ಸಂಸ್ಕೃತ ಭಾಷೆ ಸಂಸ್ಕಾರ ತಿಳಿಸಿಕೊಡುವ ಭಾಷೆ
– ಪದ್ಮರಾಜ ವೇದಾಗಮ ಸಂಸ್ಕೃತ ಪಾಠಶಾಲೆಯ ಉದ್ಘಾಟನೆ
– ಒಂದಾನೊಂದು ಕಾಲದಲ್ಲಿ ಸಂಸ್ಕೃತ ವಿಶ್ವ ವ್ಯಾಪಿ ಹರಡಿತ್ತು
ಸಿಂದಗಿ: ಸಂಸ್ಕೃತ ಭಾಷೆ ಸಂಸ್ಕಾರ ತಿಳಿಸಿಕೊಡುವ ಭಾಷೆ ಎಂದು ಅರ್ಚಕ ವಿಠ್ಠಲ ಆಚಾರ್ಯ ಹೇಳಿದರು.
ಪಟ್ಟಣದ ಸಾರಂಗ ಮಠದಲ್ಲಿ ಬುಧವಾರದಂದು ಶ್ರೀ ಪದ್ಮರಾಜ ವೇದಾಗಮ ಸಂಸ್ಕೃತ ಪಾಠಶಾಲೆಯ ಉದ್ಘಾಟನೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಈ ಸಂಸ್ಕೃತ ಶಾಲೆಯನ್ನು ತೆರೆಯುವ ಮೂಲಕ ಸನಾತನ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಯುತ್ತಿದೆ. ಸನಾತನ ಸಂಸ್ಕೃತಿಯ ಹಬ್ಬಗಳನ್ನು ವೇದ ಹಾಗೂ ಪುರಾಣಗಳಲ್ಲಿ ನೋಡಬಹುದಾಗಿದೆ. ತಂದೆ ತಾಯಿಗೆ ಗೌರವ ಸೂಚಿಸುವದನ್ನು ವೇದದಲ್ಲಿ ಹೇಳಲಾಗಿದೆ ಎಂದರು.
ತಂದೆ ತಾಯಿ ಜೀವ ಕೊಟ್ಟರೆ ಜೀವನ ಕೊಟ್ಟಿದ್ದು ವಿದ್ಯೆ ಕಲಿಸುವ ಗುರು. ತಂದೆ, ತಾಯಿ, ಗುರು, ಅತಿಥಿ, ಈ ನಾಲ್ಕು ಜನರು ದೇವರ ಸಮಾನ ಸಂಸ್ಕೃತ ಪ್ರಾಚೀನವಾದ ಭಾಷೆ , ಈ ಭಾಷೆಯನ್ನು ಸಾಮಾನ್ಯ ಪುರುಷರಿಂದ ಸೃಷ್ಠಿಯಾಗಿಲ್ಲ ಕಾರಣ ಅತ್ಯಂತ ಶ್ರೇಷ್ಠತೆಯನ್ನು ಕಾಯ್ದುಕೊಂಡಿದೆ. ನಮ್ಮ ಸಂಸ್ಕೃತದಿಂದ ಇನ್ನಿತರ ಭಾಷೆಗಳು ಪ್ರೇರಣೆ ಪಡೆದಿವೆ ಎಂದು ಹೇಳಿದರು.
ಮಾತನಾಡಿದ ಪ್ರೊ ವಿ ಡಿ ವಸ್ತ್ರದ ಚನ್ನವೀರ ಸ್ವಾಮೀಜಿಯವರಿಗೆ ಇಷ್ಟವಾದ ಭಾಷೆ ಸಂಸ್ಕೃತ ಇಂದು ಅವರ ಕನಸನ್ನು ನನಸು ಮಾಡಿದ್ದು ಸಾರಂಗ ಶ್ರೀಗಳು ಸಂಸ್ಕೃತ , ವಿವಿಧ ಜ್ಞಾನ ಹಾಗೂ ಎದೆಗಾರಿಕೆಯನ್ನು ಗಟ್ಟಿಗೊಳಿಸುತ್ತದೆ. ಒಂದಾನೊಂದು ಕಾಲದಲ್ಲಿ ಸಂಸ್ಕೃತ ವಿಶ್ವ ವ್ಯಾಪಿ ಹರಡಿತ್ತು. ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಸೋಮಾರಿಯಾಗಿ ಇರದೇ ಸದಾ ಚಟುವಟಿಕೆಯಿಂದ ಇರಬೇಕು , ವಿನಯ ಸಂಪನ್ನರಾಗಿ ಇರಬೇಕು ಎಂದು ಹೇಳಿದರು. ಡಾ ವಿಶ್ವ ಪ್ರಭು ಶಿವಾಚಾರ್ಯರು ಹೊರಗಿನ ಮಠ ಕೊಣ್ಣೂರ ಮಾತನಾಡಿದರು. ಡಾ. ಪ್ರಭುಸಾರಂಗ ಶಿವಾಚಾರ್ಯರು ಆಶಿರ್ವಚನ ನೀಡಿದರು. ವೇದಿಕೆ ಮೇಲೆ ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು , ಬಿ.ಎಂ.ಗೋಟಬಂಡಿಮಠ. ಸಿ.ಜಿ. ಕತ್ತಿ ಇದ್ದರು. ಈ ವೇಳೆ ಅಶೋಕ ವಾರದ, ವಿಶ್ವನಾಥ್ ಜೋಗೂರ, ಶ್ರೀಶೈಲ ನಂದಿಕೋಲ, ಸಿ ಎಂ ಪೂಜಾರ , ಎಂ ಎಸ್ ಹೈಯಾಳಕರ ಇದ್ದರು.