ಗೂಗಲ್ ಟ್ರಾನ್ಸ್ಲೇಟ್ ಅಲ್ಲಿ ಇನ್ಮೇಲೆ ತುಳು ಭಾಷೆ!
– ಕರಾವಳಿಯ ಶ್ರೀಮಂತ ಭಾಷೆ ತುಳು ಈಗ ಜಾಗತಿಕ ಮಾನ್ಯತೆ
– ಗೂಗಲ್ ಮೂಲಕ ತುಳು ಕಲಿಯಬಹುದು..!
NAMMUR EXPRESS NEWS
ಮಂಗಳೂರು: ಕರಾವಳಿಯ ಶ್ರೀಮಂತ ಭಾಷೆ ತುಳು ಈಗ ಜಾಗತಿಕ ಮಾನ್ಯತೆ ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರು ಹೆಚ್ಚಾಗಿ ಗೂಗಲ್ ಮೇಲೆ ಅವಲಂಬಿತರಾಗಿರುವುದು ಸಾಮಾನ್ಯ. ಏನನ್ನಾದರು ಹುಡುಕಲು, ಯಾವುದಾದರೂ ಪದಗಳ ಅರ್ಥ ತಿಳಿಯಲು ಅಥವಾ ಇನ್ನಿತರ ವಿಷಯಗಳಿಗಾಗಿ ಎಲ್ಲರು ಹೆಚ್ಚಾಗಿ ಗೂಗಲ್ ಮೇಲೆಯೇ ಡಿಪೆಂಡ್ ಆಗಿರುತ್ತಾರೆ. ಅದೇ ಗೂಗಲ್ ನಲ್ಲಿ ಇದೀಗ ಕರಾವಳಿಗರ ಮಾತೃಭಾಷೆ ತುಳುವಿನಲ್ಲಿಯೂ ಮಾಡಬಹುದಾಗಿದೆ. ಗೂಗಲ್ ಭಾಷಾಂತರದಲ್ಲಿ ತುಳು ಭಾಷೆಯನ್ನು ಸೇರಿಸಿದೆ. ಈ ಮೂಲಕ ಕರಾವಳಿಗರಿಗೆ ಸಂತಸದ ವಿಚಾರವನ್ನು ಗೂಗಲ್ ನೀಡಿದೆ.
ಮೊದಲೆಲ್ಲ ಇಂಗ್ಲೀಷ್ ನಿಂದ ಕನ್ನಡ, ಹಿಂದಿ ಅಥವಾ ಮಲಯಾಳಂ ಹೀಗೆ ಬೇರೆ ಭಾಷೆಗಳಿಗೆ ಮಾತ್ರ ಟ್ರಾನ್ಸ್ಲೇಟ್ ಮಾಡಬಹುದಾಗಿತ್ತು. ಇದೀಗ ಗೂಗಲ್ ಟ್ರಾಟ್ ನಲ್ಲಿ ತುಳುಭಾಷೆ ಕೂಡ ಇದ್ದು, ತುಳುವರಿಗೆ ಸಂತಸದ ವಿಚಾರವೊಂದು ಸಿಕ್ಕಿದಂತಾಗಿದೆ ಎಂದು ತಾರಾನಾಥ್ ಗಟ್ಟಿ, (ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ) ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ಮುಂದೆ ಮಕ್ಕಳಿಗೂ ಇಂಗ್ಲಿಷ್ ನಲ್ಲಿ ಬರುವ ಕೆಲ ಶಬ್ದಗಳು ಹಾಗೂ ವಿಚಾರಗಳಿಗೆ ತುಳುವಿನಲ್ಲಿ ಏನು ಹೇಳುತ್ತಾರೆ ಎಂಬುದನ್ನು ತಿಳಿಯಲು ಗೂಗಲ್ ಅಲ್ಲಿ ತುಳುಭಾಷೆ ಇರುವುದು ಸುಲಭವಾಗಲಿದೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿ, “ಗೂಗಲ್ ಟ್ರಾನ್ಸೆಟ್ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವ. ಇದು ತುಳುವರು ಸಂಭ್ರಮಪಡುವ ವಿಚಾರವಾಗಿದೆ. ಗೂಗಲ್ ಟ್ರಾನ್ಸೆಟ್ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ಮಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿಮಾಡಿಕೊಳ್ಳುತ್ತದೆ. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ” ಎಂದು ತಿಳಿಸಿದ್ದಾರೆ.