ಮದ್ಯಪ್ರಿಯರಿಗೆ ಗುಡ್ ನ್ಯೂಸ್
* ನವೆಂಬರ್ 20ರಂದು ಬಾರ್ ಬಂದ್ ಆಗಲ್ಲ
* ಸಿಎಂ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿ
* ಮುಷ್ಕರ ಹಿಂಪಡೆದ ಬಾರ್ ಮಾಲೀಕರು ನಿರ್ಧಾರ
NAMMUR EXPRESS NEWS
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾರ್ ಮಾಲೀಕರ ಸಂಘ ನ.20ರಂದು ರಾಜ್ಯಾದ್ಯಂತ ಬಾರ್ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಾರ್ ಮಾಲೀಕರ ಸಂಘದ ಪದಾಧಿಕಾರಿಗಳ ಸಂಧಾನ ಸಭೆ ಕರೆಯಲಾಗಿತ್ತು ಈಗ ಸಭೆಯು ಯಶಸ್ವಿಯಾಗಿದ್ದು, ಬಂದ್ ಮಾಡುವ ವಿಚಾರ ಹಿಂಪಡೆಯಲಾಗಿದೆ.
ಮಂಗಳವಾರ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿತ್ತು. ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನವೆಂಬರ್ 20ರ ಬುಧವಾರ ಕರೆ ನೀಡಲಾಗಿದ್ದ ಬಾರ್ ಬಂದ್ ಕರೆ ವಾಪಸ್ ಪಡೆಯಲಾಗಿದೆ. ಇದರಿಂದ ಮದ್ಯಪ್ರಿಯರು ಸಂತಸಗೊಂಡಿದ್ದಾರೆ.