ಚಾಲಕರ ರೀಲ್ಸ್ ಕ್ರೇಜ್: ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ!
– ಸರ್ಕಾರದಿಂದ ಖಡಕ್ ಎಚ್ಚರಿಕೆ: ಏನಿದು ಹುಚ್ಚಾಟ?
– ಇತ್ತೀಚಿಗೆ ರೀಲ್ಸ್ ಮಾಡಲು ಹೋಗಿ ಅನೇಕ ಅಪಘಾತ
NAMMUR EXPRESS NEWS
ಬೆಂಗಳೂರು: ಕೆಎಸ್ಆರ್ಟಿಸಿಮತ್ತು ಬಿಎಂಟಿಸಿ ಬಸ್ ಚಾಲಕರು, ನಿರ್ವಾಹಕರು ಕೂಡ ರೀಲ್ಸ್ ಮಾಡುತ್ತ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ ಖಡಕ್ ಸೂಚನೆ ನೀಡಿದೆ.ಎದುರಿಗಿನ ಬಸ್ ಚೇಸ್ ಮಾಡೋ ರೀಲ್ಸ್, ಸಿಂಹಾಂದ್ರಿಯ ಸಿಂಹ ಸಿನಿಮಾದ ಸಿಂಹ ಸಿಂಹ ಸಾಂಗಿಗೆ ಪ್ರಯಾಣಿಕರಿಗೆ ಕೈ ಬೀಸಿಕೊಂಡು ರೀಲ್ಸ್, ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಚಾರಿ ಸಿನಿಮಾದ ನುಗ್ಗೋದೆ ಸಿಂಗಲ್ಲು ಸಾಂಗ್ ಗೆ ಡ್ರೈವಿಂಗ್ ಮಾಡಿಕೊಂಡು ರೀಲ್ಸ್, ಭಯಾನಕ ಶಿರಾಡಿ ಗಾಟ್ ಸೆಕ್ಷನ್ ರೋಡ್ ನಲ್ಲಿ ಡ್ರೈವಿಂಗ್ ಮಾಡ್ಕೊಂಡು ರೀಲ್ಸ್ ಗೆ ಮಾಡಿದ ಡ್ರೈವರ್ ಗಳು ಹೀಗೆ ಡ್ರೈವಿಂಗ್ ಮಾಡುತ್ತಲೇ ಪ್ರಯಾಣಿಕರ ಪ್ರಾಣವನ್ನು ಲೆಕ್ಕಿಸದೇ ರೀಲ್ಸ್ ಮಾಡುತ್ತಿರುವ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ. ಇತ್ತ ಬಿಎಂಟಿಸಿಯ ಲೇಡಿ ಕಂಡಕ್ಟರ್ ನೀ ಡ್ರೈವರ್ ಆ ನನ್ನ ಲವ್ವರ್ ಸಾಂಗ್ ಗೆ ಬಿಎಂಟಿಸಿ ಬಸ್ ನಲ್ಲೇ ರೀಲ್ಸ್ ಮಾಡಿದ್ದಾರೆ.
ರೀಲ್ಸ್ ಮಾಡೋದನ್ನೇ ಹವ್ಯಾಸ ಮಾಡಿಕೊಂಡಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆಯ ಚಾಲಕ ನಿರ್ವಾಹಕರಿಗೆ ಸಾರಿಗೆ ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುತ್ತಾ ಚಾಲಕನೋರ್ವ ಎತ್ತಿನ ಬಂಡಿಗೆ ಡಿಕ್ಕಿಯೊಡೆದ ಪರಿಣಾಮ ರೈತ ಗಂಭೀರ ಗಾಯಗೊಂಡಿದ್ದು, ಎರಡು ಹಸುಗಳು ಸಾವನ್ನಪಿದ್ದವು. ರೈತನೊಬ್ಬ ಗಂಭೀರ ಗಾಯಗೊಂಡಿದ್ದ. ಈ ಘಟನೆ ನಂತರ ಎಚ್ಚೆತ್ತ ಸಾರಿಗೆ ಸಚಿವರು ಇದಕ್ಕೆ ಕಡಿವಾಣ ಹಾಕಲು ಖಡಕ್ ನಿರ್ಧಾರ ಮಾಡಿದ್ದಾರೆ. ಯಾರೇ ರೀಲ್ಸ್ ಮಾಡಿದ್ರೂ ಅವರನ್ನ ಕೂಡಲೇ ಸಸ್ಪೆಂಡ್ ಮಾಡಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರೀಲ್ಸ್ ಮಾಡುವಾಗ ಎತ್ತಿನ ಗಾಡಿಗೆ ಡಿಕ್ಕಿಯೊಡೆದ ಚಾಲಕ!
ಸಾರಿಗೆ ಬಸ್ ಚಾಲಕನ ರೀಲ್ಸ್ ಹುಚ್ಚಾಟಕ್ಕೆ ಎರಡು ಎತ್ತುಗಳು ಬಲಿಯಾದ ಘಟನೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಬಳಿ ಬುಧವಾರ ನಡೆದಿತ್ತು. ಘಟನೆಯಲ್ಲಿ ಇಬ್ಬರು ರೈತರಿಗೆ ಗಂಭೀರವಾದ ಗಾಯಗಳಾಗಿವೆ.
ಬಸ್ಸಿನ ಒಳಗೆ ಛತ್ರಿ ಹಿಡಿದು ರೀಲ್ಸ್ ಮಾಡಿದ್ದ ಚಾಲಕ!
ಬಸ್ಸಿನ ಒಳಗೆ ಛತ್ರಿ ಹಿಡಿದು ರೀಲ್ಸ್ ಮಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ಬಸ್ಸು ಸೋರುತ್ತಿದ್ಯಾ ಎಂದು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.ಇವಿಷ್ಟೇ ಅಲ್ಲದೇ ಹಲವು ರೀತಿ ರೀಲ್ಸ್ ಮಾಡಿ ಅವಘಡಗಳಿಗೆ ಕಾರಣವಾಗುತ್ತಿದ್ದಾರೆ ಎಂದು ಸಾರಿಗೆ ಸಚಿವ್ರು ಅಧಿಕಾರಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ. ಬಸ್ ಹತ್ತುವ ಪ್ರಯಾಣಿಕರ ಜೀವಗಳು ನಿಮ್ಮ ಕೈಯಲ್ಲೇ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.