ಶಿವಮೊಗ್ಗ ಜೆಸಿಐನಿಂದ ವಿಶ್ವದಾಖಲೆ.. ಕ್ಷಣಗಣನೆ!
– ಮೇ 24ಕ್ಕೆ ಸತತ 24 ಗಂಟೆಗಳ ತರಬೇತಿ ಕಾರ್ಯಾಗಾರ
– ಜೆಸಿಐ ಶಿವಮೊಗ್ಗ ರಾಯಲ್ಸ್ ಅನವರತ-24 ರಂಗು
NAMMUR EXPRESS NEWS
ಶಿವಮೊಗ್ಗ: ಜೆಸಿಐ ಶಿವಮೊಗ್ಗ ರಾಯಲ್ಸ್ ಅನವರತ-24 ಎಂಬ ವಿಶ್ವ’ ದಾಖಲೆಯ ತರಬೇತಿ ಕಾರ್ಯಕ್ರಮವನ್ನು ಮೇ 24ರಂದು ಹಮ್ಮಿಕೊಂಡಿದೆ. ಸಂಸ್ಥೆಯ ಅಧ್ಯಕ್ಷ ಸುದರ್ಶನ್ ತಾಯಿಮನೆ ಈ ಬಗ್ಗೆ ಮಾಹಿತಿ ನೀಡಿ, ಯಾರೂ ಮಾಡದ ಹೊಸ ದಾಖಲೆ ಮಾಡಲು ನಿರ್ಧರಿಸಿ 24 ಗಂಟೆಗಳ ಸತತ ತರಬೇತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ 24 ತರಬೇತುದಾರರು, 24 ಗಂಟೆ, 24 ವಿಷಯಗಳಿರುತ್ತವೆ 24ಕ್ಕೂ ಹೆಚ್ಚು ಶಿಬಿರಾರ್ಥಿಗಳು ಇರುತ್ತಾರೆ. 24ರ ರಾತ್ರಿ 12 ಗಂಟೆಗೆ ಕಾರ್ಯಾಗಾರ ಆರಂಭವಾಗಿ ರಾತ್ರಿ 11ಕ್ಕೆ ಅಂತ್ಯಗೊಳ್ಳುತ್ತದೆ ಎಂದರು.
ಹೊಸ ಬದಲಾವಣೆ ಮಾಡೋಣ, ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು, ಮೌಲ್ಯ ಮತ್ತು ನೈತಿಕತೆ, ಯಶಸ್ವಿ ಮಹಿಳೆ ಆಗುವುದು ಹೇಗೆ, ಸ್ಮರಣ ಶಕ್ತಿಯ ತಂತ್ರಗಳು, ಸೈಬರ್ ಸೆಕ್ಯುರಿಟಿ, ಆರೋಗ್ಯವೇ ಭಾಗ್ಯ, ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ, ಕೇಳುವ ಕಲೆ, ಸಂವಹನ ಕೌಶಲ್ಯ, ಬದಲಾವಣೆ ಮಾಡುವವರಾಗೋಣ, ಸಿಟ್ಟು ಮತ್ತು ಮತ್ಸರವನ್ನು ನಿಯಂತ್ರಿಸುವುದು. ಮೊದಲಾದ ವಿಷಯಗಳು ತರಬೇತಿಯ ಉಪನ್ಯಾಸದಲ್ಲಿರುತ್ತವೆ ಎಂದರು. ತರಬೇತಿಯನ್ನು ನೀಡುವವರೆಲ್ಲರೂ ಜೆಸಿಐಯಲ್ಲಿ ವಿಶೇಷ ಪರಿಣಿತಿ ಪಡೆದವರಾಗಿದ್ದಾರೆ. ಅತ್ಯುತ್ತಮ ವಾಗಿಗಳಾಗಿದ್ದಾರೆ, ಸಾಧಕರಾಗಿದ್ದಾರೆ.
ಅವರಲ್ಲಿ ಕೆಲವರೆಂದರೆ, ಎಸ್. ವಿ ಶಾಸ್ತ್ರಿ, ಅನುಷ್ ಗೌಡ, ವಿಲಿಯಂ ಡಿಸೋಜಾ, ಸುಷ್ಮಾ ಹಿರೇಮಠ, ಗೌರೀಶ್ ಭಾರ್ಗವ್, ಪ್ರಮೋದ್ ಶಾಸ್ತ್ರಿ ಪ್ರವೀಣ್ ದೇಶಪಾಂಡೆ, ಮುನಿವಾಸುದೇವ ರೆಡ್ಡಿ, ಕೇದಾರೇಶ್ವರ ದಂಡಿನ್, ಮಾಧವಿ, ಸವಿತಾ ರಮೇಶ್, ಚಂದ್ರಶೇಖರ್, ಎನ್ ಜಿ ಉಷಾ ಮೊದಲಾದವರು ಎಂದರು. ಈ ಮೂಲಕ ನಾಡಿನಲ್ಲಿ ಮತ್ತೊಂದು ದಾಖಲೆಯನ್ನು ಶಿವಮೊಗ್ಗ ಬರೆಯಲಿದೆ.