ಜಗತ್ಪ್ರಸಿದ್ಧ ಶಾರದಾ ಶರನ್ನವರಾತ್ರಿ ಉತ್ಸವ ಕ್ಷಣಗಣನೆ
* ಒಂಭತ್ತು ದಿನವೂ ಶಾರದೆಗೆ ವಿವಿಧ ಅಲಂಕಾರ
* ಹೇಗಿರಲಿದೆ ಈ ಬಾರಿಯ ಶೃಂಗೇರಿ ಶಾರದಾ ಶರನ್ನವರಾತ್ರಿ,?
* ಏನೆಲ್ಲಾ ಕಾರ್ಯಕ್ರಮಗಳಿವೆ? ನೀವೂ ಬನ್ನಿ ಶೃಂಗೇರಿಗೆ
NAMMUR EXPRESS NEWS
ಶೃಂಗೇರಿ:- ಜಗತ್ಪ್ರಸಿದ್ಧ ಶೃಂಗೇರಿ ಶ್ರೀ ಶಾರದಾಪೀಠದ ಶರನ್ನವರಾತ್ರಿ ಮಹೋತ್ಸವ ಅಕ್ಟೋಬರ್ 2ರ ಬುಧವಾರ ಪ್ರಾರಂಭಗೊಂಡು ಅ.13 ರ ಭಾನುವಾರದವರೆಗೆ ನೆರವೇರಲಿದೆ.
ಈಗಾಗಲೇ ಉತ್ಸವದ ಎಲ್ಲಾ ತಯಾರಿಗಳು ಪೂರ್ಣಗೊಂಡಿದ್ದು ಶೃಂಗೇರಿ ಪೂರ್ತಿ ಹಬ್ಬದ ಕಳೆಗಟ್ಟಿದೆ. ಸಾವಿರಾರು ಜನರು ಈ ದಸರಾ ಹಬ್ಬಕ್ಕೆ ಶೃಂಗೇರಿಗೆ ಆಗಮಿಸಲಿದ್ದಾರೆ.
ದಿನಕ್ಕೊಂದು ವಿಶೇಷ ಅಲಂಕಾರ
ದಿನಕ್ಕೊಂದು ವಿಶೇಷ ಅಲಂಕಾರದಲ್ಲಿ ಕಂಗೊಳಿಸಲಿರುವ ತಾಯಿ ಶ್ರೀಶಾರದೆ ಅಕ್ಟೋಬರ್ 2 ರಂದು ಶ್ರೀ ಶಾರದಾಂಬೆಗೆ ಮಹಾಭಿಷೇಕ ನೆರವೇರಲಿದ್ದು ಜಗತ್ಪ್ರಸೂತಿಕಾಲಂಕಾರದಲ್ಲಿ ಶ್ರೀ ಶಾರದೆ ಕಂಗೊಳಿಸಲಿದ್ದಾಳೆ.
ಅ.3ರಂದು ಶಾರದಾ ಪ್ರತಿಷ್ಠೆ ಹಾಗೂ ಜಗನ್ಮಾತೆಗೆ ಹಂಸವಹನಾಲಂಕಾರ,
ಅ.4 ಬ್ರಾಹ್ಮೀ ಅಲಂಕಾರ,
ಅ.5 ಮಾಹೇಶ್ವರೀ,
ಅ.6 ಮಯೂರ ವಾಹನಾಲಂಕಾರ,
ಅ.7 ಗರುಡವಾಹನಾಲಂಕಾರ,
ಅಂದು ಶತ ಚಂಡೀಮಹಾಯಾಗದ ಸಂಕಲ್ಪ,ಪುರಶ್ಚರಣಾರಂಭ,
ಅ.8 ಮೋಹಿನೀ ಅಲಂಕಾರ,
ಅ.9 ಸರಸ್ವತ್ಯಾವಾಹನೆ, ವೀಣಾ ಶಾರದಾಲಂಕಾರ,
ಅ.10 ರಾಜರಾಜೇಶ್ವರಿ ಅಲಂಕಾರ,
ಅ.11 ಮಹಾನವಮಿ, ಸಿಂಹ ವಾಹನಾಲಂಕಾರ,ಶತಚಂಡೀಯಾಗದ ಪೂರ್ಣಾಹುತಿ,ಗಜಾಶ್ವಪೂಜೆ,
ಅ.12 ವಿಜಯದಶಮಿ,ಗಜಲಕ್ಷ್ಮೀ ಅಲಂಕಾರ, ಬೆಳಿಗ್ಗೆ ಲಕ್ಷ್ಮೀನಾರಾಯಣಹೃದಯಹೋಮ, ರಾಮಪಟ್ಟಾಭಿಷೇಕ ಸರ್ಗ
ಪಾರಾಯಣಿ, ಸಂಜೆ-ವಿಜಯೋತ್ಸವ,ಶಮೀಪೂಜೆ,
ಅ.13 ಗಜಲಕ್ಷ್ಮೀ ಅಲಂಕಾರ,ಶ್ರೀಶಾರದಾಂಬಾ ಮಹಾರಥೋತ್ಸವ,ಶ್ರೀಜಗದ್ಗುರುಗಳವರ ಅಡ್ಡಪಲ್ಲಕ್ಕಿ ಉತ್ಸವ ಜರುಗಲಿದೆ.
ಏನೆಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತೆ?
ಪ್ರತಿ ದಿನ ಸಂಜೆ 6.30ಕ್ಕೆ ಶ್ರೀಮಠದ ಆವರಣದಲ್ಲಿರುವ ಶ್ರೀಚಂದ್ರಶೇಖರಭಾರತೀ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.
ಅ.3 ರಂದು ಶೃಂಗೇರಿ ಸಹೋದರಿಯರಿಂದ ಶಾಸ್ತ್ರೀಯ ಸಂಗೀತ.
ಅ.4 ರಂದು ಬೆಂಗಳೂರಿನ ವಿದುಷಿ ಐಶ್ವರ್ಯ ಮಹೇಶ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ.
ಅ.5 ರಂದು ಚೆನ್ನೈ ವಿದ್ವಾನ್ ರಾಮನಾಥ ಭಾಗವತ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ.
ಅ.6ರಂದು ಅಸ್ಥಾನ ವಿದುಷಿ ಚೆನ್ನೈನ ಮಾಲಾ ಚಂದ್ರಶೇಖರ್ ಹಾಗೂ ಸಂಗಡಿಗರಿಂದ ಕೊಳಲುವಾದನ.
ಅ.7ರಂದು ಬೆಂಗಳೂರಿನ ವಿದ್ವಾನ್ ಆರ್.ಎನ್.ತ್ಯಾಗರಾಜನ್ ಮತ್ತು ಆರ್.ಎನ್.ತಾರಾನಾಥನ್ ಅವರಿಂದ ಶಾಸ್ತ್ರೀಯ ಸಂಗೀತ.
ಅ.8 ರಂದು ಕೇರಳದ ವಿದ್ವಾನ್ ಶಂಕರನ್ ನಂಬೂದಿರಿ ಮತ್ತು ಸಂಗಡಿಗರಿಂದ ಶಾಸ್ತ್ರೀಯ ಸಂಗೀತ.
ಅ.9 ರಂದು ಬೆಂಗಳೂರಿನ ವಿದ್ವಾನ್ ಆರ್.ಕೆ.ಶಂಕರ್ ಹಾಗೂ ಸಂಗಡಿರಿಂದ ವೀಣಾವಾದನ.
ಅ.10 ರಂದು ಬೆಂಗಳೂರು ಜ್ಞಾನೋದಯ ಶಾಲಾವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ.
ಅ.11 ರಂದು ಬೆಂಗಳೂರು ಡಾ||ವಾಗೀಶ್ ಹಾಗೂ ಸಂಗಡಿಗರಿಂದ ಶಾಸ್ತ್ರೀಯ ಸಂಗೀತ.
ಪ್ರತಿನಿತ್ಯ ತಾಯಿ ಶಾರದೆಗೆ ಬೀದಿ ಉತ್ಸವ!
ನವರಾತ್ರಿ ಪ್ರಯುಕ್ತ ಶ್ರೀಮಠದಲ್ಲಿ ಪ್ರತಿನಿತ್ಯ ತಾಯಿ ಶಾರದೆಗೆ ಬೀದಿ ಉತ್ಸವ, ವೇದ-ಪುರಾಣ-ಇತಿಹಾಸ-ಪ್ರಸ್ಥಾನತ್ರಯಭಾಷ್ಯ-ಪಾರಾಯಣಿ ಗಳು,ಉಭಯಶ್ರೀಗಳಿಂದ ಜಗನ್ಮಾತೆಗೆ ವಿಶೇಷಪೂಜೆ,ಸಂಜೆ ಶಾರದಾಂಬಾ ದೀಪೋತ್ಸವ,ಶ್ರೀ ಜಗನ್ಮಾತೆಗೆ ಉಯ್ಯಾಲೆ ಸೇವೆ,ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರ ಸಮ್ಮುಖದಲ್ಲಿ ದರ್ಬಾರು, ಮಹಾಮಂಗಳಾರತಿ ಹಾಗೂ ಅಷ್ಟಾವಧಾನ ಸೇವೆ ನಡೆಯುತ್ತದೆ.
ಬನ್ನಿ ನಮ್ಮ ಶೃಂಗೇರಿ ಶಾರದಾ ಶರನ್ನವರಾತ್ರಿಗೆ… ಸರ್ವರಿಗೂ ಸುಸ್ವಾಗತ