ಕರ್ನಾಟಕದ 25 ವರ್ಷದ ನಕ್ಸಲ್ ಸಾಮ್ರಾಜ್ಯ ಯುಗಾಂತ್ಯಕ್ಕೆ ಕ್ಷಣಗಣನೆ..!!??
– ಕರ್ನಾಟಕದ ಮೋಸ್ಟ್ ವಾಂಟೆಡ್ ಸೇರಿ 6 ನಕ್ಸಲರು ಶರಣಾಗತಿ
– ಶಾಂತಿಗಾಗಿ ನಾಗರೀಕ ವೇದಿಕೆ ಮುಖಾಂತರ ಜಿಲ್ಲಾಡಳಿತದ ಮುಂದೆ ಶರಣಾಗತಿ
NAMMUR EXPRESS NEWS
ಚಿಕ್ಕಮಗಳೂರು: ದಕ್ಷಿಣ ಭಾರತದ 6 ಮೋಸ್ಟ್ ವಾಂಟೆಡ್ ನಕ್ಸಲರು ಇಂದು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ಈ ಮೂಲಕ ಕರ್ನಾಟಕದ ನಕ್ಸಲ್ ಚಟುವಟಿಕೆಯ ಯುಗಾಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಶಾಂತಿಗಾಗಿ ನಕ್ಸಲರು ಶಾಂತಿಗಾಗಿ ನಾಗರೀಕ ವೇದಿಕೆಗೆ ಪತ್ರ ಬರೆದಿದ್ದು ಅದರಂತೆ ಶರಣಾದ ನಕ್ಸಲರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಶಾಂತಿಗಾಗಿ ನಾಗರೀಕ ವೇದಿಕೆ ರಾಜ್ಯಸರ್ಕಾರ ಹಾಗೂ ಗೃಹ ಇಲಾಖೆಗೆ ಮನವಿ ಮಾಡಿದೆ. ನಕ್ಸಲರ ಶರಣಾಗತಿ ಸಂಬಂಧ ಸರ್ಕಾರ ಒಪ್ಪಿಗೆ ಸೂಚಿಸಿ,ಎಲ್ಲ ಪ್ರಯಕ್ರಿಯೆ ಪೂರ್ಣಗೊಳಿಸಿದೆ ಎನ್ನಲಾಗಿದೆ. ಶಾಂತಿಗಾಗಿ ನಾಗರೀಕ ವೇದಿಕೆ ಮತ್ತು ಬಿ.ಟಿ ಲಲಿತಾ ನಾಯಕ್ ಸಮ್ಮುಖದಲ್ಲಿ ಕರ್ನಾಟಕದ ನಕ್ಸಲ್ ತುಂಗಾದಳದ ನಕ್ಸಲ್ ನಾಯಕಿ ಮುಂಡುಗಾರು ಲತಾ,ವನಜಾಕ್ಷಿ,ಸುಂದರಿ,ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಜೀಶ,ಆಂಧ್ರಪ್ರದೇಶದ ಕೆ.ವಸಂತ್,ಕೇರಳದ ಮಾರಪ್ಪ ಆರೋಲಿ ಇಂದು 12 ಗಂಟೆಗೆ ಜಿಲ್ಲಾಡಳಿತ ಮುಂದೆ ಶರಣಾಗಲಿರೋ ನಕ್ಸಲರು. ನಕ್ಸಲರ ಶರಣಾಗತಿ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ ಫುಲ್ ಅಲರ್ಟ್ ಆಗಿದ್ದು,ಜೊತೆಗೆ ಸೆಂಟ್ರಲ್ ಇಂಟೆಲಿಜೆನ್ಸ್ ತಂಡ ಕೂಡ ಅಲರ್ಟ್ ಆಗಿ ಮಾಹಿತಿ ಕಲೆ ಹಾಕಿದೆ.
ಶರಣಾಗೋ ನಕ್ಸಲರ ಬೇಡಿಕೆಗಳೇನು..!??
– ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಗೌರವಯುತ ಆಗಿರಬೇಕು.
– ಶರಣಾಗತಿ ಬಳಿಕ ಜೈಲುಗಳಲ್ಲಿ ಕೊಳೆಯುವಂತೆ ಆಗಬಾರದು.
– ಮೊಕದ್ದಮೆಗಳು ಒಂದೇ ಕೋರ್ಟ್ನಲ್ಲಿ ತ್ವರಿತ ವಿಚಾರಣೆ ಆಗಬೇಕು.
– ಶರಣಾದವರ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು.
– ಅತಂತ್ರ ಬದುಕು ಕೊನೆಗಾಣಿಸಿ ಸುಭದ್ರಗೊಳಿಸಬೇಕು.
– ಕರ್ನಾಟಕ, ಕೇರಳ, ತಮಿಳುನಾಡು ನಮ್ಮ ಬೇಡಿಕೆಯನ್ನು ಒಪ್ಪಬೇಕು