ಟಾಪ್ ನ್ಯೂಸ್ ಶಿವಮೊಗ್ಗ
– ತೀರ್ಥಹಳ್ಳಿಯಲ್ಲಿ ಈಜಲು ಹೋಗಿ ಪ್ರಾಣ ಬಿಟ್ಟರೇ ಬ್ಯಾಂಕ್ ಮ್ಯಾನೇಜರ್!?
– ತುಂಗಾ ನದಿಯ ತೀರದಲ್ಲಿ ಚಪ್ಪಲಿ, ಮೊಬೈಲ್ ಪತ್ತೆ– ಶಿವಮೊಗ್ಗ : ಹಸುವಿನ ಮೈ ತೊಳೆಯಲು ನದಿಗೆ ಹೋದ ವ್ಯಕ್ತಿ ನಾಪತ್ತೆ
– ಸಾಗರ: ಬಾದಾಮ್ ಪೌಡರಲ್ಲಿ ಪ್ಲಾಸ್ಟಿಕ್ ಪೇಪರ್, ವಯರ್ ಪತ್ತೆ.!
– ಭದ್ರಾವತಿ: ಭದ್ರಾವತಿಯಲ್ಲಿ ಹೆಚ್ಚಾಗುತ್ತಿರುವ ದರೋಡೆ ಪ್ರಕರಣ
NAMMUR EXPRESS NEWS
ತೀರ್ಥಹಳ್ಳಿ: ತುಂಗಾ ನದಿಯಲ್ಲಿ ಮತ್ತೊಂದು ಬಲಿಯಾಗಿರುವ ಅನುಮಾನ ಮೂಡಿದೆ. ಸೋಮವಾರ ಮಧ್ಯಾಹ್ನ ವೇಳೆಗೆ ತುಂಗಾ ನದಿಯ ದಡದಲ್ಲಿ ಚಪ್ಪಲಿ, ಮೊಬೈಲ್ ಬಿಟ್ಟು ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಮೊಬೈಲ್ ಆಧಾರದಲ್ಲಿ ಅವರು ಬ್ಯಾಂಕ್ ಮ್ಯಾನೇಜರ್ ಎಂದು ತಿಳಿದು ಬಂದಿದೆ. ಈತ ಈಜಲು ಹೋಗಿ ನದಿಯಲ್ಲಿ ಮುಳುಗಿದ್ದಾರೆ. ಮೂಲತಃ ಅಂದ್ರಪ್ರದೇಶದ ವಿಶಾಖಪಟ್ಟಣದ ಶ್ರೀವತ್ಸ ನಾಪತ್ತೆಯಾದವರು. ಅರಳಸುರಳಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಆಗಿದ್ದು ತೀರ್ಥಹಳ್ಳಿಯಲ್ಲಿ ವಾಸವಿದ್ದರು. ತುಂಗಾ ನದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದು ಹುಡುಕಾಟ ನಡೆಸುತ್ತಿದ್ದಾರೆ. ಸಂಬಂಧಿಕರು ಚೆನ್ನೈ ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ : ಹಸುವಿನ ಮೈ ತೊಳೆಯಲು ನದಿಗೆ ಹೋದ ವ್ಯಕ್ತಿ ನಾಪತ್ತೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾಪುರದ ತುಂಗ ನದಿಗೆ ವ್ಯಕ್ತಿಯೊಬ್ಬ ಹಸು ತೊಳೆಯಲು ಹೋಗಿದ್ದು, ನೀರಿನಲ್ಲಿ ಕಾಣೆಯಾಗಿದ್ದು ಆತನಿಗಾಗಿ ಶೋಧಕಾರ್ಯ ನಡೆದಿದೆ. ಅಶ್ರಫ್ ಎಂಬ 42 ವರ್ಷದ ವ್ಯಕ್ತಿ ಭದ್ರಪುರದಲ್ಲಿ ತುಂಗಾ ನದಿಯಲ್ಲಿ ಹಸು ತೊಳೆಯಲು ಹೋಗಿ ಕಾಣೆಯಾಗಿದ್ದಾನೆ ಎಂದು 112 ಕಂಟ್ರೋಲ್ ರೂಮ್ ಗೆ ಕರೆ ಬಂದಿದೆ. ಶಿವಮೊಗ್ಗ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ತೆರಳಿ ಸದರಿಯವರ ಶೋಧನಾ ಕಾರ್ಯ ನಡೆಸುತ್ತಿದ್ದಾರೆ.
– ಸಾಗರ: ಬಾದಾಮ್ ಪೌಡರಲ್ಲಿ ಪ್ಲಾಸ್ಟಿಕ್ ಪೇಪರ್, ವಯರ್ ಪತ್ತೆ.!
ಸಾಗರ: ಬಹುತೇಕ ಜನರು ಯಾವುದೇ ಕಂಪನಿಯ ಆಹಾರದ ತಿನಿಸಾದರೂ ಗುಣಮಟ್ಟವನ್ನು ಇಷ್ಟ ಪಡುತ್ತಾರೆ. ಅದಕ್ಕೆ ಹೆಚ್ಚು ಒತ್ತು ನೀಡಿಯೇ ಕಂಪನಿಗಳು ಆಹಾರವನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಆದರೇ ಸ್ಪರ್ಷ್ ಬಾದಾಮ್ ಪೌಡರ್ ಮಾತ್ರ ಇದಕ್ಕೆ ಹೊರತಾದಂತಿದೆ. ಈ ಪೌಡರ್ ಖರೀದಿಸಿದಂತ ವ್ಯಕ್ತಿಯೊಬ್ಬರಿಗೆ ಪ್ಯಾಕೇಟ್ ನಲ್ಲಿ ಪ್ಲಾಸ್ಟಿಕ್ ಪೇಪರ್, ವಯರ್ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಮಾರಿಕಾಂಬಾ ದೇವಸ್ಥಾನದ ಸಮೀಪದಲ್ಲಿರುವಂತ ಗಜಾನನ ರೈಸ್ ಸ್ಟೋರ್ ನಿಂದ ವ್ಯಕ್ತಿಯೊಬ್ಬರು ಸ್ಪರ್ಶ್ ಬಾದಾಪ್ ಪೌಡರ್ ಅನ್ನು ಖರೀದಿಸುತ್ತಾರೆ. ಮಗಳಿಗೆ ಇಷ್ಟವಾದಂತ ಬಾದಾಮ್ ಪೌಡರ್ ಖರೀದಿಸಿ ಮನೆಗೆ ಕೊಂಡೊಯ್ದು ನೀಡಿದ್ದಾರೆ. ಸ್ಪರ್ಶ್ ಬಾದಾಮ್ ಪೌಡರ್ ಅನ್ನು ಬಟ್ಟಲಿಗೆ ಹಾಕಿಕೊಂಡು ತಿನ್ನುವಂತ ಸಂದರ್ಭದಲ್ಲಿ ಮೊದಲಿಗೆ ಪ್ಲಾಸ್ಟಿಕ್ ವಯರ್ ಮಾದರಿಯ ವಸ್ತುವೊಂದು ಪತ್ತೆಯಾಗುತ್ತದೆ. ಇದನ್ನು ಪೋಷಕರ ಗಮನಕ್ಕೆ ತಂದಿದ್ದಾರೆ. ಇದನ್ನು ಕಂಡಂತ ಅವರಿಗೆ ಅಚ್ಚರಿಯಾಗಿದೆ. ಅದನ್ನು ತೆಗೆದು ಬಿಸಾಡಿದ ಬಳಿಕ, ಬಾದಾಮ್ ಪೌಡರ್ ಪುತ್ರಿ ತಿಂದಿದ್ದಾರೆ. ಸ್ಪರ್ಶ್ ಕಂಪನಿಯ ಬಾದಾಮ್ ಪೌಡರ್ ಅನ್ನು ತಿನ್ನುತ್ತಿದ್ದಾಗ ಮತ್ತೆ ಪ್ಲಾಸ್ಟಿಕ್ ಪೇಪರ್ ಮಾದರಿಯ ವಸ್ತುವೊಂದು ಪುತ್ರಿಗೆ ಸಿಕ್ಕಿದೆ. ಅದನ್ನು ಕಂಡಂತ ತಂದೆಗೆ ಸಿಟ್ಟು ಕೋಪ ಕೂಡ ಬಂದಿದೆ. ಕೂಡಲೇ ಸ್ಪರ್ಷ್ ಕಂಪನಿಯ ಬಾದಾಮ್ ಪೌಡರ್ ಮೇಲಿದ್ದಂತ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿ, ದೂರು ಸಲ್ಲಿಸುತ್ತಾರೆ. ಬಸವನಗೌಡ ಎಂಬುವರು ಖುದ್ದು ಗ್ರಾಹಕರನ್ನು ಭೇಟಿಯಾಗಿ, ಮಾಹಿತಿಯನ್ನು ಪಡೆಯಲಾಗುತ್ತದೆ. ಆದರೇ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇನ್ನೂ ಸ್ಪರ್ಷ್ ಕಂಪನಿಯ ವಿರುದ್ಧ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡುವುದಾಗಿ ಗ್ರಾಹಕರು ತಿಳಿಸಿದ್ದಾರೆ. ಅಲ್ಲದೇ ಆಹಾರ ಗುಣಮಟ್ಟ ಇಲಾಖೆಯ ಅಧಿಕಾರಿಗಳಿಗೆ, ಸಂಬಂಧಿಸಿದಂತ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಸೂಕ್ತ ಕ್ರಮಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ. ಗ್ರಾಹಕರಾಗಿ ನೀವು ಯೋಚಿಸಿ, ನಿಮ್ಮ ಮಗಳಿಗೆ ತಂದು ಕೊಟ್ಟಾಗಲೋ, ನೀವು ಸೇವಿಸಿದಾಗಲೋ ಈ ತರದ ಪ್ಲಾಸ್ಟಿಕ್ ವಸ್ತು ನಿಮ್ಮ ಹೊಟ್ಟೆ ಸೇರಿದ್ದರೇ ಮುಂದೆ ಏನಾಗುತ್ತಿತ್ತು.? ಪ್ರಾಣಹಾನಿಯೋ, ಅನಾಹುತವೋ ಆಗಿದ್ದರೆ ಇದಕ್ಕೆ ಯಾರು ಹೊಣೆ.? ಈ ಕೂಡಲೇ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
– ಭದ್ರಾವತಿ : ಭದ್ರಾವತಿಯಲ್ಲಿ ಹೆಚ್ಚಾಗುತ್ತಿರುವ ದರೋಡೆ ಪ್ರಕರಣ
ಭದ್ರಾವತಿ : ಇತ್ತೀಚೆಗೆ ಭದ್ರಾವತಿಯಲ್ಲಿ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ನ್ಯೂ ಟೌನ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ದುಷ್ಕರ್ಮಿಗಳ ತಂಡಗಳು ನಾಗರೀಕರನ್ನು ಬೆದರಿಸಿ ನಗನಾಣ್ಯ ದೋಚಿ ಪರಾರಿಯಾದ ಘಟನೆ ನಡೆದಿದೆ. ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿ ಬಿ ಹೆಚ್ ರಸ್ತೆಯ ಭೈರವೇಶ್ವರ ಕಮ್ಯೂನಿಕೇಷನ್ ಬಳಿ, ರಾತ್ರಿ ವೇಳೆ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೋರ್ವರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಮೂವರು ದುಷ್ಕರ್ಮಿಗಳು, ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಕಡದಕಟ್ಟೆ ಬಡಾವಣೆ ನಿವಾಸಿ ವೆಂಕಟೇಶ್ ಎಂಬುವರೆ ಚಿನ್ನದ ಸರ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಅಂದಾಜು 1. 75 ಲಕ್ಷ ರೂ. ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ತಡಸ ಗ್ರಾಮದ ಬಳಿ ಬೈಕ್ ಸವಾರನೋರ್ವನನ್ನು ಅಡ್ಡಗಟ್ಟಿ ಹಾಕಿದ ದುಷ್ಕರ್ಮಿಗಳು, ಚಾಕುವಿನಿಂದ ಬೆದರಿಕೆ ಹಾಕಿ 2 ಸಾವಿರ ನಗದು ಅಪಹರಿಸಿ ಪರಾರಿಯಾದ ಘಟನೆ ನಡೆದಿದೆ.