ಆರ್. ಎಂ, ಡಾ. ಅಂಶುಮಂತ್, ಸುಂದರೇಶ್ ಸೇರಿ 34 ಮಂದಿಗೆ ನಿಗಮ ಮಂಡಳಿ ಸ್ಥಾನ?
– 1-2 ದಿನದಲ್ಲಿ ಹುದ್ದೆ ಹಂಚಿಕೆ ಮಾಡಿ ಆದೇಶ?
– ಯಾರಿಗೆ ಸಿಗುತ್ತೆ ಸ್ಥಾನ, ಇಲ್ಲಿದೆ ಮಾಹಿತಿ..!
NAMMUR EXPRESS NEWS
ಬೆಂಗಳೂರು: ಈಗಾಗಲೇ ಒಂದು ಸುತ್ತಿನ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ಘೋಷಣೆ ಬಳಿಕ ಇದೀಗ ಮತ್ತೊಂದು ಸುತ್ತಿನ ನಿಗಮ ಮಂಡಳಿಗೆ ಆಯ್ಕೆ ಕಸರತ್ತು ನಡೆಯುತ್ತಿದೆ. ಹೈಕಮಾಂಡ್ ಒಪ್ಪಿಗೆ ನೀಡಿರುವ 34 ಮಂದಿ ಕಾರ್ಯಕರ್ತರಲ್ಲಿ ಯಾರಿಗೆ ಯಾವ ನಿಗಮ- ಮಂಡಳಿಯ ಅಧ್ಯಕ್ಷಸ್ಥಾನ ನೀಡಬೇಕು ಎಂಬ ಬಗ್ಗೆ ಸೋಮವಾರ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಭೆ ಸೇರಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಎಲ್ಲ 34 ಕಾರ್ಯ ಕರ್ತರಿಗೆ ನಿಗಮ ಮಂಡಳಿ ನಿಗದಿ ಮಾಡಲು ಈ ಸಭೆ ನಡೆಸಲಾಗಿದ್ದು, ಎಲ್ಲ ಅಂದು ಕೊಂಡಂತೆ ನಡೆದರೆ ಒಂದೆರಡು ದಿನಗಳಲ್ಲಿ ಕಾರ್ಯ ಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡುವ ಕುರಿತ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ.
ಯಾರಿಗೆ ಸಾಧ್ಯತೆ?
ಸಿದ್ದರಾಮಯ್ಯ ಅವರ ಆಪ್ತರಾದ ಕೆ.ಮರಿಗೌಡ, ಸರೋವರ ಶ್ರೀನಿವಾಸ್, ಹಿರಿಯ ನಾಯಕ ಎಸ್.ಇ.ಸುಧೀಂದ್ರ, ಎನ್.ಎಸ್ ಯುಐ ಅಧ್ಯಕ್ಷ ಕೀರ್ತಿ ಗಣೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಮೇಯರ್ ಗಳಾದ ಸಂಪತ್ ರಾಜ್ ಹಾಗೂ ಪದ್ಮಾವತಿ, ಜೆಡಿಎಸ್ ನಿಂದ ಕಾಂಗ್ರೆಸ್ಗೆ ಸೇರಿದ್ದ ತೀರ್ಥಹಳ್ಳಿಯ ಆರ್.ಎಂ. ಮಂಜುನಾಥಗೌಡ, ಯುವ ನಾಯಕ ಎಸ್. ಮನೋಹರ್, ಮಾಜಿ ಜಿಲ್ಲಾಧ್ಯಕ್ಷರಾದ ಜೆ.ಎಸ್. ಆಂಜನೇಯುಲು, ಎಚ್.ಎನ್.ಸುಂದರೇಶ್, ಡಾ.ಅಂಶುಮಂತ್ ಮುಂತಾದವರಿಗೆ 34 ಮಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಹುದ್ದೆಯ ಅದೃಷ್ಟ ಕೂಡಿಬಂದಿದೆ.
ಪಟ್ಟಿಯಲ್ಲಿರುವ ಹೆಸರು
1 ಕಾಂತಾ ನಾಯಕ್
2 ಮುಂಡರಗಿ ನಾಗರಾಜ್
3 ವಿನೋದ್ ಎಸ್ ಅಸೂಟಿ
4 ಬಿ.ಎಚ್. ಹರೀಶ್
5 ಡಾ.ಅಂಶುಮಂಥ್
6ಜೆ.ಎಸ್.ಆಂಜನೇಯುಲು
7 ಡಾ.ಬಿ.ಯೋಗೇಶ್ ಬಾಬು
8 ಡಾ.ಎಚ್.ಕೃಷ್ಣ
9 ಮರಿಗೌಡ
10 ದೇವಿಂದ್ರಪ್ಪ ಮರ್ತೂರು
11 ರಾಜಶೇಖರ್ ರಾಮಸ್ವಾಮಿ
12 ಕೆ.ಮರಿಗೌಡ
13 ಜಯಣ್ಣ
14 ಎಸ್.ಮನೋಹರ್
15 ಆಯೂಬ್ ಖಾನ್
16ಮಮತಾ ಗುಟ್ಟಿ
17 ಜಿ.ಪಲ್ಲವಿ
18 ಎಸ್. ಇ ಸುಧೀಂದ್ರ
19 ಡಾ.ನಾಗಲಕ್ಷ್ಮೀ ಚೌಧರಿ
20 ಎಚ್. ಎಸ್ ಸುಂದರೇಶ್
21 ಆರ್.ಎಂ.ಮಂಜುನಾಥ್ ಗೌಡ
22 ಎಸ್.ಆರ್.ಪಾಟೀಲ್ ಬ್ಯಾಡಗಿ
23 ಸಂಪತ್ ರಾಜ್
24 ಸವಿತಾ ರಘು
25 ಪದ್ಮಾವತಿ
26 ಶಾಕಿರ್ ಸನದಿ
27 ಸರೋವರ ಶ್ರೀನಿವಾಸ್
28 ಸೋಮಣ್ಣ ಬೇವಿನಮರದ್
29 ಬಿ.ಪುಷ್ಪಾ ಅಮರನಾಥ್
30 ಮಹಬೂಬ್ ಪಾಷ
31 ಕೀರ್ತಿ ಗಣೇಶ್
32 ಮಝರ್ಖಾನ್
33 ಲಲಿತ್ ರಾಘವ್
34 ಜಿ.ಎಸ್.ಮಂಜುನಾಥ್