ರಾಜ್ಯದಲ್ಲಿ ಪಟಾಕಿ ಸಿಡಿತಕ್ಕೆ ಮೊದಲ ಬಲಿ
– ಬೆಂಗಳೂರಲ್ಲಿ ಯುವಕ ಸಾವು, 6 ಜನರ ಬಂಧನ!-
– ಮತ್ತೆ ವಾಯುಭಾರ ಕುಸಿತ
– ಕರ್ನಾಟಕದ ಮುಂದಿನ 4 ದಿನದ ಹವಾಮಾನ ಮುನ್ಸೂಚನೆ
– ಹಾಸನಾಂಬೆ ದೇವಾಲಯ ಹುಂಡಿ ಎಣಿಕೆ
NAMMUR EXPRESS NEWS
ಬೆಂಗಳೂರು : ಬೆಂಗಳೂರಿನಲ್ಲಿ ದೀಪಾವಳಿಯ ದಿನ ಪಟಾಕಿ ಸಿಡಿದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಣನಕುಂಟೆ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿದು ಯುವಕ ಗಂಭೀರವಾಗಿ ಗಾಯಗೊಂಡಿದ್ದ, ಬಳಿಕ ಆಸ್ಪತ್ರೆಗೆ ದಾಖಲಾದಗ ನವೆಂಬರ್ 2 ರಂದು ಯುವಕ ಸಾವನ್ನಪ್ಪಿದ್ದಾನೆ. ದೀಪಾವಳಿ ಹಬ್ಬದಂದು ರಾತ್ರಿ ವೇಳೆ ಪಟಾಕಿ ಹೊಡೆದಿದ್ದ ಶಬರೀಶ್ ಹಾಗೂ ಸ್ನೇಹಿತರು. ಡಬ್ಬಿಗೆ ಪಟಾಕಿ ಅಂಟಿಸಿ ಅದರ ಮೇಲೆ ಕೂರಲು ಚಾಲೆಂಜ್ ಮಾಡಿದ್ದರು. ಕುಡಿದ ಮತ್ತಿನಲ್ಲಿ ಶಬರೀಶ್ ಪಟಾಕಿಯ ಡಬ್ಬ ಇಟ್ಟು ಕುಳಿತಿದ್ದ. ಪಟಾಕಿ ಸಿಡಿದ ರಭಸಕ್ಕೆ ಶಬರೀಶ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ನವೆಂಬರ್ 2ರಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಶಬರೀಶ್ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಮತ್ತೆ ವಾಯುಭಾರ ಕುಸಿತ
– ಕರ್ನಾಟಕದ ಮುಂದಿನ 4 ದಿನದ ಹವಾಮಾನ ಮುನ್ಸೂಚನೆ
ಬೆಂಗಳೂರು : ದೇಶದಲ್ಲಿ ಕೆಲವು ದಿನಗಳ ಹಿಂದಷ್ಟೇ ‘ಡಾನಾ’ ಚಂಡಮಾರುತ ಅಬ್ಬರಿಸಿ ಕೊನೆಗೊಂಡಿದೆ. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಚಂಡಮಾರುತ ಪರಿಚಲನೆ ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿದೆ. ಇದು ಏನೇನು ಅವಾಂತರ ಸೃಷ್ಟಿ ಮಾಡಲಿದೆಯೋ ಎಂದು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯದ ಜನರಲ್ಲಿ ಆತಂಕ ಶುರುವಾಗಿದೆ. ಹವಾಮಾನ ಇಲಾಖೆ ಕರ್ನಾಟಕಕ್ಕೆ ಮುಂದಿನ ನಾಲ್ಕು ದಿನ ಯಾವ ಮುನ್ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಹವಾಮಾನ ಇಲಾಖೆ ಪ್ರಕಾರ, ದಕ್ಷಿಣ ತಮಿಳುನಾಡು ಕರಾವಳಿ ಮತ್ತು ಪಕ್ಕದ ಶ್ರೀಲಂಕಾದ ಮೇಲೆ ಚಂಡಮಾರುತದ ಪರಿಚಲನೆಯು ಈಗ ದಕ್ಷಿಣ ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಇದೆ. ಈ ಪರಿಚಲನೆ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಮೀ ವರೆಗೆ ವಿಸ್ತರಣೆಗೊಂಡಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ಮುಖ್ಯಸ್ತರು ಮತ್ತು ವಿಜ್ಞಾನಿ ಡಾ.ಎನ್.ಪುವಿಯರಸನ್ ಅವರು ತಿಳಿಸಿದ್ದಾರೆ. ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ಮೇಲಿನ ಚಂಡಮಾರುತದ ಪರಿಚಲನೆಯಿಂದ ಟ್ರಫ್ ಮತ್ತು ಪಕ್ಕದ ಶ್ರೀಲಂಕಾದಿಂದ ಕರಾವಳಿ ಕರ್ನಾಟಕಕ್ಕೆ 0.9 ಕಿಮೀ ಎತ್ತರದಲ್ಲಿ ಸಮುದ್ರ ಮಟ್ಟದಿಂದ ಕಡಿಮೆ ಇದೆ. ಇದರಿಂದ ಕೆಲವೆಡೆ ಸಾಧಾರದಿಂದ ಭಾರೀ ಮಳೆ ಬರಬಹುದು. ಕೆಲವೆಡೆ ಶುಷ್ಕವಾತಾವರಣ ಮುಂದುವರಿಯಬಹದು ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಾಗ ಮಬ್ಬು ವಾತಾವರಣ ಕಂಡು ಬಂದರೂ ಸಹಿತ ದಿನವಿಡೀ ಬಿಸಿಲಿನ ವಾತಾವರಣ ಕಂಡು ಬರಲಿದೆ. ಒಂದರಡು ಕಡೆಗಳಲ್ಲಿ ತುಂತುರು ಮಳೆ ಆಗಬಹುದು ಎನ್ನಲಾಗಿದೆ. ರಾಜ್ಯದಲ್ಲಿ ಮುಂದಿನ ನವೆಂಬರ್ 7ರವರೆಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಮತ್ತು ದಕ್ಷಿಣ ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರ ಹೊರತು ಎಲ್ಲಿಯೂ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಎರಡು ಮೂರು ದಿನಗಳ ಹಿಂದಷ್ಟೇ ತಡರಾತ್ರಿ ಭರ್ಜರಿ ಮಳೆ ಸುರಿದಿದೆ. ಮೆಕ್ಕೆಜೋಳ ಸೇರಿದಂತೆ ಕೊಯ್ಲಿಗೆ ಬಂದ ಮುಂಗಾರು ಬೆಳೆ ಕಟಾವಿಗೆ ಮಳೆ ತೊಂದರೆ ನೀಡುತ್ತಿದೆ. ಹೊಲದಲ್ಲಿ ಕಾಲಿಡದಂತೆ ಸ್ಥಿತಿ ಇದೆ. ಇದೀಗ ಮುಂದಿನ ನವೆಂಬರ್ 7ರವರೆಗೆ ಯಾವುದೇ ಮಳೆ ಅಬ್ಬರ, ಆರ್ಭಟ ಕಂಡು ಬರುವುದಿಲ್ಲ.
– ಹಾಸನಾಂಬೆ ದೇವಾಲಯ ಹುಂಡಿ ಎಣಿಕೆ
ನಿನ್ನೆಯಷ್ಟೇ ಹಾಸನಾಂಬೆ ದೇವಸ್ಥಾನದ ಗರ್ಭ ಗುಡಿಯ ಬಾಗಿಲನ್ನು ಶಾಸ್ತೋಕ್ತವಾಗಿ ಮುಚ್ಚಲಾಗಿದ್ದು, ಇಂದು ದೇವಾಲಯದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದೆ. ಹಾಸನಾಂಬೆ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಮ್ಮುಖದಲ್ಲಿ 500 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಹುಂಡಿ ಎಣಿಕೆ ಕಾರ್ಯ ನಡೆಸುತ್ತಿದ್ದಾರೆ. ಇನ್ನು ಸಿಬ್ಬಂದಿ ಜೊತೆಗೆ ಹುಂಡಿ ಎಣಿಕೆ ಕಾರ್ಯದಲ್ಲಿ ಬ್ಯಾಂಕ್ನ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ. ಈ ವರ್ಷ ಅಕ್ಟೋಬರ್ 24 ರಿಂದ ನವೆಂಬರ್ 3 ರವರೆಗೆ ನಡೆದಿದ್ದ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ಕೋಟಿ ಕೋಟಿ ಆದಾಯ ಬಂದಿದೆ. ಹಾಸನಾಂಬೆ ದೇವಾಲಯದಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ 9 ಕೋಟಿ 67 ಲಕ್ಷದ 27 ಸಾವಿರದ 180 ರೂಪಾಯಿ ದಾಖಲೆಯ ಆದಾಯ ಸಂಗ್ರಹವಾಗಿದೆ. ಸದ್ಯ ಇದೀಗ ನಡೆಯುತ್ತಿರುವ ಹುಂಡಿ ಎಣಿಕೆ ಕಾರ್ಯ ಹಾಸನಾಂಬೆಯ ಇತಿಹಾಸದಲ್ಲಿಯೇ ದಾಖಲೆ ಹಣ ಸಂಗ್ರಹವಾಗುವ ಸಾಧ್ಯತೆಗಳಿವೆ.