ಆನ್ಲೈನ್ ಅಲ್ಲಿ ಮೋಸ ಹೋಗದಿರಿ ಹುಷಾರ್!
– ಅನ್ಲೈನ್ ಮಾಂತ್ರಿಕರಿಂದ ಜಾಗರೂಕರಾಗಿರಿ
– ನಿಮ್ಮಿಂದಲೇ ಮಾಹಿತಿ ಪಡೆದು ನಿಮಗೆ ಮೋಸ ಮಾಡ್ತಾರೆ
NAMMUR EXPRESS NEWS
ಡಿಜಿಟಲೀಕರಣದಿಂದ ಜನ ತಮ್ಮ ವ್ಯಾಪಾರ ವಹಿವಾಟುಗಳನ್ನು ಆನ್ಲೈನಲ್ಲಿ ಮಾಡುತ್ತಿದ್ದು ಆನ್ಲೈನ್ ಲ್ಲಿ ಮೋಸ ವಂಚನೆ ಮಾಡುವ ಜಾಲವು ಸಕ್ರಿಯ ವಾಗಿದೆ ಜನರ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡು ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ವಂಚನೆ ನಡೆಸುತ್ತಿರುವುದು ವಿನಾಶಕಾರಿಯಾದ ಬೆಳವಣಿಯಾಗಿದೆ .
– ವಂಚಕರು ವೈಯ್ಯಕ್ತಿಕ ಮತ್ತು ಬ್ಯಾಂಕಿನ ಮಾಹಿತಿಯನ್ನು ಕೇಳಿ ಸರ್ಕಾರಿ ಏಜೆನ್ಸಿ ಬ್ಯಾಂಕ್ ಅಥವಾ ಇತರೆ ಸಂಸ್ಥೆಗಳ ಹೆಸರಲ್ಲಿ ನಕಲಿ ಇ-ಮೇಲ್ ಕಳುಹಿಸಿ ವಂಚಿಸುತ್ತಾರೆ.
– ನಕಲಿ ಉದ್ಯೋಗಾವಕಾಶ ನೀಡುವುದಾಗಿ ನಂಬಿಸಿ ಮೋಸ ಮಾಡುತ್ತಾರೆ.
– ಮುಂಗಡ ಶುಲ್ಕ ಪಡೆದು ನಕಲಿ ಸಾಲ ಸೌಲಭ್ಯ ನೀಡುವುದಾಗಿ ನಂಬಿಸಿ ಮೋಸ ಮಾಡುತ್ತಾರೆ.
– ಸಾಮಾಜಿಕ ಮಾಧ್ಯಮದಲ್ಲಿ ಬೇರೆಯವರ ಖಾತೆ ಬಳಸಿ ಹಣ ಕೇಳಿ ಮೋಸ ಮಾಡುವ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿದೆ
– ಕಡಿಮೆ ಬೆಲೆ ವಸ್ತುವನ್ನು ಹೆಚ್ಚುವರಿ ಹಣ ಪಡೆದು ಮಾರಾಟ ಮಾಡುವುದು .
– ನಕಲಿ ಆನ್ಲೈನ್ ಸ್ಟೋರ್ ಗಳ ಮೂಲಕ ಅವಾಸ್ತವಿಕ ಆದಾಯದ ಭರವಸೆ ನೀಡಿ ಗ್ರಾಹಕರನ್ನು ವಂಚಿಸುತಿದ್ದಾರೆ
– ಇತ್ತೀಚಿಗೆ ಆನ್ಲೈನ್ ಗೇಮ್ ಗಳ ಹಾವಳಿ ಹೆಚ್ಚಾಗಿದ್ದು ಹಣ ದುಪ್ಪಟ್ಟು ಮಾಡುವ ಭರವಸೆ ನೀಡಿ ಗ್ರಾಹಕರನ್ನು ಸುಲಭವಾಗಿ ಮೋಸ ಮಾಡುತ್ತಿದ್ದಾರೆ.
ತಂತ್ರಜ್ಞಾನ ಎಷ್ಟು ಸಹಾಯಕವೋ ಅಷ್ಟೇ ಅಪಾಯಕಾರಿಯೂ ಹೌದು ಸಿಮ್ ಸ್ಟಾ ಫ್ ,ವಿಷಿಂಗ್ ಸ್ಮಿಷಿಂಗ್ ಫಿಶಿಂಗ್, ಆನ್ಲೈನ್ ಕಿರುಕುಳ ಸೈಬರ್ ಭಯೋತ್ಪಾದನೆ, ಇಮೇಲ್ ಬಾಂಬ್ ದಾಳಿ, ಹಣದ ಮ್ಯೂಲ್,ಸೈಬರ್ ಅಶ್ಲೀಲತೆ,ಇಂಟರ್ ನೆಟ್ ಸಮಯ ಕಳ್ಳತನ, ವೈರಸ್/ವಾರ್ಮ್ ದಾಳಿಗಳಂತ ವಿಭಿನ್ನ ಮಾದರಿಯ ಮೋಸದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇವೆ.
ಆನ್ಲೈನ್ ವಂಚನೆಗಳಿಂದ ನಾವು ಮೋಸ ಹೋಗದಿರಲು ನಾವೇನು ಮಾಡಬೇಕು ?
-ಅನಪೇಕ್ಷಿತ ಇಮೇಲ್ ಸಂದೇಶಗಳ ಬಗ್ಗೆ ಜಾಗರೂಕರಾಗಿರುವುದು
-ಆನ್ಲೈನ್ ಖಾತೆಗಳಿಗೆ ಸಂಕೀರ್ಣ ಪಾಸ್ವರ್ಡ್ ರಚನೆ ಮಾಡುವುದು
-ಆಪರೇಟಿಂಗ್ ಸಿಸ್ಟಮ್ ವೆಬ್ ಬ್ರೌಸರ್ ಮತ್ತು ಆಂಟಿವೈರಸ್ ಸಾಫ್ಟ್ವೇರ್ ಬಳಕೆ ಹಾಗೂ ಅಪ್ಲಿಕೇಶನ್ಗಳ ನಿಯಮಿತ ನವೀಕರಣ ಅಗತ್ಯ
– ಯಾವುದೇ ಅನಾಮಿಕರ ಕರೆ ಬಗ್ಗೆ ಎಚ್ಚರಿಕೆ ವಹಿಸಿ
– ಸ್ಪಷ್ಟವಾದ ಮೇಲೆ ಹಣ ವರ್ಗಾವಣೆ ಮಾಡಿರಿ.
– ಸಾಮಾಜಿಕ ಜಾಲ ತಾಣದಲ್ಲಿ ಹುಷಾರಾಗಿರಿ.