ಚಿನ್ನ ಇನ್ನು ಮುಟ್ಟೋಕೂ ಆಗಲ್ಲ!
– ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂಪಾಯಿ?
– ದಿನೇ ದಿನೇ ಏರುತ್ತಿದೆ ಚಿನ್ನದ ದರ!
NAMMUR EXPRESS NEWS
ಚಿನ್ನ ಭಾರತೀಯರು ಅತೀ ಹೆಚ್ಚು ಇಷ್ಟ ಪಡುವ ವಸ್ತು. ಆದರೆ ಈಗ ಚಿನ್ನವನ್ನು ಸಾಮಾನ್ಯ ಜನರು ಮುಟ್ಟದ ಸ್ಥಿತಿ ಬಂದಿದೆ. ಚಿನ್ನದ ಬೆಲೆ ಇದೇ ವರ್ಷ 1 ಲಕ್ಷ ರೂಪಾಯಿ ತಲುಪುವ ಸಾಧ್ಯತೆ ದಟ್ಟವಾಗಿದೆ. ಭಾರತದಲ್ಲಿ ಇದೀಗ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 66,850 ರೂಪಾಯಿ ಇದ್ರೆ, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,930 ರೂಪಾಯಿಗೆ ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ 8,400 ರೂಪಾಯಿ ಇದ್ದರೆ, ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಬರೋಬ್ಬರಿ 66,850 ರೂಪಾಯಿಗೆ ತಲುಪಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗ ರಾಜಕೀಯ ಪರಿಸ್ಥಿತಿ, ಯುದ್ಧ ಹಾಗೂ ಭಾರತದ ಆರ್ಥಿಕತೆ ಕಾರಣಗಳಿಂದ ಚಿನ್ನದ ಬೆಲೆ ಇದೀಗ ಹೆಚ್ಚಾಗುತ್ತಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನಕ್ಕೆ ಬೆಂಗಳೂರು ನಗರದಲ್ಲಿ 66,850 ರೂಪಾಯಿ, ಚೆನ್ನೈನಲ್ಲಿ 67,700 ರೂಪಾಯಿ, ಮುಂಬೈ ನಗರದಲ್ಲಿ 66,850 ರೂಪಾಯಿ, ದೆಹಲಿಯಲ್ಲಿ 67,000 ರೂಪಾಯಿ, ಕೊಲ್ಕತ್ತಾ ನಗರದಲ್ಲಿ 66,850 ರೂ. ಕೇರಳದಲ್ಲಿ 66,850 ರೂಪಾಯಿ ಇದೆ.
ಮದುವೆ ಸೀಸನ್ ಚಿನ್ನ ದುಬಾರಿ!
ರಾಜ್ಯದಲ್ಲಿ ಮದುವೆ ಮತ್ತು ಕಾರ್ಯಕ್ರಮಗಳ ಸೀಜನ್ ಇದು. ಇಲ್ಲಿ ಚಿನ್ನ ಕೊಳ್ಳಲೇ ಬೇಕು. ಆದರೆ ದರ ಏರಿಕೆ ಬರೆ ಜನರನ್ನು ಕಾಡುತ್ತಿದೆ.