ಶುರುವಾಯ್ತು ಕಂಬಳ ರಂಗು!
– ರಾಜಧಾನಿಯಲ್ಲಿಲ್ಲ ಈ ಬಾರಿ ಕಂಬಳ, ಮೊದಲ ಬಾರಿಗೆ ಶಿವಮೊಗ್ಗದಲ್ಲಿ
– ಕಂಬಳ ಓಟ: ಎಲ್ಲೆಲ್ಲಿ ಯಾವಾಗ ಕಂಬಳ?
ಕರಾವಳಿಯ ಸಂಪ್ರದಾಯಿಕ ಕ್ರೀಡೆ ಕಂಬಳ ರಂಗು ಶುರುವಾಗಲಿದೆ. ಮೊದಲ ಕಂಬಳ ಈ ಬಾರಿ ನವೆಂಬರ್ 9ರಂದು ಮಂಗಳೂರಿನ ಪಣಪಿಲದಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಒಟ್ಟು 25 ಕಂಬಳಗಳು ಆಯೋಜಿಸಲಾಗಿದ್ದು, ಈಗ ಸಿದ್ಧತೆ ಜೋರಾಗಿದೆ. ಬೆಂಗಳೂರಿನಲ್ಲಿ ಕೋರ್ಟ್ ಆದೇಶ ಹಿನ್ನೆಲೆ ಈ ಬಾರಿ ಕಂಬಳ ಇಲ್ಲ. ಆದರೆ ಮೊದಲ ಬಾರಿಗೆ ಮಲೆನಾಡ ಮಡಿಲು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ.
ಯಾವತ್ತು ಎಲ್ಲೆಲ್ಲಿ ಕಂಬಳ.
ನವೆಂಬರ್ 17 ಪಿಲಿಕುಳದಲ್ಲಿ, ನವೆಂಬರ್ 23 ಕೊಡಂಗೆಯಲ್ಲಿ, ನವೆಂಬರ್ 30 ಕಕ್ಕೆಪದವು, ಡಿಸೆಂಬರ್ 07 ಹೊಕ್ಕಾಡಿ, ಡಿಸೆಂಬರ್ 14 ಬಾರಾಡಿ, ಡಿಸೆಂಬರ್ 22 ಮೂಲ್ಕಿ, ಡಿಸೆಂಬರ್ 28 ಮಂಗಳೂರು, ಡಿಸೆಂಬರ್ 29 ಬಳ್ಳಮಂಜ, ಜನವರಿ 04 ಮಿಯಾರು, ಜನವರಿ 11, 2025ರಂದು ನರಿಂಗಾನ, ಜನವರಿ 18 ಅಡ್ಡೆ, ಜನವರಿ 25 ಮೂಡುಬಿದಿರೆ, ಫೆಬ್ರವರಿ 01 ಐಕಳ, ಫೆಬ್ರವರಿ 08 ಜಪ್ಪು, ಫೆಬ್ರವರಿ 15 ತಿರುವೈಲುಗುತ್ತು, ಫೆಬ್ರವರಿ 22 ಕಟಪಾಡಿ, ಮಾರ್ಚ್ 01 ಪುತ್ತೂರು, ಮಾರ್ಚ್ 08 ಬಂಟ್ವಾಳ, ಮಾರ್ಚ್ 15 ಬಂಗಾಡಿ, ಮಾರ್ಚ್ 22 ಉಪ್ಪಿನಂಗಡಿ, ಮಾರ್ಚ್ 29 ವೇಣೂರು, ಎಪ್ರಿಲ್ 05 ಬಲ್ಕುಂಜೆ, ಎಪ್ರಿಲ್ 12 ಗುರುಪುರದಲ್ಲಿ ಹಾಗೂ 2025ರ ಎಪ್ರಿಲ್ 19ರಂದು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ.
ಕಂಬಳ ಕೋಣಗಳು ಸಜ್ಜು
ಕಂಬಳ ನೋಡಲು ಒಂದು ಸೊಗಸಿನ ಕ್ರೀಡೆ. ಕಾಂತಾರ ಸಿನಿಮಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಇದರ ಸುಂದರ ದೃಶ್ಯ ನೋಡಿದ್ದೇವೆ. ಇದೀಗ ಇಡೀ ಕರಾವಳಿ ಕಂಬಳ ಸಂಭ್ರಮಕ್ಕೆ ಸಜ್ಜುಗೊಂಡಿದೆ.