ಬಿಎಸ್ಎನ್ಎಲ್ ಈಗ ಮತ್ತಷ್ಟು ಹೊಸತು!
– ಲೋಗೋ ಬದಲಿಸಿ ಗುಡ್ನ್ಯೂಸ್: ಜಿಯೋ, ಏರ್ಟೆಲ್ಗೆ ಬಿಗ್ ಶಾಕ್
– ಹೊಸ ಸೇವೆ ಪರಿಚಯ, ಯಾವೆಲ್ಲಾ ಸೇವೆಗಳು ಲಭ್ಯ?
– 1.8 ಕೋಟಿ ಗ್ರಾಹಕರು ಬಿಎಸ್ಎನ್ಎಲ್ಗೆ ಸೇರ್ಪಡೆ
NAMMUR EXPRESS NEWS
ಬೆಂಗಳೂರು: ಬಿಎಸ್ಎನ್ಎಲ್ ಈಗ ಮತ್ತಷ್ಟು ಹೊಸತನದೊಂದಿಗೆ ಹವಾ ಶುರು ಮಾಡಿದೆ.
ಲೋಗೋ ಬದಲಿಸಿ ಗುಡ್ನ್ಯೂಸ್ ನೀಡಿ ಜಿಯೋ, ಏರ್ಟೆಲ್ಗೆ ಬಿಗ್ ಶಾಕ್ಕೊಟ್ಟಿದೆ. ಹೊಸ ಸೇವೆ ಪರಿಚಯ ಮಾಡಿ 1.8 ಕೋಟಿ ಗ್ರಾಹಕರು ಬಿಎಸ್ಎನ್ಎಲ್ಗೆ ಸೇರ್ಪಡೆಮಾಡಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಡೆಟ್ (ಬಿಎಸ್ಸೆನ್ನೆಲ್) ಸದ್ಯಕ್ಕೆ ಕರೆ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಸ್ಎನ್ಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾರ್ಬಟ್ ರವಿ ಹೇಳಿದ್ದಾರೆ, ಇತ್ತೀಚೆಗೆ ಜಿಯೋ, ಏರ್ಟೆಲ್, ವೊಡಾಫೋನ್ಗಳು ಭಾರಿ ಪ್ರಮಾಣದಲ್ಲಿ ದರ ಹೆಚ್ಚಿಸಿದ ಬೆನ್ನಲ್ಲೇ ರವಿ ಈ ಹೇಳಿಕೆ ನೀಡಿ, “ನಮಗೆ ಗ್ರಾಹಕರ ಸಂತೋಷ ಮುಖ್ಯ ಹೀಗಾಗಿ ಸದ್ಯ ಭವಿಷ್ಯದಲ್ಲಿ ದರ ಏರಿಕೆ ಇಲ್ಲ’ ಎಂದಿದ್ದಾರೆ.
ಹೊಸ ಸೇವೆ ಪರಿಚಯ, ಯಾವೆಲ್ಲಾ ಸೇವೆಗಳು??
ಈ ನಡುವೆ 22ರಿಂದ ಬಿಎಸ್ಸೆನ್ನೆಲ್ ಕೆಲವು ಹೊಸ ಸೇವೆ ಪರಿಚಯಿಸಿದೆ. ಇದರಲ್ಲಿ ಆಟೋಮೇಟೆಡ್ ಸಿಮ್ ಕಿಯೋಸ್ ಕೂಡ ಸೇರಿದೆ. ಇಲ್ಲಿ ದಿನದ 24 ಗಂಟೆಯೂ ಹೊಸ ಸಿಮ್ ಖರೀದಿಸಬಹುದು. ಅಪ್ಗ್ರೇಡ್ ಮಾಡಬಹುದು. ಪೋರ್ಟ್ ಮಾಡಬಹುದು. ಕ್ಯುಆರ್ ಕೋಡ್ನಲ್ಲೇ ಪೇಮೆಂಟ್ ಮಾಡಬಹುದು. ಸದ್ಯ 1.8 ಕೋಟಿ ಗ್ರಾಹಕರು ಬಿಎಸ್ಎನ್ಎಲ್ಗೆ ಸೇರಿದ್ದಾರೆ. ಈಗಾಗಲೇ 4ಜಿ ಸೇವೆ ಆರಂಭಿಸಿರುವ ಬಿಎಸ್ಎನ್ಎಲ್, ಎಲ್ಲ ಕಡೆ ಅದನ್ನು ವಿಸ್ತರಿಸುವ ಪ್ರಕ್ರಿಯೆ ನಡೆದಿದೆ. ಇನ್ನು ಮುಂದೆ 5ಜಿ ಸೇವೆಯನ್ನೂ ಆರಂಭಿಸಲಿದೆ. ಮೊದಲು ಈ ಸೇವೆ ಮುಂಬೈ ಹಾಗೂ ದಿಲ್ಲಿ ನಗರಗಳಲ್ಲಿ ಆರಂಭವಾಗಲಿದೆ.
ಒಂದು ದಶಕದಿಂದಲೂ ಖಾಸಗಿ ಪ್ರಭಾವದ ಜತೆಗೆ ಹಲವಾರು ನೀತಿಗಳಿಂದ ನಲುಗಿ ಮುಚ್ಚುವ ಹಂತಕ್ಕೂ ಹೋಗಿರುವ ಬಿಎಸ್ಎನ್ಎಲ್ಗೆ ಹೊಸ ರೂಪ ನೀಡುವ ಪ್ರಯತ್ನ ಶುರುವಾಗಿದೆ. ಇದರ ಮೊದಲ ಹಂತವಾಗಿ ಬಿಎಸ್ಎನ್ಎಲ್ ಲೋಗೋ ಬದಲಾಗಿದೆ. ನೀಲಿ- ಬಿಳಿ ಬಣ್ಣದಲ್ಲಿದ್ದ ಲೋಗೋ ಈಗ ಕೇಸರಿ ಬಣ್ಣವನ್ನು ಬದಲಿಸಿಕೊಂಡಿದೆ. ಈ ಮೂಲಕ ಹೊಸ ಮನ್ವಂತರಕ್ಕೆ ಅಣಿಯಾಗುತ್ತಿದೆ. ಇದರೊಟ್ಟಿಗೆ ಹೊಸ ಹೊಸ ಪ್ಲಾನ್ಗಳನ್ನು ರೂಪಿಸಿ ಬಿಎಸ್ಎನ್ಎಲ್ ಸಿಮ್ ಹಾಗೂ ನೆಟ್ ವರ್ಕ್ ಅನ್ನು ಜನ ಬಳಕೆ ಪ್ರೇರೇಪಿಸುತ್ತಿದೆ.