ಶೀಘ್ರದಲ್ಲಿ ಕೆಎಸ್ಆರ್ಟಿಸಿ ಬಸ್ಸಲ್ಲೂ ಡಿಜಿಟಲ್ ಪೇಮೆಂಟ್!
– ಯುಪಿಐ, ಎಟಿಎಂ ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ
– ಆ್ಯಂಡ್ರಾಯ್ಡ ಆಪರೇಟಿಂಗ್ನ ಟಚ್ ಸ್ಕ್ರೀನ್ ಯಂತ್ರ ಸೌಲಭ್ಯ
– ಹಣ ಇನ್ನು ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು
NAMMUR EXPRESS NEWS
Bengal: ಶೀಘ್ರದಲ್ಲಿ ಕೆಎಸ್ಆರ್ಟಿಸಿ ಬಸ್ಸಲ್ಲೂ ಡಿಜಿಟಲ್ ಪೇಮೆಂಟ್ ಜಾರಿಗೆ ಬರಲಿದೆ. ಈಗ ಎಲ್ಲಾ ಕಡೆ ಡಿಜಿಟಲ್ ಹಣ ವರ್ಗಾವಣೆ ಇರುವುದರಿಂದ ಕೆ.ಎಸ್. ಆರ್.ಟಿ.ಸಿ ಕೂಡ ಜಾರಿಗೆ ಮುಂದಾಗಿದೆ. ಯುಪಿಐ, ಎಟಿಎಂ ಕಾರ್ಡ್ ಮೂಲಕ ಹಣ ಪಾವತಿಗೆ ಅವಕಾಶ ಮಾಡಿಕೊಡಲು ಆ್ಯಂಡ್ರಾಯ್ಡ ಆಪರೇಟಿಂಗ್ನ ಟಚ್ ಸ್ಕ್ರೀನ್ ಯಂತ್ರ ಸೌಲಭ್ಯ ಸಿದ್ಧಮಾಡಿಕೊಳ್ಳಲಾಗುತ್ತಿದೆ. ಇನ್ನು ನಿಮ್ಮ ಮೊಬೈಲ್ ಅಲ್ಲೇ ಹಣ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಬಹುದು
ಈಗಾಗಲೇ ಮಾದರಿ ಯೋಜನೆ ಜಾರಿ!
ಕೆಎಸ್ಆರ್ಟಿಸಿಗೂ ಸ್ಮಾರ್ಟ್ ಟಿಕೆಟ್ ಯಂತ್ರಗಳು ಬಂದಿದ್ದು, ಪ್ರಯಾಣಿಕರು ಯುಪಿಐ ಮೂಲಕ ಕ್ಯೂಟರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ಈ ನಗದು ರಹಿತ ವ್ಯವಸ್ಥೆಯು ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಈಗಾಗಲೇ ವಾಯವ್ಯ ಸಾರಿಗೆಯವರು ಸ್ಕ್ಯಾನ್ ಮಾಡುವ ಯಂತ್ರವನ್ನು ಅಳವಡಿಸಿದ್ದಾರೆ. ಆದರೆ ಕೆಎಸ್ಆರ್ಟಿಸಿ ಎಟಿಎಂ ಕಾರ್ಡ್ ಮೂಲಕವೂ ಹಣ ಪಾವತಿಸಲು ಅವಕಾಶ ನೀಡಿದೆ. ಯಂತ್ರಗಳನ್ನು ನಿರ್ವಾಹಕರಿಗೆ ನೀಡುವ ಕಾರ್ಯ ಆರಂಭವಾಗಿದ್ದು, ಅದರ ನಿರ್ವಹಣೆ ಕರಗತವಾದ ಬಳಿಕ ಡಿಜಿಟಲ್ ಪಾವತಿ ಆರಂಭವಾಗಲಿದೆ.
ಆ್ಯಂಡ್ರಾಯ್ಡ ಯಂತ್ರ ಲಭ್ಯ: ಹೇಗೆ ಕಾರ್ಯಾಚರಣೆ?
ಈಗಿರುವ ಟಿಕೆಟ್ ವಿತರಣೆ ಯಂತ್ರಗಳ ಬದಲಿಗೆ ನಿರ್ವಾಹಕರಿಗೆ ಆ್ಯಂಡ್ರಾಯ್ಡ ಆಪರೇಟಿಂಗ್ನ ಟಚ್ ಸ್ಕ್ರೀನ್ ಸೌಲಭ್ಯದ ಸ್ಮಾರ್ಟ್ ವಿದ್ಯುನ್ಮಾನ ಟಿಕೆಟ್ ಯಂತ್ರ (ಇಟಿಎಂ) ನೀಡಲಾಗುತ್ತಿದೆ. 45 ಡಿಪೋಗಳಿಗೆ ಒದಗಿಸಲಾಗಿದ್ದು, ಅಕ್ಟೋಬರ್ ಅಂತ್ಯಕ್ಕೆ ಎಲ್ಲ 83 ಡಿಪೋಗಳಿಗೆ 10,240 ಯಂತ್ರಗಳನ್ನು ನೀಡಲಾಗುವುದು. ಮೊದಲ ಹಂತದಲ್ಲಿ ಈ ವಿದ್ಯುನ್ಮಾನ ಯಂತ್ರಗಳಲ್ಲಿ ನಗದು ರಹಿತ ಟಿಕೆಟ್ ವ್ಯವಸ್ಥೆಯ ಸಾಫ್ಟ್ವೇರ್ ಅಳವಡಿಸಿ, ಅದರ ಕಾರ್ಯ ನಿರ್ವಹಣೆ, ಸಾಧಕ – ಬಾಧಕಗಳನ್ನು ಪರಿಶೀಲಿಸಿ, ಅನಂತರ ಎಲ್ಲ ಬಸ್ಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಯಂತ್ರಗಳ ಬಳಕೆಗೆ ಸಂಬಂಧಿಸಿ ನಿರ್ವಾಹಕರು ಹಾಗೂ ಸಿಬಂದಿಗೆ ತರಬೇತಿ ನೀಡಲಾಗಿದೆ.
ಬಾಡಿಗೆ ಆಧಾರದಲ್ಲಿ ಯಂತ್ರಗಳ ಖರೀದಿ
ಎಲೆಕ್ಟ್ರಾನಿಕ್ ಟಿಕೆಟಿಂಗ್ಗೆ ಸರಿ ಹೊಂದುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಖರೀದಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಸಮಗ್ರ ಟಿಕೆಟಿಂಗ್ ತಂತ್ರಾಂಶದ ವಿನ್ಯಾಸ, ಅಭಿವೃದ್ಧಿ, ಅನುಷ್ಠಾನ, ವೆಬ್ ಹೋಸ್ಟಿಂಗ್, ಕಾರ್ಯಾಚರಣೆ ಮತ್ತು ನಿರ್ವಹಣೆಯ ಜತೆಗೆ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳ ಪೂರೈಕೆದಾರರನ್ನು ಆಯ್ಕೆ ಮಾಡಲು ದಿಲ್ಲಿ ಮೂಲದ ಮೇ ಎಬಿಕ್ಸ್ ಕ್ಯಾಶ್ ಸಂಸ್ಥೆ ಟೆಂಡರ್ ಪಡೆದುಕೊಂಡಿದೆ. ಎಲ್ಲ ಡಿಪೋಗಳಿಗೆ ವಿತರಣೆ ಆದ ಬಳಿಕ ಡಿಜಿಟಲ್ ಪಾವತಿ ಆರಂಭಿಸಲಾಗುವುದು. ಯಂತ್ರಗಳನ್ನು ತರಿಸಿದ ಬಳಿಕ ಅದರಲ್ಲಿ 52 ಸುಧಾರಣೆಗಳನ್ನು ಮಾಡಲಾಗಿದೆ. ಯುನಿಕೋಡ್ ಮೊದಲಾದ ಕನ್ನಡ ಅಕ್ಷರಗಳು ಸಹಿತ ಅನೇಕ ನಿರ್ವಾಹಕರು ಬದಲಾವಣೆಗಳಾಗಿದ್ದು, ಯಂತ್ರದ ಸರಿಯಾಗಿ ನಿರ್ವಹಣೆಯನ್ನು ಕಲಿತ ಬಳಿಕ ಡಿಜಿಟಲ್ ಪಾವತಿ ಆರಂಭವಾಗಲಿದೆ ಎಂದು ಕೆಎಸ್ಆರ್ ಟಿಸಿಯ ನಿಗಮ ಕಾರ್ಯದರ್ಶಿ ಡಾ| ಟಿ.ಎಸ್. ಲತಾ ತಿಳಿಸಿದ್ದಾರೆ.