ಕರಾವಳಿ ಬ್ರೇಕಿಂಗ್ ನ್ಯೂಸ್
ವ್ಯಕ್ತಿಯೊಬ್ಬ ಪತ್ನಿ,ಮಗು ಹತ್ಯೆಗೈದು ತಾನೂ ಆತ್ಮಹತ್ಯೆ!
– ರೈಲಿನಡಿಗೆ ತಲೆಕೊಟ್ಟು ಅತ್ಮಹತ್ಯೆ: ಮುಲ್ಕಿ ವ್ಯಾಪ್ತಿಯಲ್ಲಿ ಘಟನೆ
– ಮಂಗಳೂರು: ಅತ್ಯಾಚಾರ, ಕೊಲೆ ಪ್ರಕರಣ, ಮೂವರಿಗೆ ಗಲ್ಲು ಶಿಕ್ಷೆ!!
NAMMUR EXPRESS NEWS
ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಜಲಜಾಕ್ಷಿ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಪತ್ನಿ, ಮಗುವನ್ನು ಹತ್ಯೆಗೈದು ತಾನೂ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರುತಿಸಲಾಗಿದ್ದು, ಪತ್ನಿ ಪ್ರಿಯಾಂಕ (28), ಮಗು ಹೃದಯ್ (4) ಹತ್ಯೆಗೀಡಾದ ದುರ್ದೈವಿಗಳು ಎಂದು ತಿಳಿದುಬಂದಿದೆ.
ನ. 8ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.
ಆರೋಪಿ ಕಾರ್ತಿಕ್ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದು ಮುಲ್ಕಿಯ ಬೆಳಾಯರುನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನ. 8ರಂದು ಮಧ್ಯಾಹ್ನ ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುವಾಗ ಆತ್ಮಹತ್ಯೆ ಮಾಡಿಕೊಂಡವನು ಪಕ್ಷಿಕೆರೆಯ ಕಾರ್ತಿಕ್ ಭಟ್ ಎಂದು ತಿಳಿದಿದ್ದು, ಮನೆಗೆ ಬಂದಾಗ ಪತ್ನಿ ಮಗು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಮಂಗಳೂರು ಎಸಿಪಿ ಶ್ರೀಕಾಂತ್, ಮುಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾಧರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಅತ್ಯಾಚಾರ, ಕೊಲೆ ಪ್ರಕರಣ, ಮೂವರಿಗೆ ಗಲ್ಲು ಶಿಕ್ಷೆ!!
ಮಂಗಳೂರು: ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎಫ್ಟಿಎಸ್ಸಿ-11 (ಪೋಕ್ಸ್) ನ್ಯಾಯಾಧೀಶರಾದ ಮಾನು ಕೆ ಎಸ್ ಅವರು ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯವರಾದ ಜಯಬಾನ್ ಆದಿವಾಸಿ ಅಲಿಯಾಸ್ ಜಯಸಿಂಗ್ ಮುಖೇಶ್ ಸಿಂಗ್ ಮನೀಶ್ ಟಿರ್ಕಿ (21), ಮುಖೇಶ್ ಸಿಂಗ್ (20) ಮತ್ತು ರಾಂಚಿಯ ಮನೀಶ್ ತಿರಿಕಿ (33) ಶಿಕ್ಷೆಗೊಳಗಾದವರು. ಜಾಮೀನಿನ ಮೇಲಿದ್ದ ಪನ್ನಾ ಜಿಲ್ಲೆಯ ನಾಲ್ಕನೇ ಆರೋಪಿ ಮುನೀಮ್ ಸಿಂಗ್ ತಲೆಮರೆಸಿಕೊಂಡಿದ್ದಾನೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ ಬದರಿನಾಥ್ ನಾಯರಿ ಅವರು ನವೆಂಬರ್ 21, 2021ರಂದು ತಿರುವೈಲ್ನ ಹೆಂಚಿನ ಕಾರ್ಖಾನೆಯಲ್ಲಿ ಘಟನೆ ವರದಿಯಾಗಿತ್ತು ಎಂದು ಹೇಳಿದರು.
ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಮಗು ಅಳಲು ಪ್ರಾರಂಭಿಸಿತು, ಘಟನೆಯನ್ನು ಮಗು ಹೊರಗೆ ಬಹಿರಂಗಪಡಿಸಬಹುದೆಂಬ ಭಯದಿಂದ ಜಯಬಾನ್ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ. ಅಪರಾಧವನ್ನು ಮರೆಮಾಚಲು, ಆರೋಪಿಗಳು ದೇಹವನ್ನು ಚರಂಡಿಯಲ್ಲಿ ವಿಲೇವಾರಿ ಮಾಡಿದ್ದರು.
ಈ ಸಂದರ್ಭದಲ್ಲಿ ಮುನೀಮ್ ಸಿಂಗ್ ಕೊಠಡಿಯನ್ನು ಹೊರಗಿನಿಂದ ಕಾವಲು ಕಾಯುತ್ತಿದ್ದ ಮತ್ತು ಆ ಮೂಲಕ ಆರೋಪಿಯನ್ನು ಬೆಂಬಲಿಸಿದ್ದರು ಎಂದು ನಾಯರಿ ಹೇಳಿಕೆ ನೀಡಿದ್ದಾರೆ.ಕೃತ್ಯ ಎಸಗಿದ ಬಳಿಕ ಆರೋಪಿಗಳೆಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ.