ಕರ್ನಾಟಕ ಟಾಪ್ 3 ನ್ಯೂಸ್..!
ಮಣ್ಣಿನಡಿ ವರ್ಷದ ಬಾಲಕಿಯ ಮೃತದೇಹ ಪತ್ತೆ!
– ಅಂಕೋಲಾದಲ್ಲಿ ನಡೆದ ದುರಂತ:
– ಪತ್ನಿ,ಅತ್ತೆ, ಮಾವನನಿಗೆ ರಾಡ್ನಿಂದ ಹೊಡೆದ ಕೊಲೆ!
ದರ್ಶನ್ & ಗ್ಯಾಂಗ್ಗೆ ಮತ್ತೆ 14 ದಿನ ಜೈಲು!
NAMMUR EXPRESS NEWS
ಕಾರವಾರ: ಅಂಕೋಲ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೂರು ಕ್ಯಾಂಟೀನ್ ಮಾಲೀಕನ ಐದು ವರ್ಷದ ಮಗಳ ಮೃತದೇಹ ಪತ್ತೆಯಾಗಿದೆ. ಮೃತ ಬಾಲಕಿಯನ್ನು ಆವಂತಿಕ (5) ಎಂದು ಗುರುತಿಸಲಾಗಿದೆ. ಗಂಗಾವಳಿ ನದಿಯಲ್ಲಿ ತೇಲಿ ಹೋಗಿ ಗೋಕರ್ಣ ಬ್ರಿಡ್ಜ್ ಬಳಿ ಆವಂತಿಕ ಮೃತದೇಹ ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿದು 20ಕ್ಕೂ ಹೆಚ್ಚು ಜನರು ಮೃತ ಆಗಿರುವ ಬಗ್ಗೆ ಶಂಕೆ ವ್ಯಕ್ತ ಆಗುವುದರ ಜೊತೆಗೆ ಇನ್ನಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಘಟನಾ ಸ್ಥಳಕ್ಕೆ ತಜ್ಞರು ಭೇಟಿ ನೀಡಲಿದ್ದಾರೆ. ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ತಜ್ಞ ಸಂಜೀವ್ ಎಂಬವರು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಗುಡ್ಡ ಕುಸಿತ ಆಗಿರುವ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದ್ದರಿಂದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಭೂ ಕುಸಿತದ ಬಗ್ಗೆ ಅಧ್ಯಯನ ಮಾಡಲಿದೆ.
ಪತ್ನಿ,ಅತ್ತೆ ಹಾಗೂ ಮಾವನನಿಗೆ ರಾಡ್ನಿಂದ ಹೊಡೆದ ಕೊಲೆ!
ಯಾದಗಿರಿ: ಅತ್ತೆ-ಮಾವ ಹಾಗೂ ಪತ್ನಿಯನ್ನು ಪಾಪಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಯಾದಗಿರಿ ತಾಲೂಕಿನ ಸೈದಾಪುರ ಬಳಿ ಘಟನೆ ನಡೆದಿದೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಅನ್ನಪೂರ್ಣ (25), ಕವಿತಾ (45), ಬಸವರಾಜಪ್ಪ (52) ಕೊಲೆಯಾದವರು.
ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣಳನನ್ನು ನವೀನ್ ಮದುವೆಯಾಗಿದ್ದ. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇತ್ತು. ಆದರೆ ಪತಿ ನವೀನ್ ಕಿರುಕುಳ ತಾಳಲಾರದೆ ಅನ್ನಪೂರ್ಣ ತವರು ಮನೆಗೆ ವಾಪಸ್ ಆಗಿದ್ದಳು. ಕಳೆದ ಒಂದು ವರ್ಷದ ಹಿಂದೆ ಅನ್ನಪೂರ್ಣ ತಂದೆ-ತಾಯಿ ಜತೆಗೆ ಇದ್ದಳು. ಬುಧವಾರ ಮತ್ತೆ ಜತೆಗೆ ಇರೋಣಾ ಬಾ ಎಂದು ಅನ್ನಪೂರ್ಣಳನ್ನು ನವೀನ್ ಕರೆದಿದ್ದ. ನ್ಯಾಯಾ ಪಂಚಾಯತಿ ಬಳಿಕ ಮತ್ತೆ ಈ ದಂಪತಿ ಜೊತೆಗಿರಲು ಮುಂದಾಗಿದ್ದರು. ಇತ್ತ ಪೋಷಕರು ಮಗಳನ್ನು ಗಂಡನ ಮನೆಗೆ ಬಿಡಲು ಬಂದಿದ್ದರು. ರಾಜೀ ಪಂಚಾಯತಿ ಬಳಿಕ ಅತ್ತೆ- ಮಾವನನ್ನು ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಿಡಲು ಹೋದಾಗ, ಕಬ್ಬಿಣದ ರಾಡ್ ಹಾಗೂ ಚಾಕುನಿಂದ ಇರಿದು ನವೀನ್ ಕೊಲೆ ಮಾಡಿದ್ದಾರೆ. ಕೊಲೆ ಮಾಡಿ ವಡಗೇರಾ ತಾಲೂಕಿನ ಜೋಳದಡಗಿ ಬಳಿ ಶವ ಬಿಸಾಡಿದ್ದಾನೆ. ಸದ್ಯ ಅನ್ನಪೂರ್ಣಳ ಶವ ಪತ್ತೆಯಾಗಿದ್ದು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮತ್ತಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ದರ್ಶನ್ & ಗ್ಯಾಂಗ್ಗೆ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ!
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಮನೆ ಊಟ, ಮಲಗಲು ಹಾಸಿಗೆ, ಓದಲು ಕೆಲವು ಪುಸ್ತಕಗಳನ್ನು ಮನೆಯಿಂದ ತರಿಸಿಕೊಳ್ಳಲು ಅವಕಾಶ ಕೊಡಬೇಕೆಂದು ಹೈಕೋರ್ಟ್ಗೆ ಜುಲೈ 19 ರಂದು ರಿಟ್ ಅರ್ಜಿ ಸಲ್ಲಿಸಿದ್ದರು.
ಅಂದರೆ ಜುಲೈ 18ಕ್ಕೆ ಮುಂದೂಡಿತ್ತು. ಆದರೆ ಈಗ ರಿಟ್ ಅರ್ಜಿಯ ವಿಚಾರಣೆಯನ್ನು ಜುಲೈ 19 ಅಂದರೆ ನಾಳೆಗೆ ಮುಂದೂಡಲಾಗಿದೆ. ಹಾಗೇ ಆಗಸ್ಟ್ 1 ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿಶ್ವನಾಥ ಸಿ ಗೌಡರ್ ಆದೇಶವಾಗಿದೆ.