ಮಳೆ ಆಯ್ತು, ಈ ವರ್ಷ ಭಾರೀ ಚಳಿ!
– ಇನ್ನು ಎರಡು ತಿಂಗಳು ಮಳೆ ಕಡಿಮೆ ಆಗಲ್ಲ
– ಬಿಸಿಲು… ಮಳೆ… ಚಳಿ.. ವಿಚಿತ್ರ ವಾತಾವರಣ
NAMMUR EXPRESS NEWS
ನವ ದೆಹಲಿ: ಮುಂಗಾರು ಮಳೆಯ ನಂತರ ತೀವ್ರ ಚಳಿಗಾಲದ ಮುನ್ಸೂಚನೆ, ದೀರ್ಘಾವಧಿಯ ಶೀತ ಅಲೆಯ ವಾತಾವರಣ ಇರಲಿದೆ. ಅಕ್ಟೋಬರ್-ಡಿಸೆಂಬರ್ ನಲ್ಲಿ ಸಾಮಾನ್ಯ ಸರಾಸರಿಗಿಂತ ಹೆಚ್ಚಿನ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನೈಋತ್ಯ ಮುಂಗಾರು ಮಳೆಯ ನಂತರ ತೀವ್ರವಾದ ಚಳಿ ವಾತಾವರಣ ಇರುವ ಸಾಧ್ಯತೆಗಳ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಳಿಗಾಲದಲ್ಲಿ ದೀರ್ಘಾವಧಿಯ ಶೀತ ಅಲೆಯ ವಾತಾವರಣ ಇರಲಿದೆ ಎಂದು ಐಎಂಡಿ ಹೇಳಿದೆ. ನವೆಂಬರ್- ಡಿಸೆಂಬರ್ ಅವಧಿಯಲ್ಲಿ ಹಿಂದೆಂದಿಗಿಂತಲೂ ಕನಿಷ್ಠ ತಾಪಮಾನ ಉಂಟಾಗಲಿದ್ದು, ಇದಕ್ಕೆ ಲಾ ನಿನಾ ಎಫೆಕ್ಟ್ ಕಾರಣವಾಗಲಿದೆ ಎಂದು ವಿಶ್ಲೇಷಿಸಿದೆ. ಮಾನ್ಸೂನ್ ನಂತರದ ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ದಕ್ಷಿಣ ಪೆನಿನ್ಸುಲರ್ ಭಾರತ, ಮಧ್ಯ ಭಾರತ ಮತ್ತು ಈಶಾನ್ಯ ಭಾರತದ ಹಲವು ಪ್ರದೇಶಗಳಲ್ಲಿ ಸಾಮಾನ್ಯ ಸರಾಸರಿಗಿಂತ ಹೆಚ್ಚಿನ ಮಳೆಯನ್ನು IMD ಊಹಿಸಿದೆ. ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಹೆಚ್ಚಾಗಿ ಅಂದರೆ ದೀರ್ಘಾವಧಿಯ ಸರಾಸರಿಯ 112% ಕ್ಕಿಂತ ಇದು ಹೆಚ್ಚಾಗಿದೆ. ಆದಾಗ್ಯೂ, ವಾಯುವ್ಯದ ಹೆಚ್ಚಿನ ಭಾಗಗಳು, ಈಶಾನ್ಯದ ಕೆಲವು ಭಾಗಗಳು ಮತ್ತು ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ನಲ್ಲಿ, ಈಶಾನ್ಯ ಮತ್ತು ವಾಯುವ್ಯ ಭಾರತದ ಕೆಲವು ಭಾಗಗಳು ಮತ್ತು ದಕ್ಷಿಣ ಪೆನಿನ್ಸುಲಾದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಹೆಚ್ಚಿನ ಭಾಗಗಳು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಮಳೆ ಕಾರಣ ಕಂಗೆಟ್ಟಿರುವ ರೈತರು ಮತ್ತಷ್ಟು ತೊಂದರೆ ಅನುಭವಿಸುವ ಸಾಧ್ಯತೆ ಇದೆ