ಮನೆಯಲ್ಲಿ ಎರಡು ಸಿಲಿಂಡರ್ ಸ್ಫೋಟ!
– ಏನಾಯ್ತು ಘಟನೆ?: ಸಿಲಿಂಡರ್ ಸ್ಫೋಟ ಹೇಗೆ?
– ಗೋಮಾಂಸ ಮಾರಾಟದ ಮೇಲೆ ಪೊಲೀಸರ ದಾಳಿ
– ಶಿವಮೊಗ್ಗದಲ್ಲಿ ದಾಳಿ ಮಾಡಿದ ಕರಡಿ ರಕ್ಷಣೆ
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಕೃಷ್ಣಮಠದ ಪಾರ್ಕ್ ಹತ್ತಿರದ ಮನೆಯಲ್ಲಿ ಎರಡು ಸಿಲಿಂಡರ್ ಬ್ಲಾಸ್ಟ್ ಆಗಿರುವ ಘಟನೆ ನಡೆದಿದೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಕೃಷ್ಣಮಠ ಪಾರ್ಕ್ ಹತ್ತಿರ ಪ್ರೊಫೆಸರ್ ಬಿ ಕೃಷ್ಣಪ್ಪ ಎಂಬವರ ಮನೆಯಲ್ಲಿ ಎರಡು ಸಿಲಿಂಡರ್ ಸ್ಫೋಟ ವಾಗಿದೆ. ಈ ಒಂದು ಘಟನೆಯಲ್ಲಿ ಯಾವ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಗಳ ಅಡುಗೆ ಮನೆ ಜಖಮ್ ಆಗಿರುತ್ತದೆ ಹಾಗೂ ಅಕ್ಕ ಪಕ್ಕದ ಮನೆಯ ಕಿಟಕಿಗಳು ಒಡೆದು ಹೋಗಿರುತ್ತದೆ.
ಗೋಮಾಂಸ ಮಾರಾಟದ ಮೇಲೆ ಪೊಲೀಸರ ದಾಳಿ
ಶಿವಮೊಗ್ಗ: ಎಂಕೆಕೆ ರಸ್ತೆಯ ಮೆಹಬೂಬ್ ಗಲ್ಲಿಯಲ್ಲಿ ಗೋಮಾಂಸ ಪತ್ತೆಯಾಗಿದೆ. ಗೋಮಾಂಸ ಮಾರಾಟದ ಮೇಲೆ ಪೊಲೀಸರು ದಾಳಿ ನಡೆಸಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಎಂಕೆಕೆ ರಸ್ತೆಯ ಮೊಹಬೂಬ್ ಗಲ್ಲಿಯ ಕಾಂಪ್ಲೆಕ್ಸ್ ಒಂದರ ಹಿಂಭಾಗದ ಸಿಮೆಂಟ್ ಶೀಟಿನ ಮನೆಯ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 15 ಕೆಜಿ ಮಾಂಸ ಮತ್ತು ಮಚ್ಚು, ತಕ್ಕಡಿಗಳು ಪತ್ತೆಯಾಗಿದೆ. ಇಬ್ಬರು ಆರೋಪಿಗಳಾದ ಇಜಾಜ್ ಅಹಮದ್, ರೋಷನ್ ಎಂಬುವರು ಪರಾರಿಯಾಗಿದ್ದಾರೆ. ಇಬ್ಬರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದಲ್ಲಿ ದಾಳಿ ಮಾಡಿದ ಕರಡಿ ರಕ್ಷಣೆ!
ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಣಿಸಿಕೊಂಡ ಕರಡಿಯನ್ನ ಗೋಪಾಳ ಗೌಡ ಬಡಾವಣೆಯಲ್ಲಿ ಅರಣ್ಯ ಇಲಾಖೆ ರಕ್ಷಣೆ ಮಾಡಿದೆ. ಸಧ್ಯಕ್ಕೆ ಸಿಂಹಧಾಮದಲ್ಲಿ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿದೆ. ಸುಮಾರು ಒಂದು ವರೆ ಗಂಟೆಯ ನಂತರ ಕರಡಿಯನ್ನ ಅರವಳಿಕೆ ಮೂಲಕ ಹಿಡಿಯಲಾಗಿದೆ. ಡಾ.ವಿನಯ್ ಅವರನ್ನ ಸ್ಥಳಕ್ಕೆ ಬರಮಾಡಿಕೊಂಡು ಕಾರ್ಯಾಚರಣೆಯನ್ನ ನಡೆಸಲಾಗಿದೆ. ಶೆಟ್ಟಿಹಳ್ಳಿ ಮತ್ತು ಗೋಪಾಳಗೌಡ ಬಡಾವಣೆಯ ಸುತ್ತಮುತ್ತಲಿಂದ ಬಂದ ಕರಡಿ ಇಂದು ಬೆಳಿಗ್ಗೆ ಗೋಪಾಳಗೌಡ ಡಿವಿಜಿ ಪಾರ್ಕ್ ನಲ್ಲಿ ಪತ್ತೆಯಾಗಿತ್ತು.
ನಾಯಿ ಓಡಿಸಿಕೊಂಡು ಬಂದ ವೇಳೆ ಓರ್ವರ ಮೇಲೆ ದಾಳಿ ಸಹ ಮಾಡಿತ್ತು. ನಂತರ ಪೊದೆಯೊಳಗೆ ತಪ್ಪಿಸಿಕೊಂಡಿತ್ತು. ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನ ರಕ್ಷಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಅರಣ್ಯ ಇಲಾಖೆಯ ಡಿಸಿಎಫ್ ಶಿವಶಂಕರ್ 6-7 ವರ್ಷದ ಕರಡಿ ಇದಾಗಿದೆ ಎಂದು ಅಂದಾಜಿಸಲಾಗಿದೆ. ಇದರ ಆರೋಗ್ಯ ತಪಾಸಣೆ ಮಾಡಿ ನಂತರ ಎಲ್ಲಿ ಬಿಡಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು. ಇದಕ್ಕೆ ವೈದ್ಯರ ಸಲಹೆಯನ್ನೂ ಪಡೆಯಲಾಗುವುದು ಎಂದರು.