ಕಲ್ಯಾಣ ನಗರದಲ್ಲಿ ಚರಂಡಿ ನೀರು ರಸ್ತೆಗೆ
– ದಿನಂಪ್ರತಿ ಚರಂಡಿ ನೀರನ್ನು ದಾಟಿ ಶಾಲೆಗೆ ಹೋಗುವ ವಿಧ್ಯಾರ್ಥಿಗಳು
– 20 ವಾರ್ಡಿನಲ್ಲಿ ಅನೈರ್ಮಲ್ಯ ವಾತಾವರಣ ಸೃಷ್ಟಿ
– ಕಣ್ಣು ಮುಚ್ಚಿ ಕುಳಿತ ಪುರಸಭೆ ಅಧಿಕಾರಿಗಳು
– ಸಾಂಕ್ರಾಮಿಕ ರೋಗ ಉಲ್ಭಣ ಭೀತಿ : ಸ್ಥಳೀಯ ನಿವಾಸಿಗಳ ಆಕ್ರೋಶ
ಸಿಂದಗಿ : ಪಟ್ಟಣದ 20 ನೆಯ ವಾರ್ಡಿನ ಕಲ್ಯಾಣ ನಗರದ ಪ್ರಮುಖ ರಸ್ತೆಯು ಕಳೆದ ಕೆಲ ದಿನಗಳಿಂದ ಜಲಾವೃತವಾಗಿದ್ದು
ಚರಂಡಿ ನೀರು ರಸ್ತೆ ತುಂಬಾ ಹರಡಿಕೊಂಡು ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಂಚಾರ ಮಾಡಲು ಬಾರದ ಪರಸ್ಥಿತಿ ಎದುರಾಗಿದೆ. ಹಲವು ದಿನಗಳಿಂದ ಈ ರಸ್ತೆ ಚರಂಡಿ ನೀರಿನಿಂದ ತುಂಬಿದ್ದು ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಕಷ್ಟದ ಪರಸ್ಥಿತಿ ಎದುರಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಪುರಸಭೆ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ಜನ ಪ್ರತಿನಿಧಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಈ ರೀತಿ ರಸ್ತೆಯ ಮೇಲೆ ಪ್ರತಿ ದಿನ ತುಂಬಿ ಹರಿಯುವ ಚರಂಡಿ ನೀರಿನಿಂದ ಕಲ್ಯಾಣ ನಗರದ ಮುಖ್ಯರಸ್ತೆಯಲ್ಲಿ ಅನೈರ್ಮಲ್ಯ ವಾತಾವರಣ ಸೃಷ್ಟಿಯಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸಂಭಂದಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಜನ ಪ್ರತಿನಿಧಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಪುರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ .
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ..? ಪ್ರಮುಖ ಮಾರುಕಟ್ಟೆಯಲ್ಲಿ ಏನಿದೆ ದರ?
HOW TO APPLY : NEET-UG COUNSELLING 2023