ರಾಜ್ಯದ ಓದುಗರ ಮನ ಗೆದ್ದ ದೀಪಾವಳಿ ವಿಶೇಷ ಸಂಚಿಕೆ
– ರಾಜ್ಯದ 100ಕ್ಕೂ ಹೆಚ್ಚು ಪ್ರತಿಭೆಗಳ ಸಾಧನೆ ಅನಾವರಣ
– ನಮ್ಮೂರ್ ಎಕ್ಸ್ ಪ್ರೆಸ್ ಮೀಡಿಯಾದ ವಿಶೇಷ ಕಲ್ಪನೆ
– ಮನೆ ಮನೆಗೆ ತಲುಪುತ್ತಿದೆ 156 ಪುಟಗಳ ಪುರವಣಿ
ಕರ್ನಾಟಕದ ಮಾಧ್ಯಮ ಲೋಕದಲ್ಲಿ ತನ್ನ ಸೃಜನಶೀಲ, ಕ್ರಿಯಾಶೀಲ ಬರವಣಿಗೆಯ ಮೂಲಕವೇ ಓದುಗರ ಮನದ ಕದ ತಟ್ಟಿ, ಸುದೀರ್ಘ 9 ವರ್ಷ ಪೂರೈಸಿದ ನಮ್ಮೂರ್ ಎಕ್ಸ್ಪ್ರೆಸ್ ಇದೀಗ ದಶಕದ ಮಾಧ್ಯಮ ಪಯಣದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಕಳೆದ 9 ವರ್ಷದ ಮಾಧ್ಯಮ ಜರ್ನಿಯಲ್ಲಿ ಸಾವಿರಾರು ಜನರ ದನಿಯಾಗಿದ್ದು, ರಾಜ್ಯದ ಮೂಲೆ ಮೂಲೆಯಲ್ಲಿ ತನ್ನದೇ ಓದುಗರ ವಲಯವನ್ನು ಸೃಷ್ಟಿಸಿಕೊಂಡಿದೆ. ಸುದ್ದಿಯ ಭ್ರಮೆಗೆ ಬೀಳದೆ ಪಾಸಿಟಿವ್ ಸಮಾಜ ಕಟ್ಟಲು ಯಾವ ಸುದ್ದಿ ಬೇಕೋ ಅದನ್ನು ಮಾತ್ರ ನೀಡುತ್ತಿದ್ದೇವೆ.
ಕ್ರಿಯಾಶೀಲ ಮನಸುಗಳು ಕಟ್ಟಿದ ಸಂಸ್ಥೆ
ರಾಜ್ಯದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯುಳ್ಳ, ಒಂದಷ್ಟು ಕ್ರಿಯಾಶೀಲ ಮನಸುಗಳು ಕಟ್ಟಿದ ಸಂಸ್ಥೆ ಇದಾಗಿದ್ದು, ಇದೀಗ ಅನೇಕ ಯುವ ಪ್ರತಿಭೆಗಳಿಂದ, ಹತ್ತನೇ ವರ್ಷಕ್ಕೆ ಕಾಲಿಟ್ಟು 2025 ಕ್ಕೆ ದಶ ಮಹೋತ್ಸವದ ಸಂಭ್ರಮಕ್ಕೆ ಸಜ್ಜಾಗಿದೆ.
ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮವು ರಾಜ್ಯದ ಪ್ರತಿ ಜಿಲ್ಲೆಗಳನ್ನು ಪ್ರವೇಶಿಸಿ ನಿಷ್ಪಕ್ಷಪಾತ ವರದಿಗಾರಿಕೆ, ಸರಳ ಸುದ್ದಿ , ಪ್ರಾಮಾಣಿಕ ಬರವಣಿಗೆಯ ಮೂಲಕ ಜನರ ದನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ರಾಜ್ಯದ ಮೂಲೆ ಮೂಲೆಯನ್ನು ತಲುಪಿ, ಎಲ್ಲಾ ಜಿಲ್ಲೆಗಳಲ್ಲಿಯೂ ತನ್ನದೇ ಓದುಗರ ವಲಯವನ್ನು ಸೃಷ್ಟಿಸಿ, ಕ್ರಿಯಾತ್ಮಕ ಸಂಸ್ಥೆ ಎಂದೇ ಪ್ರಸಿದ್ಧಿಗೊಂಡಿದೆ.
ದೇಶ ವಿದೇಶದಲ್ಲೂ ಸುದ್ದಿ
ನಮ್ಮೂರ್ ಎಕ್ಸ್ಪ್ರೆಸ್ ದೇಶ, ವಿದೇಶ, ರಾಜ್ಯ, ತಾಲ್ಲೂಕಿನಿಂದ ಹಿಡಿದು ಮುಖ್ಯವಾಗಿ ಪ್ರತಿ ಗ್ರಾಮ ಮತ್ತು ಹಳ್ಳಿಯವರೆಗೂ ಎಲ್ಲ ಸುದ್ದಿಯನ್ನು ವಿಶೇಷವಾಗಿ ಜನರಿಗೆ ಬಿತ್ತರಿಸುತ್ತಾ ಬಂದಿದೆ. ಅದರಲ್ಲೂ ಜನರಿಗೆ ಬೇಕಾದ ಸುದ್ದಿ ಮಾತ್ರ ಬಿತ್ತರಿಸುತ್ತಿದೆ.
ರಾಜ್ಯದ ಎಲ್ಲೆಡೆ ನೆಟ್ವರ್ಕ್
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿ ಈವರೆಗೆ ಸುಮಾರು 300 ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶವನ್ನು ನೀಡಿದ ಹೆಮ್ಮೆಯ ಸಂಸ್ಥೆ ನಮ್ಮದು.
ತನ್ನ ಬರವಣಿಗೆಯಲ್ಲಿ ಕ್ರಿಯಾತ್ಮಕತೆ, ವಿಭಿನ್ನತೆ, ಹೊಸತನ ಹಾಗೂ ಸೃಜನಶೀಲತೆಯೊಂದಿಗೆ ಸಕರಾತ್ಮಕತೆಯ ಮೂಲಕ ಸುದ್ದಿಯನ್ನು ಸುದ್ದಿಯನ್ನಾಗಿ ಕೊಡುತ್ತಾ ನೂರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ.
ಪ್ರತಿಷ್ಠಿತ ಸಂಸ್ಥೆಗಳ ಸಹಕಾರ
ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ನಮ್ಮೂರ್ ಎಕ್ಸ್ಪ್ರೆಸ್ ಓದುಗರ ಅಭಿರುಚಿಗೆ ತಕ್ಕಂತೆ ಕ್ರಿಯಾತ್ಮಕವಾಗಿ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದು, ರಾಜ್ಯದ ಪ್ರತಿಷ್ಠಿತ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ದೊಡ್ಡ ಉದ್ಯಮಗಳು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಜಾಹೀರಾತುದಾರರಾಗಿರುವುದಕ್ಕೆ ಹೆಮ್ಮೆ ಇದೆ.
ಓದುಗರ ಪ್ರೀತಿ, ವಿಶ್ವಾಸ, ಹಾರೈಕೆಯೊಂದಿಗೆ ಸಾವಿರಾರು ಪ್ರತಿಭೆಗಳಿಗೆ ವೇದಿಕೆಯಾಗಿ ನಿಮ್ಮ ಸುದ್ದಿಯ ಜೊತೆಗಾರನಾಗಿ ಸದಾ ನಮ್ಮೂರ್ ಎಕ್ಸ್ ಪ್ರೆಸ್ ದುಡಿಯುತ್ತಿದೆ.
ಯುವ ಸಾಧಕರಿಗೆ ಅರ್ಪಣೆ
ದೀಪಾವಳಿ ವಿಶೇಷ ಸಂಚಿಕೆ ವಿಶೇಷವಾಗಿ ರಾಜ್ಯದ ಯುವ ಕಲಾವಿದರು, ಗಾಯಕರು, ನಟ ನಟಿಯರು, ಜನರ ಭಾವನೆಗಳು, ಅಭಿವೃದ್ಧಿ ವಿಚಾರಗಳು, ಕೃಷಿ, ಧಾರ್ಮಿಕತೆ, ಉದ್ಯಮ ಹೀಗೆ ಇಡೀ ರಾಜ್ಯದ ಕಲ್ಪನೆ ಇಲ್ಲಿದೆ. ಮುಂದೆ ನಿಮ್ಮೆಲ್ಲರ ಜತೆ ಮತ್ತಷ್ಟು ಹೊಸ ಬರಹ, ಸುದ್ದಿ, ಸೇವೆಯೊಂದಿಗೆ ಬರಲಿದ್ದೇವೆ.
5000 ಪ್ರತಿಗಳು ನೇರ ಓದುಗರಿಗೆ
156 ಪುಟಗಳ ಸುಂದರ ಸಂಚಿಕೆ ಈಗಾಗಲೇ ಮಲೆನಾಡು, ಕರಾವಳಿ, ಬೆಂಗಳೂರು ವಿಭಾಗದಲ್ಲಿ 5000 ಪ್ರತಿಗಳು ಓದುಗರ ತಲುಪುತ್ತಿವೆ. ಸಾವಿರಾರು ಪ್ರತಿಗಳು ರಾಜ್ಯದ ವಿವಿಧ ಜಿಲ್ಲೆಗಳ ಓದುಗರಿಗೆ ತಲುಪಲಿದೆ.