ಶಿವಮೊಗ್ಗ ಜಿಲ್ಲಾ ಪತ್ರಿಕೋದ್ಯಮ ಇಬ್ಬರು ಒಂದೇ ದಿನ ದುರ್ಮರಣ
– ಖ್ಯಾತ ಛಾಯಾಗ್ರಾಹಕ ಶಿವಮೊಗ್ಗ ನಂದನ್, ಪಬ್ಲಿಕ್ ಟಿವಿ ವರದಿಗಾರ ಶಶಿಧರ್ ಇನ್ನಿಲ್ಲ
– ಕಳೆದ ವಾರ ತೀರ್ಥಹಳ್ಳಿ ಪತ್ರಕರ್ತ ಲಕ್ಷ್ಮೀಶ್ ನಿಧನ
– ಸಮಾಜ ಕಟ್ಟುವ ಪತ್ರಕರ್ತರ ಬದುಕಿಗೆ ಭದ್ರತೆಯೇ ಇಲ್ಲ
NAMMUR EXPRESS NEWS
ಶಿವಮೊಗ್ಗ: ನಾಡು ಕಂಡ ಅಪರೂಪದ ಹಾಗೂ ಶಿವಮೊಗ್ಗದ ಖ್ಯಾತ ಛಾಯಾಗ್ರಾಹಕ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಫೋಟೊಗ್ರಾಫರ್ ಶಿವಮೊಗ್ಗ ನಂದನ್ (57) ನಿಧನರಾಗಿದ್ದಾರೆ. ಅನಾರೋಗ್ಯ ಹಿನ್ನೆಲೆ ಶನಿವಾರ ರಾತ್ರಿ ನಂಜಪ್ಪ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗ ನಂದನ್ ಅವರ ಪಾರ್ಥೀವ ಶರೀರವನ್ನು ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ ಇರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
ಪಬ್ಲಿಕ್ ಟಿವಿ ವರದಿಗಾರ ಶಶಿಧರ್ ಸಾವಿನ ನೋವು
ಪಬ್ಲಿಕ್ ಟಿವಿಯ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್.ಕೆ.ವಿ (39) ನಿಧನರಾಗಿದ್ದ ಸುದ್ದಿ ಎಲ್ಲರಿಗೂ ಶಾಕ್ ನೀಡಿರುವ ನಡುವೆ ನಂದನ್ ಸಾವು ಇಡಿ ಜಿಲ್ಲೆಯ ಪತ್ರಿಕೋದ್ಯಮ ಕ್ಷೇತ್ರಕ್ಕೆ ಶಾಕ್ ನೀಡಿದೆ.
ಶಶಿಧರ್ ಅವರು ತೀವ್ರ ಆರೋಗ್ಯ ಸಮಸ್ಯೆಯಿಂದ ಶನಿವಾರ ಮಧ್ಯಾಹ್ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಶಶಿಧಕರ್.ಕೆ.ವಿ.ಆರು ವರ್ಷದಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕು ಮೊದಲು ವಿಜಯಪುರ ಜಿಲ್ಲೆಯಲ್ಲಿ ಈಟಿವಿ, ಚಾಮರಾಜನಗರ ಜಿಲ್ಲೆಯಲ್ಲಿ ಸುವರ್ಣ ನ್ಯೂಸ್ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದರು. 16 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಶಶಿಧರ್ ಮೂಲತಃ ಹಾಸನ ಜಿಲ್ಲೆ ಅರಸಿಕೆರೆ ತಾಲೂಕು ಕಲ್ಲಹಳ್ಳಿಯವರು. ಸ್ವಗ್ರಾಮದಲ್ಲಿಯೇ ಶಶಿಧರ್ ಅವರ ಅಂತ್ಯಸಂಸ್ಕಾರ ನಡೆದಿದೆ.
ತೀರ್ಥಹಳ್ಳಿ ಪತ್ರಕರ್ತ ಲಕ್ಷ್ಮೀಶ್ ನಿಧನ
ತೀರ್ಥಹಳ್ಳಿ ಹಿರಿಯ ಪತ್ರಕರ್ತ ಲಕ್ಷ್ಮೀಶ್ ಇತ್ತೀಚಿಗೆ ಬ್ರೈನ್ ಹೈಬ್ರರ್ಜ್ ಇಂದ ಮೃತಪಟ್ಟಿದ್ದರು. ತೀರ್ಥಹಳ್ಳಿ ಮಿತ್ರ ಪತ್ರಿಕೆಯ ಮಂಜುನಾಥ್ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದರು.
ಒತ್ತಡದ ಬದುಕು: ಬದುಕಿಗೆ ಭದ್ರತೆ ಇಲ್ಲ
ಪತ್ರಿಕೋದ್ಯಮದ ಇಬ್ಬರು ಮಿತ್ರರು ಒಂದೆ ದಿನ ತಮ್ಮ ಬದುಕಿಗೆ ಇತಿಶ್ರೀ ಹಾಡಿದ್ದಾರೆ. ಪತ್ರಕರ್ತರ ಬದುಕು ಇತ್ತೀಚಿಗೆ ಆತಂಕದಲ್ಲಿದೆ. ಸದಾ ಒತ್ತಡ, ಪತ್ರಿಕೆ ಪ್ರಿಂಟ್ ಕಾಸು ಕೂಡ ಕೆಲವೊಮ್ಮೆ ಬರುವುದಿಲ್ಲ. ಜತೆಗೆ ಸಾಮಾಜಿಕ ಕಾಳಜಿ ಅವರ ಬದುಕನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ಯುವಲ್ಲಿ ವಿಫಲವಾಗುತ್ತಿದೆ. ಕರೋನಾದಲ್ಲಿ ನೂರಾರು ಪತ್ರಕರ್ತರು ಸೇವೆ ಮಾಡುತ್ತಲೇ ಜೀವ ಬಿಟ್ಟಿದ್ದರು. ಮೃತ ಪತ್ರಕರ್ತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ನಮ್ಮೂರ್ ಎಕ್ಸ್ ಪ್ರೆಸ್ ಪ್ರಾರ್ಥನೆ ಮಾಡುತ್ತದೆ.