ಟಾಪ್ ನ್ಯೂಸ್ ಕರ್ನಾಟಕ
ಹಿಟ್ ಅಂಡ್ ರನ್: ಮೂವರು ವಿದ್ಯಾರ್ಥಿಗಳು ಬಲಿ!
– ಕಾರವಾರ:ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲು!
– ದಾವಣಗೆರೆ: ರೈತ ಕರೆಂಟ್ ಶಾಕ್ನಿಂದ ಸಾವು!
– ಬಾಗಲಕೋಟೆ: ಹೊಂಡದಲ್ಲಿ ಮುಳುಗಿ ಯುವಕ ಜೀವ ಬಿಟ್ಟ
– ಬೆಂಗಳೂರು: ಆನ್ಲೈನ್ ಜೂಜಾಟ,ಸಾಲಕ್ಕಾಗಿ ಮನೆಯಲ್ಲೇ ಕದ್ದ!
NAMMUR EXPRESS NEWS
ಕಾರವಾರ: ಪ್ರವಾಸಕ್ಕೆ ಬಂದು ಸಮುದ್ರಪಾಲಾಗಿದ್ದ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಎರಡು ದಿನಗಳ ಬಳಿಕ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣದ ಮುಖ್ಯ ಕಡಲತೀರಕ್ಕೆ ಶವ ತೇಲಿ ಬಂದಿದೆ. ಕೋಲಾರದ ಶ್ರೀನಿವಾಸಪುರ ಮೂಲದ ವಿನಯ.ಎಸ್.ವಿ(22) ಮೃತ ವಿದ್ಯಾರ್ಥಿ.
ಬೆಂಗಳೂರಿನಿಂದ ಹಿಲ್ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳ ತಂಡ ಪ್ರವಾಸಕ್ಕೆಂದು ಬಂದಿತ್ತು. ಬಾವಿಕೊಡ್ಲ ಕಡಲತೀರದಲ್ಲಿ ಈಜುತ್ತಿದ್ದ ವೇಳೆ ಅಲೆಗಳಿಗೆ ಸಿಕ್ಕಿ ಅಸ್ವಸ್ಥಗೊಂಡಿದ್ದ ಐವು ವಿದ್ಯಾರ್ಥಿಗಳ್ನ ರಕ್ಷಿಸಲಾಗಿತ್ತು. ಈ ವೇಳೆ ನೀರಲ್ಲಿ ವಿನಯ್ ಕೊಚ್ಚಿಹೋಗಿದ್ದ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಗೋಕರ್ಣ ಪ್ರಾಥಮಿಕ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೀರು ಹಾಯಿಸಲು ಹೋಗಿದ್ದ ರೈತ ಕರೆಂಟ್ ಶಾಕ್ನಿಂದ ಸಾವು
ದಾವಣಗೆರೆ: ಭತ್ತದ ಗದ್ದೆಗೆ ನೀರು ಹಾಯಿಸಲು ಹೋಗಿದ್ದ ರೈತ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣೆಬೆಳಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಲಿಂಗಪ್ಪ (32) ಮೃತಪಟ್ಟ ದುರ್ದೈವಿ. ಶಿವಲಿಂಗಪ್ಪನವರು ಜಮೀನಿಗೆ ನೀರು ಹಾಯಿಸಲು ಹೋದ ವೇಳೆ ಅವಘಡ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹೊಂಡದಲ್ಲಿ ಮುಳುಗಿ ಯುವಕ ಸಾವು
ಬಾಗಲಕೋಟೆ:ಹೊಲಕ್ಕೆ ನೀರುಣಿಸಲು ಹೋದಾಗ ಹೊಂಡದಲ್ಲಿ ಮುಳುಗಿ ಯುವಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ.
ಹೊಂಡದಲ್ಲಿ ಮೋಟರ್ ಪೈಪ್ ಅಳವಡಿಸಲು ಹೋದಾಗ ಕಾಲು ಜಾರಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಬಾಗಲಕೋಟೆಯ ಸುಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ. ಮಲ್ಲಪ್ಪ ಕಿತ್ತಲಿ(25) ಮೃತ ದುರ್ದೈವಿ. ಬಾದಾಮಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ. ಶವ ಹೊರ ತೆಗೆಯಲು ಸ್ಥಳೀಯರಿಂದ ಶೋಧ ಕಾರ್ಯ ನಡೆದಿದೆ.
ಬೆಂಗಳೂರು:ಆನ್ಲೈನ್ ಜೂಜಾಟ,ಸಾಲಕ್ಕಾಗಿ ಮನೆಯಲ್ಲೇ ಕದ್ದ
ಬೆಂಗಳೂರು: ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಿನ್ನ ಕದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆದಿತ್ಯ ಎಂಬಾತನಿಂದ 100 ಗ್ರಾಂ ಬೆಳ್ಳಿ, 102 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಆದಿತ್ಯ ಆನ್ಲೈನ್ ಬೆಟ್ಟಿಂಗ್ನಲ್ಲಿ ಜೂಜಾಡಿ ಹಣ ಸೋತಿದ್ದ. ಸಾಲ ತೀರಿಸಲು ತನ್ನ ಮನೆಯಲ್ಲೇ ಕಳವು ಮಾಡಿದ್ದು, ಆದಿತ್ಯಾ ಕುಟುಂಬಸ್ಥರು ಮೊದಲ ಮಗನ ಮದುವೆಗೆ ಚಿನ್ನ ಖರೀದಿಸಿ ಇಟ್ಟಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತ ಆದಿತ್ಯ ಅಣ್ಣನಿಗೆ ಖರೀದಿಸಿದ್ದ ಚಿನ್ನವನ್ನು ಕ್ದು ಬಳಿಕ ಆದಿತ್ಯ ತಯಿ ಚಿನ್ನ ಕಳ್ಳತನ ಸಂಬಂಧ ದೂರು ನೀಡಿದ್ದರು. ಪೊಲೀಸರ ವಿಚಾರಣೆ ವೇಳೆ ಮಗನೇ ಮನೆಗಳವು ಮಾಡಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು:ಹಿಟ್ ಆ್ಯಂಡ್ ರನ್: ಮೂವರು ವಿದ್ಯಾರ್ಥಿಗಳು ಬಲಿ!
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದ ಏರ್ಪೋರ್ಟ್ ರಸ್ತೆಯಲ್ಲಿ ತಡರಾತ್ರಿ ಹಿಟ್ ಆ್ಯಂಡ್ ರನ್ಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ರೋಹಿತ್ (22), ಸುಚಿತ್ (22) ಹಾಗೂ ಹರ್ಷಾ (22) ಮೃತ ವಿದ್ಯಾರ್ಥಿಗಳು.
ಜಿಕೆವಿಕೆಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈ ಮೂವರು ರಾತ್ರಿ ಲಾಂಗ್ ಡ್ರೈವ್ಗೆಂದು ಬೈಕ್ನಲ್ಲಿ ಬಂದಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಗುದ್ದಿದ ರಭಸಕ್ಕೆ ಹಾರಿ ಬಿದ್ದ ಮೂವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಅಪಘಾತಕ್ಕೆ ಹೆದ್ದಾರಿಯಲ್ಲೆ ಮೃತದೇಹಗಳು ನಜ್ಜು ಗುಜ್ಜಾಗಿದ್ದವು. ಮಧ್ಯರಾತ್ರಿ ಈ ಭೀಕರ ಅಪಘಾತ ನಡೆದಿದೆ. ಚಾಲಕನನ್ನು ಬಂಧಿಸಲಾಗಿದೆ.
ಆಟೋ ಸೇರಿ ಐದು ಬೈಕ್ಗಳು ಸಂಪೂರ್ಣ ಸ್ಫೋಟ
ಬೆಂಗಳೂರು: ಬೆಂಗಳೂರಿನ ವಿವೇಕನಗರ ಬಳಿ ಇರುವ ಈಜಿಪುರದಲ್ಲಿ ಸಿಲಿಂಡರ್ ಸ್ಫೋಟದಿಂದ ಆಟೋ ಸೇರಿ ಐದು ಬೈಕ್ಗಳು ಸಂಪೂರ್ಣ ಸುಟ್ಟು ಹೋಗಿದೆ. ಪಕ್ಕದಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ವೈಯರ್ಗಳು ಕೂಡ ಸುಟ್ಟು ಭಸ್ಮವಾಗಿವೆ. ವಿವೇಕನಗರ ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಸೆ. 12ರಂದು ರಾತ್ರಿ ಈ ಘಟನೆ ನಡೆದಿದೆ.
ಕಬಾಬ್ ಅಂಗಡಿಯಲ್ಲಿ ಸಿಲಿಂಡರ್ ಅಳವಡಿಸುವ ಸಂದರ್ಭದಲ್ಲಿ ಬೆಂಕಿ ಹತ್ತಿಕೊಂಡಿದ್ದು,ಇದರಿಂದ ಗಾಬರಿಯಾದ ಕಬಾಬ್ ಅಂಗಡಿ ಸಿಬ್ಬಂದಿ, ಏಕಾಏಕಿ ಬೆಂಕಿ ಹತ್ತಿಕೊಂಡಿರುವ ಸಿಲಿಂಡರ್ ಅನ್ನು ಮುಂಭಾಗದ ರಸ್ತೆಗೆ ಎಸೆದುಬಿಟ್ಟಿದ್ದರು. ಆ ಸಿಲಿಂಡರ್ ನೇರವಾಗಿ ಆಟೋ ಒಳಗೆ ಬಿದ್ದರಿಂದ ಏಕಾಏಕಿ ಆಟೋಗೆ ಬೆಂಕಿ ಹತ್ತಿಕೊಂಡಿತ್ತು. ಬೆಂಕಿ ಹೆಚ್ಚಾಗುತ್ತಲೇ ಅಕ್ಕಪಕ್ಕದ ಐದು ದ್ವಿಚಕ್ರವಾಹನಗಳಿಗೆ ಆವರಿಸಿ ವಾಹನಗಳು ೆಂಕಿಗಾಹತಿ ಆದ ಘಟನೆ ನಡೆದಿದೆ.