ರಾಜ್ಯದೆಲ್ಲೆಡೆ ಯುಗಾದಿ ಹಬ್ಬಕ್ಕೆ ಸಜ್ಜು!
– ಯುಗಾದಿ ಆರಂಭಕ್ಕೂ ಮೊದಲೇ ಗಗನಕ್ಕೇರಿದ ಹೂವಿನ ಬೆಲೆ
– ಸಾಲು ಸಾಲು ರಜೆ: ಖಾಸಗಿ ಬಸ್ಗಳ ದರ ಕೇಳಿದ್ರೆ ಸುಸ್ತೋ ಸುಸ್ತು!
– ಹೊಸ ತೊಡಕು ಹಬ್ಬಕ್ಕೂ ಮುನ್ನವೇ ಚಿಕನ್, ಮಟನ್ ಬೆಲೆ ಏರಿಕೆ!
– ಬಟ್ಟೆ, ವಾಹನ, ಚಿನ್ನದಂಗಡಿಗಳಲ್ಲಿ ಆಫರ್ ಆಫರ್
NAMMUR EXPRESS NEWS
ಬೆಂಗಳೂರು: ರಾಜ್ಯದ ಎಲ್ಲೆಡೆ ಯುಗಾದಿ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಅಂಗಡಿಗಳಲ್ಲಿ ಖರೀದಿ ಜೋರಾಗಿದೆ. ಅದರಲ್ಲೂ ವಾರದ ಅಂತ್ಯದಲ್ಲಿ ಹಬ್ಬ ಬಂದಿದ್ದು ಒಂದು ದಿನ ರಜೆ ಹಾಕಿ ಬೆಂಗಳೂರು ಕಡೆಯಿಂದ ಊರಿಗೆ ಹೊರಡುವವರ ಸಂಖ್ಯೆ ಹೆಚ್ಚಿದೆ. ರಾಜ್ಯದ ಪ್ರಮುಖ ದೇವಾಲಯ ಸೇರಿ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗೆ ಸಿದ್ಧತೆಗಳು ನಡೆಯುತ್ತಲೇ ಇದೆ.
ಯುಗಾದಿ ಹಬ್ಬ ಸಂಭ್ರಮಾಚರಣೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೌದು, ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಳವಾಗಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂಗಳ ಪೂರೈಕೆ ಕಡಿಮೆಯಾಗಿದ್ದು, ಹೂವುಗಳ ಬೆಲೆ ದುಬಾರಿಯಾಗಿದೆ. ಇನ್ನೂ ಯುಗಾದಿ ಹಬ್ಬ ಕೆಲವೇ ದಿನಗಳು ಬಾಕಿದ್ದು, ಮತ್ತೊಂದೆಡೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಗ್ರಾಹಕರು ಹೂಗಳ ಬೆಲೆ ಕೇಳಿ ಶಾಕ್ ಆಗುತ್ತಿದ್ದಾರೆ. 2 ಕೆಜಿ ಹೂವು ತೆಗೆದುಕೊಳ್ಳೋವರು. ಒಂದು ಕೆಜಿ ತೆಗೆದುಕೊಳ್ಳುತ್ತಿದ್ದಾರೆ.
ಸಾಲು ಸಾಲು ರಜೆ: ಖಾಸಗಿ ಬಸ್ಗಳ ದರ ಕೇಳಿದ್ರೆ ಸುಸ್ತೋ ಸುಸ್ತು!
ಯುಗಾದಿ ಹಬ್ಬಕ್ಕೆ ಸಾಲು ಸಾಲು ರಜೆ ಬೆಂಗಳೂರಿನಿಂದ ಊರಿಗೆ ಹೊರಟ ಜನರಿಗೆ ಖಾಸಗಿ ಬಸ್ ಗಳಿಂದ ದರ ಏರಿಕೆಯ ಕಹಿ. ಬ್ಯಾಕ್ ಟು ಬ್ಯಾಕ್ ರಜೆ ಹಿನ್ನೆಲೆ ಟ್ರಿಪ್ ಗೂ ಹಲವರಿಂದ ಪ್ಲಾನ್ ಆಗಿದ್ದು ಖಾಸಗಿ ಬಸ್ ನಲ್ಲಿ ಟಿಕೆಟ್ ದರ ದುಪ್ಪಟ್ಟಾಗಿದೆ.
ಚಿಕನ್, ಮಟನ್ ಬೆಲೆ ಏರಿಕೆ!
ಯುಗಾದಿ ಹಬ್ಬದ ಮರುದಿನ ಆಚರಿಸುವ ಹೊಸತೊಡಕು ಹಬ್ಬಕ್ಕೂ ಮುನ್ನವೇ ಮಾಂಸಹಾರಿಗಳಿಗೆ ಬಿಗ್ ಶಾಕ್ ಎದುರಾಗಿದೆ. ದಿನದಿಂದ ದಿನಕ್ಕೆ ಚಿಕನ್, ಮಟನ್ ಬೆಲೆ ಏರಿಕೆಯಾಗುತ್ತಿದೆ. ಹೌದು, ಸದ್ಯ ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಬೆಲೆ ಏರಿಕೆಯಾಗಿದೆ.
ರಾಜ್ಯದ ವಿವಿಧ ಕಡೆ 2000 ಹೆಚ್ಚುವರಿ ಬಸ್!
ಯುಗಾದಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಊರುಗಳಿಗೆ 2000ಕ್ಕೂ ಹೆಚ್ಚು ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಯುಗಾದಿ ಹಬ್ಬ ಹಾಗೂ ಸಾಲು ರಜೆಗಳ ಕಾರಣ ಊರಿಗೆ ತೆರಳುವವರಿಗೆ ಹಾಗೂ ಪ್ರವಾಸ ತೆರಳುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಎಸ್ಆರ್ಟಿಸಿ ಈ ಕ್ರಮಕ್ಕೆ ಮುಂದಾಗಿದೆ. ಕೆಎಸ್ಆರ್ಟಿಸಿ ಸೇರಿ ನಾಲ್ಕು ನಿಗಮಗಳು ವಿಶೇಷ ಬಸ್ಗಳು ಕಾರ್ಯಾಚರಣೆಗೆ ಸಜ್ಜಾಗಿವೆ. ಏ. 9ರಂದು ಮಂಗಳವಾರ ಯುಗಾದಿ ಹಬ್ಬ ಇರಲಿದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಸೋಮವಾರ ಒಂದು ದಿನ ರಜೆ ಮಾಡಿದರೆ 4 ದಿನ ರಜೆ ಸಿಕ್ಕಂತಾಗುತ್ತದೆ. ಮುಂದಿನ ವಾರ, ಏಪ್ರಿಲ್ 11 ರ ಗುರುವಾರ ಮುಸ್ಲಿಮರ ಹಬ್ಬ ರಂಜಾನ್ ಸಹ ಇರಲಿದೆ. ಮತ್ತೆ ದೀರ್ಘ ವಾರಾಂತ್ಯ ರಜೆ ಸಿಗಲಿದೆ. 13 ರಂದು ಎರಡನೇ ಶನಿವಾರ ರಜೆ ಹಾಗೂ14 ರಂದು ಭಾನುವಾರ ರಜೆ ಇದೆ. ಈ ಎಲ್ಲ ಕಾರಣಗಳನ್ನು ಮತ್ತು ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಆರ್ಟಿಸಿ ಹೆಚ್ಚುವರಿ ಬಸ್ ನಿಯೋಜನೆ ಮಾಡಿದೆ.
ಬಟ್ಟೆ, ಚಿನ್ನ, ವಾಹನ ಆಫರ್ ಬೆಲೆ
ರಾಜ್ಯದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಬಟ್ಟೆ, ಚಿನ್ನ, ವಾಹನ, ಇಲೆಕ್ಟ್ರಾನಿಕ್ ವಸ್ತುಗಳ ಮೇಲೆ ಆಫರ್ ಘೋಷಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಎಲ್ಲೆಡೆ ಖರೀದಿ ಕಂಡು ಬರುತ್ತಿದೆ.