ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕೆ ಸಜ್ಜು!
– ಹಿಂದೂ ಜನಜಾಗೃತಿ ಸಮಿತಿ ಆಯೋಜನೆ
– ಸನಾತನ ಧರ್ಮದ ರಕ್ಷಣೆಯೇ ಮುಖ್ಯ ಗುರಿ
NAMMUR EXPRESS NEWS
ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಅಂದರೆ ದ್ವಾದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಜೂ.24 ರಿಂದ 30ರವರೆಗೆ ಗೋವಾ ಪೊಂಡಾದ ರಾಮನಾಥ ದೇವಸ್ಥಾನದಲ್ಲಿನ ಶ್ರೀವಿದ್ಯಾಧಿರಾಜ ಸಭಾಗೃಹದಲ್ಲಿ ನಡೆಯಲಿದೆ. ಇಂದಿನವರೆಗೆ ನಡೆದಿರುವ 11 ಹಿಂದೂ ಅಧಿವೇಶನಗಳಿಗೆ ಪ್ರತಿವರ್ಷ ಸಿಗುವ ಪ್ರತಿಸ್ಪಂದನ ಹೆಚ್ಚುತ್ತಲೇ ಇದೆ. ಈ ಅಧಿವೇಶನದಿಂದ 25 ರಾಜ್ಯದಿಂದ 1000 ಕಿಂತಲೂ ಹೆಚ್ಚಿನ ಹಿಂದೂ ಸಂಘಟನೆಗಳು ಸಂಘಟಿತವಾಗಿವೆ.
ಈ ಅಧಿವೇಶನದ ವೈಶಿಷ್ಟ್ಯವೆಂದರೆ ನೇಪಾಳ, ಶ್ರೀಲಂಕಾ, ಮಲೇಶಿಯಾ, ಬಾಂಗ್ಲಾ ದೇಶ, ಮತ್ತು ಇತರ ದೇಶದಿಂದಲೂ ಸಂತರು, ಹಿಂದುತ್ವನಿಷ್ಠ ಸಂಘಟನೆಯ ಪ್ರತಿನಿಧಿಗಳು, ವಿಚಾರವಂತರು ಮುಂತಾದವರು ಸಹಭಾಗಿಯಾಗಿದ್ದರು. ಭಾರತವು ಇಂದು ಆರ್ಥಿಕ ಮಹಾಶಕ್ತಿಯಾಗುವ ದೃಷ್ಟಿಯಿಂದ ಮೂರನೆಯ ಸ್ಥಾನದಲ್ಲಿದೆ. ಹೀಗಿರುವಾಗಲೂ ಜಗತ್ತಿನಾದ್ಯಂತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಡಿಮೆಯಾಗದೆ ಹೆಚ್ಚುತ್ತಿದೆ. ಹಿಂದೂ ಧರ್ಮವನ್ನು ” ಡೆಂಗ್ಯೂ”, ‘ಮಲೇರಿಯಾ’, ಇಂತಹ ರೋಗಗಳಿಗೆ ಹೋಲಿಸುವವರು ಅದನ್ನು ಮುಗಿಸುವ ಮಾತನ್ನಾಡುತ್ತಿದ್ದಾರೆ ಪ್ರತಿ ವರ್ಷ ಲಕ್ಷಾಂತರ ಹಿಂದೂಗಳನ್ನು ಮೋಸ ಮಾಡಿ ಮತಾಂತರ ಮಾಡುತ್ತಾರೆ. ಕಲಾಸ್ವಾತಂತ್ರ್ಯದ ಹೆಸರಿನಲ್ಲಿ ಚಲನಚಿತ್ರ, ಧಾರವಾಹಿ, ವೆಬ್ ಸೀರೀಸ್ ಮುಂತಾದ ಮಾಧ್ಯಮದಿಂದ ಹಿಂದೂ ದೇವತೆಗಳ ವಿಡಂಬನೆ ಮಾಡುತ್ತಾರೆ. ಭಾರತ ವಿರೋಧಿ ಚಳವಳಿಯಲಿ, ಕೆನಡಾ ಸಹಿತ ಅನೇಕ ದೇಶಗಳು ತಲೆಯೆತ್ತುತ್ತಿದ್ದು ಹಿಂದೂಗಳ ದೇವಸ್ಥಾನದ ಮೇಲೆ ಪ್ರಯತ್ನ ಪೂರ್ವಕವಾಗಿ ದಾಳಿಗಳು ನಡೆಯುತ್ತಿವೆ. ಇಂತಹ ಎಲ್ಲಾ ಸಮಸ್ಯೆಗಳ ಮೇಲೆ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಇದು ಏಕೈಕ ಉಪಾಯವಾಗಿದೆ.
ಆದರೂ ಸಂವಿಧಾನಿಕ ದೃಷ್ಟಿಯಿಂದ ‘ಭಾರತ ಹಿಂದೂ ರಾಷ್ಟ್ರ ಆಗಬೇಕು’, ಅದಕ್ಕಾಗಿ ವ್ಯಾಪಕ ಪ್ರಯತ್ನಗಳ ದಿಶೆ ನಿರ್ಧರಿಸುವುದು, ಸನಾತನ ಧರ್ಮದ ರಕ್ಷಣೆಗಾಗಿ ವೈಚಾರಿಕ ಮಟ್ಟದಲ್ಲಿ ಪ್ರಯತ್ನ ಮಾಡುವುದು, ದೇವಸ್ಥಾನದ ಸುರಕ್ಷತೆಯ ದೃಷ್ಟಿಯಿಂದ ಉಪಾಯ ಯೋಜನೆ ತೆಗೆಯುವುದು, ದೇವಸ್ಥಾನಗಳನ್ನು ಸರಕಾರದ ಅಧಿಕಾರದಿಂದ ಮುಕ್ತಗೊಳಿಸುವುದಕ್ಕಾಗಿ ಸಂಘಟನೆ ಹೆಚ್ಚಿಸುವುದು ‘ಜಿಹಾದಿ ಭಯೋತ್ಪಾದನೆಯಂತಹ ಅಪಾಯವನ್ನು ಎದುರಿಸಲು ವ್ಯಾಪಕ ಜನಜಾಗೃತಿ ಮಾಡುವುದು. ಈ ಅಧಿವೇಶನದ ಸ್ವರೂಪವಾಗಿದೆ. ಈ ಸಮಾವೇಶಕ್ಕೆ ಸರ್ವರನ್ನು ಹಿಂದೂ ಜನಜಾಗೃತಿ ಸಮಿತಿ ಸ್ವಾಗತಿಸಿದೆ.
1 Comment
ಕರ್ನಾಟಕದಲ್ಲಿ ದಲಿತರಿಗಾಗಿ ಮಿಸಲಾಗಿಟ್ಟ ಸಾವಿರಾರು ಕೋಟಿ ಹಾಗೂ ಹಿಂ ದುಳಿದವರ್ಗದ ಇವಮದಿಂದ 187 ಕೋಟಿ ಹೀಗೆ ಲಪಾತಾಯಿಸಿದ ಸರಕಾರ ದರೊಡೆಕೋರ ಸರ್ಕಾರವಾಗಿದೆ ಗ್ಯಾರಂಟಿ ಯೋಜನೆಗಾಗಿ ಜನರಿಗೆ ಮೋಸ ಮಾಡುತ್ತಿದೆ. ರಾಜ್ಯಲಾಲರು ಇದರಲ್ಲಿ ಹಸ್ತಕ್ಷೇಪ ಮಾಡಬೇಕು.