪಡೆದು ಶಿವಮೊಗ್ಗದ ವೈರಲ್ ಡಯಾಗ್ನಸ್ಟಿಕ್ ಲ್ಯಾಬ್ಗೆ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿದ್ದು ಸದ್ಯ ಜ್ವರ ಕಾಣಿಸಿಕೊಂಡವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಎಸೆದು ಹೆದರಿಸ್ತಿದ್ದ ವ್ಯಕ್ತಿ ವಿರುದ್ಧ ಹೆಚ್ಚುವರಿ ಆಕ್ಷನ್!
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿಯ ಹೊಸಮನೆ ಕಾಲೋನಿಯ ಎನ್ಎಂಸಿ ಮೂರನೇ ತಿರುವಿನಲ್ಲಿ ಕುಡುಕನೊಬ್ಬ ತುಂಬಿದ ಸಿಲಿಂಡರ್ನ್ನ ಎತ್ತಿಹಾಕಿ ಸ್ಫೋಟಿಸಲು ಯತ್ನಿಸಿದ ವಿಚಾರದ ಬಗ್ಗೆ ಮಲೆನಾಡು ಟುಡೆ ವರದಿ ಮಾಡಿತ್ತು. ವರದಿಯಲ್ಲಿ ಸ್ಥಳೀಯರು ಮಾಡಿದ್ದ ಆರೋಪಗಳನ್ನು ವಿವರಿಸಲಾಗಿತ್ತು. ಭದ್ರಾವತಿ ಹೊಸಮನೆ ಕಾಲೋನಿಯ ಜನರ ಒತ್ತಾಯದ ಪ್ರತಿಯಾಗಿ ಸ್ಥಳೀಯರು ಪೊಲೀಸರಿಗೆ ನೀಡಿದ ಮನವಿ ಕಾಪಿ ಹಾಗೂ ವಿಡಿಯೋವನ್ನು ಎಸ್.ಪಿ.ಮಿಥುನ್ ಕುಮಾರ್ ರವರ ಗಮನಕ್ಕೆ ತರಲಾಗಿತ್ತು.
ಸಧ್ಯ ಈ ವಿಚಾರವಾಗಿ ಭದ್ರಾವತಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸರು ಆರೋಪಿಯನ್ನು ಬಿಟ್ಟು ಕಳುಹಿಸಿದ್ದರು ಎಂದು ಸ್ಥಳೀಯರು ದೂರಿದ್ದರು. ಆದರೆ ಘಟನೆ ನಡೆದ ದಿನವೇ ಆರೋಪಿಯನ್ನ ಮಾದಕವಸ್ತು ಸೇವನೆಯ ಸಂಬಂಧ ಪರೀಕ್ಷೆಗೆ ಒಳಪಡಿಸಿ ಆತನ ವಿರುದ್ಧ ಪಿಟ್ಟಿ ಕೇಸ್ ದಾಖಲಿಸಿದ್ದರು ಹೊಸಮನೆ ಪೊಲೀಸರು. ಈ ಸಂಬಂಧ ಪೊಲೀಸ್ ಮಾಧ್ಯಮ ಮಾಹಿತಿ ಗ್ರೂಪ್ನಲ್ಲಿ ಸಂದೇಶವನ್ನು ಸಹ ರವಾನೆ ಮಾಡಲಾಗಿದೆ. ಪ್ರಕರಣ ಸಂಬಂಧ ಯುವಕನ್ನ ಠಾಣೆಗೆ ಕರೆದುಕೊಂಡು ಬಂದು, ಅವನಿಗೆ ಸೂಕ್ತ ಎಚ್ಚರಿಕೆ ನೀಡಿ, ತಿಳುವಳಿಕೆ, ಬುದ್ದಿವಾದ ಹೇಳಿ, ಬಂದೋಬಸ್ತ್ ಮಾಡಿದ್ದು, ಕಲಂ 92ಒ & ಆರ್ ಕೆಪಿ ಆ್ಯಕ್ಟ್ ಅಡಿಯಲ್ಲಿ ಲಘು ಪ್ರಕರಣ ದಾಖಲಿಸಿ.
ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತದೆ ಎಂದು ತಿಳಿಸಿದ್ದಾರೆ. ಭದ್ರಾವತಿ ಜನರ ಮಾಹಿತಿಗಾಗಿ ಪೊಲೀಸ್ ಇಲಾಖೆ ತಿಳಿಸಿದ ವಿವರವನ್ನು ಸಹ ಇಲ್ಲಿ ನೀಡಲಾಗಿದೆ. ಇದೇ ವಿಚಾರದಲ್ಲಿ ಪೊಲೀಸರು ಸಿಆರ್ಪಿಸಿ ಆಕ್ಟರ್ 107 ಅಡಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರ್ವಜನಿಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದರೇ ಆತ ಅಪಾಯಕಾರಿಯೇ. ಆತನ ವಿರುದ್ಧ ಕ್ರಮ ಅನಿವಾರ್ಯ. ಹೊಸಮನೆ ಎನ್ಎಂಸಿಯಲ್ಲಿಯು ಇದೇ ರೀತಿಯಾಗಿತ್ತು. ವೈರಲ್ ಆದ ವಿಡಿಯೋದ ಮೂಲ ಹುಡುಕಿಹೋದ ಸಂದರ್ಭದಲ್ಲಿ, ಸ್ಥಳೀಯರು ದೂರು ಹೇಳಿಕೊಂಡಿದ್ದರು. ಮಲೆನಾಡು ಟುಡೆ ಜನರ ನೋವು ಹಾಗೂ ಧ್ವನಿಯನ್ನು ಎಸ್ಪಿ ಮಿಥುನ್ ಕುಮಾರ್ರವರಿಗೆ ತಲುಪಿಸಿ ಹಾಗೂ ವರದಿಯನ್ನ ಬಿತ್ತರಿಸಿತ್ತು. ಇದರ ಬೆನ್ನಲ್ಲೆ ಭದ್ರಾವತಿ ಪೊಲೀಸರು ಈ ಮೊದಲೇ ಕೈಗೊಂಡ ಕ್ರಮ ಹಾಗೂ ಸದ್ಯ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರ ಬಗ್ಗೆಯು ಮಲೆನಾಡು ಟುಡೆ ವಿವರವಾಗಿ ವರದಿ ಮಾಡಿದೆ.